Asianet Suvarna News Asianet Suvarna News

ದಾಖಲೆಯ 1.95 ಲಕ್ಷ ಪರೀಕ್ಷೆ: 4.98 ಲಕ್ಷ ಜನಕ್ಕೆ ಲಸಿಕೆ

*  ಪಾಸಿಟಿವಿಟಿ ಶೇ.0.62ಕ್ಕೆ ಇಳಿಕೆ
*  ರಾಜ್ಯದಲ್ಲಿ ನಿನ್ನೆ 1224 ಜನರಿಗೆ ಸೋಂಕು, 22 ಜನರ ಸಾವು
*  ದಕ್ಷಿಣ ಕನ್ನಡದಲ್ಲಿ ಆರು ಮಂದಿ ಕೋವಿಡ್‌ ಸೋಂಕಿತರ ಮರಣ
 

1.95 lakh Covid Test of Record in Karnataka on August 25th grg
Author
Bengaluru, First Published Aug 26, 2021, 7:40 AM IST
  • Facebook
  • Twitter
  • Whatsapp

ಬೆಂಗಳೂರು(ಆ.26): ರಾಜ್ಯದಲ್ಲಿ ಸತತ ಎರಡನೇ ದಿನ ದಾಖಲೆಯ ಕೋವಿಡ್‌ ಪರೀಕ್ಷೆ ನಡೆದಿದೆ. ಪರೀಕ್ಷೆಯ ಪ್ರಮಾಣ ಹೆಚ್ಚುತ್ತಿದ್ದಂತೆ ಪಾಸಿಟಿವಿಟಿ ದರ ಕೂಡ ಕುಸಿಯುತ್ತಿದೆ. ಬುಧವಾರ 1,224 ಮಂದಿಯಲ್ಲಿ ಕೋವಿಡ್‌ ಸೋಂಕು ಕಂಡು ಬಂದಿದ್ದು 22 ಮಂದಿ ಮರಣವನ್ನಪ್ಪಿದ್ದಾರೆ. 1,668 ಮಂದಿ ಗುಣ ಹೊಂದಿದ್ದಾರೆ. ಮಂಗಳವಾರ 1.90 ಲಕ್ಷ ಕೋವಿಡ್‌ ಪರೀಕ್ಷೆ ನಡೆದು ದಾಖಲೆ ನಿರ್ಮಾಣವಾಗಿತ್ತು. ಮರುದಿನವೇ ಈ ದಾಖಲೆ ಧೂಳಿಪಟಗೊಂಡಿದ್ದು 1.95 ಲಕ್ಷ ಪರೀಕ್ಷೆ ನಡೆದಿದೆ. ಪಾಸಿಟಿವಿಟಿ ದರ ಕೂಡ ಶೇ. 0.62ಕ್ಕೆ ಕುಸಿದಿದೆ. ಮಾರ್ಚ್‌ 2ರ ಬಳಿಕದ ಕನಿಷ್ಠ ಪಾಸಿಟಿವಿಟಿ ದರ ಬುಧವಾರ ದಾಖಲಾಗಿದೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಬುಧವಾರ 3.36 ಲಕ್ಷ ಮಂದಿ ಕೋವಿಡ್‌-19 ಲಸಿಕೆ ಪಡೆದಿದ್ದಾರೆ. 2.09 ಲಕ್ಷ ಮಂದಿ ಮೊದಲ ಡೋಸ್‌ ಮತ್ತು 1.27 ಲಕ್ಷ ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ಈ ಮಧ್ಯೆ ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈವರೆಗೆ 1 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ವಿತರಣೆಯಾಗಿದೆ.

ಬೆಂಗಳೂರು ನಗರದಲ್ಲಿ 309, ದಕ್ಷಿಣ ಕನ್ನಡದಲ್ಲಿ 217, ಉಡುಪಿ 130, ಮೈಸೂರು 102 ಮತ್ತು ಹಾಸನದಲ್ಲಿ 95 ಪ್ರಕರಣ ಪತ್ತೆಯಾಗಿದೆ. ಬೀದರ್‌ ಮತ್ತು ಗದಗದಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಹತ್ತು ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ದಾಖಲಾಗಿದೆ.

2 ಡೋಸ್‌ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ

ದಕ್ಷಿಣ ಕನ್ನಡದಲ್ಲಿ ಆರು ಮಂದಿ ಕೋವಿಡ್‌ ಸೋಂಕಿತರು ಮರಣವನ್ನಪ್ಪಿದ್ದಾರೆ. ಬೆಂಗಳೂರು ನಗರ ಮತ್ತು ಉಡುಪಿ ತಲಾ 3, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ತಲಾ 2, ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಾಮರಾಜನಗರ, ಹಾಸನ ಮತ್ತು ಮೈಸೂರಿನಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,318ಕ್ಕೆ ಕುಸಿದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29.42 ಲಕ್ಷ ಮಂದಿಯಲ್ಲಿ ಕೋವಿಡ್‌ ಸೋಂಕು ಧೃಢ ಪಟ್ಟಿದ್ದು 28.85 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 37,206 ಮಂದಿ ಮರಣವನ್ನಪ್ಪಿದ್ದಾರೆ. 26 ಸೋಂಕಿತರು ಅನ್ಯ ಕಾರಣದಿಂದ ಮರಣವನ್ನಪ್ಪಿದ್ದಾರೆ. ಒಟ್ಟು 4.24 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 3.82 ಕೋಟಿ ಡೋಸ್‌ ಲಸಿಕೆ ವಿತರಣೆ ನಡೆದಿದ್ದು 2.91 ಕೋಟಿ ಮಂದಿ ಮೊದಲ ಡೋಸ್‌ ಮತ್ತು 91.10 ಲಕ್ಷ ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಬುಧವಾರ ಆರೋಗ್ಯ ಕಾರ್ಯಕರ್ತರು 18 ಮಂದಿ, ಮುಂಚೂಣಿ ಕಾರ್ಯಕರ್ತರು 80 ಮಂದಿ, 18 ರಿಂದ 44 ವರ್ಷದೊಳಗಿನ 1.59 ಲಕ್ಷ ಮಂದಿ, 45 ವರ್ಷ ಮೇಲ್ಪಟ್ಟ50 ಸಾವಿರ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು 1,559 ಮಂದಿ, ಮುಂಚೂಣಿ ಕಾರ್ಯಕರ್ತರು 5,960 ಮಂದಿ, 18 ರಿಂದ 44 ವರ್ಷದೊಳಗಿನ 64,185 ಮಂದಿ, 45 ವರ್ಷ ಮೇಲ್ಪಟ್ಟ 55,784 ಮಂದಿ ಎರಡನೇ ಡೋಸ್‌ ಕೋವಿಡ್‌ ಲಸಿಕೆ ಪಡೆದಿದ್ದಾರೆ.
 

Follow Us:
Download App:
  • android
  • ios