ಬೆಂಗಳೂರು(ಜೂ.05): ರಾಜ್ಯ ಸರ್ಕಾರ ಲಾಕ್‌ಡೌನ್‌ ನಿಯಮವನ್ನು ಇನ್ನಷ್ಟುಸಡಿಲಿಕೆ ಮಾಡಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳು ಹಾಗೂ ಆಟೋ, ಟ್ಯಾಕ್ಸಿ, ಕ್ಯಾಬ್‌ಗಳು ಇನ್ನು ಮುಂದೆ ಪ್ರತಿ ದಿನ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗಿನ ಅವಧಿಯಲ್ಲೂ ಕೂಡ ಸಂಚರಿಸಲು ಅನುಮತಿ ನೀಡಿದೆ.

ಪ್ರಯಾಣಿಕರು ಕೂಡ ತಾವು ಬಂದ ಬಸ್‌ ಟಿಕೆಟ್‌ ಆಧಾರದ ಮೇಲೆ ಬಸ್‌ನಿಲ್ದಾಣದಿಂದ ಮನೆಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ದಿನದ 24 ಗಂಟೆಯೂ ರಾಜ್ಯ ಸಾರಿಗೆಯ ಎಲ್ಲಾ ಬಸ್ಸುಗಳು ಹಾಗೂ ಆಟೋ, ಟ್ಯಾಕ್ಸಿ, ಕ್ಯಾಬ್‌ಗಳು ಹಾಗೂ ಪ್ರಯಾಣಿಕರು ಸಂಚರಿಸಲು ಅನುಮತಿ ಸಿಕ್ಕಂತಾಗಿದೆ.

ಕೊಡಗು ಮಹಾಮಳೆ ಸಂತ್ರಸ್ತರಿಗೆ ಕೊನೆಗೂ ಮನೆ ಹಂಚಿಕೆ

ಈ ಸಂಬಂಧ ಗುರುವಾರ ಆದೇಶ ಹೊರಡಿಸಿರುವ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್‌, ಕಫä್ರ್ಯ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಸೇರಿದಂತೆ ವಾಯುವ್ಯ ಮತ್ತು ಈಶಾನ್ಯ ಸಾರಿಗೆ ನಿಗಮ, ಬಿಎಂಟಿಸಿ ಬಸ್‌ ಹಾಗೂ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಈ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ತಾವು ಹೊಂದಿರುವ ಬಸ್‌ ಟಿಕೆಟ್‌, ಪಾಸುಗಳ ಆಧಾರದ ಮೇಲೆ ನಿಲ್ದಾಣಗಳಿಗೆ ಹೋಗುವ, ನಿಲ್ದಾಣಗಳಿಂದ ಮನೆಗಳಿಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆನೆ ಕೊಂದ ದುರುಳರ ವಿರುದ್ಧ ಕೇರಳ MP ರಾಹುಲ್ ಮೌನ; ಕಿಡಿ ಕಾರಿದ ಮೇನಕಾ ಗಾಂಧಿ!

ಕಫä್ರ್ಯ ಅವಧಿಯಲ್ಲಿ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್‌ಗಳು ಪ್ರಯಾಣಿಕರನ್ನು ಬಸ್‌ ನಿಲ್ದಾಣ ಅಥವಾ ಪಿಕ್‌ಅಪ್‌ ಸ್ಥಳಗಳಿಂದ ಕರೆದೊಯ್ಯಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.