Asianet Suvarna News Asianet Suvarna News

ಕೋವಿಶೀಲ್ಡ್‌ ಲಸಿಕೆ 1ನೇ, 2ನೇ ಡೋಸ್‌ ಅಂತರ ಕಡಿತ ?

  • ಕೋವಿಶೀಲ್ಡ್‌ ಕೊರೋನಾ ಲಸಿಕೆಯ ಮೊದಲ ಮತ್ತು 2ನೇ ಡೋಸ್‌ ಮಧ್ಯೆ ಇರುವ ಅಂತರ ತಗ್ಗಿಸುವ ಸಾಧ್ಯತೆ
  • ಅಂತರ ತಗ್ಗಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳ ಮಾಹಿತಿ
Govt Likely to Reduce Covishield Dose Gap  snr
Author
Bengaluru, First Published Aug 27, 2021, 6:35 AM IST

ನವದೆಹಲಿ (ಆ.27): ಕೋವಿಶೀಲ್ಡ್‌ ಕೊರೋನಾ ಲಸಿಕೆಯ ಮೊದಲ ಮತ್ತು 2ನೇ ಡೋಸ್‌ ಮಧ್ಯೆ ಇರುವ ಅಂತರ ತಗ್ಗಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 ‘ಎರಡೂ ಡೋಸ್‌ಗಳ ನಡುವಿನ ಅಂತರವನ್ನು ಕಡಿತಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ದಾಖಲೆಯ 1.95 ಲಕ್ಷ ಪರೀಕ್ಷೆ: 4.98 ಲಕ್ಷ ಜನಕ್ಕೆ ಲಸಿಕೆ

ಸದ್ಯ ವಯಸ್ಕರಿಗೆ ಕೋವಿಶೀಲ್ಡ್‌ ಲಸಿಕೆಯ ಮೊದಲ ಮತ್ತು 2ನೇ ಡೋಸ್‌ ಮಧ್ಯೆ 12-16 ವಾರಗಳ ಅಂತರವಿದೆ. ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾದಾಗ ಅದು 4-6 ವಾರಗಳಾಗಿತ್ತು. ಅನಂತರ 4-8 ವಾರ ಮತ್ತು 12-16 ವಾರಗಳವರೆಗೆ ಹೆಚ್ಚಿಸಲಾಗಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Follow Us:
Download App:
  • android
  • ios