ಸಾವಿನ ಸಂಖ್ಯೆ ಸತತ 10 ದಿನ ಇಳಿದರೆ ಕೊರೋನಾ ಕ್ಷೀಣ!

ಸಾವಿನ ಸಂಖ್ಯೆ ಸತತ 10 ದಿನ ಇಳಿದರೆ ಕೊರೋನಾ ಗರಿಷ್ಠಕ್ಕೆ ತಲುಪಿದೆ ಎಂದರ್ಥ| ದೇಶದಲ್ಲಿ ಕೊರೋನಾ ಯಾವಾಗ ಗರಿಷ್ಠಕ್ಕೆ ತಲುಪುತ್ತೆ ಹೇಳಲಾಗದು| ಖ್ಯಾತ ಸಾರ್ವಜನಿಕ ಆರೋಗ್ಯ ತಜ್ಞ ಕೆ. ಶ್ರೀನಾಥ್‌ ರೆಡ್ಡಿ ಹೇಳಿಕೆ

Govt must focus on controlling Covid deaths not just recovery rate Public health expert

ಬೆಂಗಳೂರು(ಜು.01): ದೇಶದಲ್ಲಿ ಕೊರೋನಾ ಹರಡುವಿಕೆ ಯಾವಾಗ ಗರಿಷ್ಠಕ್ಕೆ ತಲುಪುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸತತ 10 ದಿನಗಳ ಕಾಲ ಕೊರೋನಾ ಸಂಬಂಧಿ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಾ ಬಂದರೆ ಆಗ ಗರಿಷ್ಠಕ್ಕೆ ತಲುಪಿದೆ ಎಂದು ಹೇಳಬಹುದು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸಾರ್ವಜನಿಕ ಆರೋಗ್ಯ ತಜ್ಞ ಪ್ರೊ.ಕೆ.ಶ್ರೀನಾಥ್‌ ರೆಡ್ಡಿ ಹೇಳಿದ್ದಾರೆ.

ಉಲ್ಟಾ ಹೊಡೆದ ಪತಂಜಲಿ: ಕೊರೋನಾ ಔಷಧ ಕಂಡುಹಿಡಿದಿದ್ದಾಗಿ ಹೇಳೇ ಇಲ್ಲ!

ಸದ್ಯ ಟೆಸ್ಟಿಂಗ್‌ ಹೆಚ್ಚಳವಾಗಿರುವುದರಿಂದ ಮತ್ತು ಜನರ ಸಂಚಾರ ಹಾಗೂ ಬೆರೆಯುವಿಕೆ ಹೆಚ್ಚಿರುವುದರಿಂದ ಕೊರೋನಾ ಕೇಸುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದ ದೊಡ್ಡ ದೊಡ್ಡ ನಗರ ಹಾಗೂ ಸುತ್ತಲಿನ ಜಿಲ್ಲೆಗಳಲ್ಲೇ ಹೆಚ್ಚಿನ ಸೋಂಕಿತರು ಕಂಡುಬರುತ್ತಿದ್ದಾರೆ. ಇದು ಇನ್ನಿತರ ಊರುಗಳಿಗೆ ಹರಡದಂತೆ ತಡೆಯಬೇಕು. ದಿನೇದಿನೇ ಕೊರೋನಾ ಪರೀಕ್ಷೆಯ ಸಂಖ್ಯೆ ಹೆಚ್ಚುತ್ತಿರುವುದರಿಂದ ಹಾಗೂ ಪರೀಕ್ಷೆಯ ಮಾನದಂಡಗಳು ಬದಲಾಗುತ್ತಿರುವುದರಿಂದ ಯಾವಾಗ ದೇಶದಲ್ಲಿ ಇದು ಗರಿಷ್ಠಕ್ಕೆ ತಲುಪಿ ಇಳಿಮುಖವಾಗಲು ಆರಂಭವಾಗುತ್ತದೆ ಎಂದು ಹೇಳುವುದು ಕಷ್ಟ. ನಿತ್ಯ ಸಾವಿನ ಸಂಖ್ಯೆ ಇಳಿಕೆಯಾಗುತ್ತಾ ಬಂದರೆ ಮಾತ್ರ ಗರಿಷ್ಠಕ್ಕೆ ತಲುಪಿದೆ ಎಂದು ಹೇಳಬಹುದು ಎಂದಿದ್ದಾರೆ.

ಕೊರೋನಾ ಟೆಸ್ಟ್‌ನಲ್ಲಿ ರಾಜ್ಯಕ್ಕೆ 18ನೇ ಸ್ಥಾನ: ನಡೆಸುತ್ತಿರುವ ಪರೀಕ್ಷೆ ಬಹಳ ಕಡಿಮೆ!

ಬಿಹಾರ, ಛತ್ತೀಸ್‌ಗಢ, ಜಾರ್ಖಂಡ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸೋಂಕಿತರ ಸಂಖ್ಯೆ ಬಹಳ ಕಡಿಮೆಯಿದೆ. ಅಲ್ಲಿ ಇನ್ನಾವತ್ತೋ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ಇಡೀ ದೇಶದಲ್ಲಿ ಏಕಕಾಲಕ್ಕೆ ಕೊರೋನಾ ಸೋಂಕು ಗರಿಷ್ಠಕ್ಕೆ ಹೋಗಿ ಇಳಿಮುಖವಾಗುವುದಿಲ್ಲ. ಒಂದೊಂದು ಕಡೆ ಒಂದೊಂದು ರೀತಿಯ ಬೆಳವಣಿಗೆಯಾಗಬಹುದು. ಹೀಗಾಗಿ ಇದನ್ನು ದೇಶದಲ್ಲಿ ‘ಒಂದು ಸಾಂಕ್ರಾಮಿಕ ರೋಗ’ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದೂ ಹೇಳಿದ್ದಾರೆ. ಡಾ| ಶ್ರೀಕಾಂತ್‌ ಈ ಹಿಂದೆ ದೆಹಲಿಯ ಪ್ರಸಿದ್ಧ ಏಮ್ಸ್‌ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿದ್ದರು. ಸದ್ಯ ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ ಆಫ್‌ ಇಂಡಿಯಾ ಎಂಬ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಹಲವಾರು ವಿದೇಶಿ ವಿವಿಗಳಲ್ಲಿ ಪಾಠ ಮಾಡುತ್ತಾರೆ.

Latest Videos
Follow Us:
Download App:
  • android
  • ios