ಡೆಹ್ರಾಡೂನ್(ಜು.01): ಕೊರೋನಾಗೆ ಔಷಧ ಕಂಡುಹಿಡಿದಿದ್ದಾಗಿ ಹೇಳಿಕೊಂಡಿದ್ದ ಬಾಬಾ ರಾಮದೇವ್‌ ನೇತೃತ್ವದ ಪತಂಜಲಿ ಯೋಗಪೀಠ, ಈಗ ತನ್ನ ಹೇಳಿಕೆಯಿಂದ ಉಲ್ಟಾಹೊಡೆದಿದೆ. ತಾನು ಕೊರೋನಾಗೆ ಔಷಧ ಕಂಡು ಹಿಡಿದಿದ್ದಾಗಿ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಕೊರೋನಾಕ್ಕೆ ಪತಂಜಲಿ ಔಷಧಿ; ಬಾಬಾ ರಾಮ್‌ ದೇವ್ ಶಾಕಿಂಗ್ ಸ್ಪಷ್ಟನೆ!

ಉತ್ತರಾಖಂಡ ಸರ್ಕಾರ ನೀಡಿದ ನೋಟಿಸ್‌ಗೆ ಉತ್ತರಿಸಿರುವ ಅದು, ‘ಪತಂಜಲಿ ಕಂಪನಿ ‘ಕೊರೋನಾ ಕಿಟ್‌’ ಹೆಸರಿನ ಯಾವ ಔಷಧಗಳನ್ನೂ ಬಿಡುಗಡೆ ಮಾಡಿಲ್ಲ. ದಿವ್ಯ ಶ್ವಾಸಾರಿ ವಟಿ, ದಿವ್ಯ ಕೊರೋನಿಲ್‌ ಮಾತ್ರೆ ಹಾಗೂ ದಿವ್ಯ ಅನು ತೈಲ ಹೆಸರಿನ 3 ಔಷಧಗಳನ್ನು ಒಂದು ಪ್ಯಾಕ್‌ ಮಾಡಿ ಬಿಡುಗಡೆ ಮಾಡಿದ್ದೆವು. ಆದರೆ ಯಾವತ್ತೂ ಇವನ್ನು ಕೊರೋನಾ ಕಿಟ್‌ ಎಂಬ ಯಾವುದೇ ಬ್ರಾಂಡ್‌ನ ಉತ್ಪನ್ನ ಮಾರಿಲ್ಲ. ಆ ರೀತಿ ಪ್ರಚಾರ ಮಾಡಿಯೂ ಇಲ್ಲ. ನಾವು ಆ ಔಷಧಗಳ ಪ್ರಯೋಗ ಮತ್ತು ಅದರ ಯಶಸ್ವಿ ಟ್ರಯಲ್‌ ನಡೆದ ಬಗ್ಗೆ ಹೇಳಿಕೊಂಡಿದ್ದೆವು’ ಎಂದು ಹೇಳಿದೆ.

‘ಕೊರೋನಾ ಔಷಧ’ ಕಂಡುಹಿಡಿದ ಬಾಬಾ ರಾಮ್‌ದೇವ್ ಸೇರಿ ಐವರ ಮೇಲೆ ಕ್ರಿಮಿನಲ್‌ ಕೇಸ್‌!

280 ಕೊರೋನಾ ರೋಗಿಗಳ ಮೇಲೆ ಈ ಕೊರೋನಾಗೆ ಸಂಬಂಧಿಸಿದ ಔಷಧ ಪ್ರಯೋಗಿಸಿದ್ದು, ಶೇ.100ರಷ್ಟುಯಶಸ್ವಿಯಾಗಿದೆ ಎಂದು ಬಾಬಾ ರಾಮದೇವ್‌ ಕಳೆದ ಮಂಗಳವಾರ ಹೇಳಿಕೊಂಡಿದ್ದರು. ಆದರೆ ಕೆಮ್ಮಿನ ಔಷಧ ಎಂದು ತನ್ನ ಬಳಿ ಅನುಮತಿ ಪಡೆದು, ಅದನ್ನು ಕೊರೋನಾ ಔಷಧ ಎಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳಲಾಗಿದೆ ಎಂದು ಆರೋಪಿಸಿದ್ದ ಉತ್ತರಾಖಂಡ ಸರ್ಕಾರವು ಪತಂಜಲಿಗೆ ನೋಟಿಸ್‌ ಜಾರಿ ಮಾಡಿತ್ತು.