Asianet Suvarna News Asianet Suvarna News

ಒಂದೇ ಕರೆ, ದೇಶದ ಯಾವುದೇ ಮೂಲೆಯಲ್ಲಿದ್ದರೂ ಹಿರಿಯ ನಾಗರಿಕರಿಗೆ ಸಿಗಲಿದೆ ಸಹಾಯ!

* ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹೊಸ ಸೌಲಭ್ಯ

* ಹಿರಿಯ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಮಾರ್ಗ

* ದೇಶದ ಯಾವುದೇ ಮೂಲೆಯಲ್ಲಿದ್ದರೂ ಹಿರಿಯ ನಾಗರಿಕರಿಗೆ ಸಿಗಲಿದೆ ಸಹಾಯ

Govt launches Pan India helpline for senior citizens pod
Author
Bangalore, First Published Sep 28, 2021, 5:21 PM IST

ನವದೆಹಲಿ(ಸೆ.28):ಹಿರಿಯ ನಾಗರಿಕರಿಗೆ(senior citizens) ಸಹಾಯ ಮಾಡಲು ಸಹಾಯವಾಣಿ ಆರಂಭಿಸಲಾಗಿದೆ. ಅಖಿಲ ಭಾರತ ಮಟ್ಟದ ಈ ಟೋಲ್ ಫ್ರೀ ಸಹಾಯವಾಣಿಯ(Helpline) ಮೂಲಕ ಹಿರಿಯ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. 'ಎಲ್ಡರ್ ಲೈನ್'(Elder Line) ನಿಂದ ಹಿಡಿದು ಪಿಂಚಣಿ ಸಮಸ್ಯೆಗಳು, ಹಿರಿಯರ ಕಾನೂನು ಸಮಸ್ಯೆಗಳ ಕುರಿತು ಉಚಿತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಇದು ಅವರಿಗೆ ಯಾರಾದರೂ ದುರ್ವ್ಯವಹಾರ ನಡೆಸಿದಾಗ ಅಥವಾ ಮೋಸ ಮಾಡಿದಾಗ ಭಾವನಾತ್ಮಕವಾಗಿ ಸಹಾಯ ಮಾಡುತ್ತದೆ.

ಸಹಾಯಕ್ಕಾಗಿ ಈ ಸಹಾಯವಾಣಿಗೆ ಸಂಪರ್ಕಿಸಿ

ಹಿರಿಯ ನಾಗರಿಕರಿಗಾಗಿ ಆರಂಭಿಸಿರುವ ಈ ಸಹಾಯವಾಣಿಗೆ, ದೇಶದ ಯಾವುದೇ ಮೂಲೆಯಿಂದ ಕರೆ ಮಾಡಿಯೂ ಸಹಾಯ ಪಡೆಯಬಹುದು. ಅಖಿಲ ಭಾರತ ಟೋಲ್-ಫ್ರೀ ಸಹಾಯವಾಣಿ -14567 ಗೆ ಕರೆ ಮಾಡುವ ಮೂಲಕ ಹಿರಿಯರು ತಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಕೇಳಬಹುದು.

2050 ರ ವೇಳೆಗೆ, ದೇಶದ ಜನಸಂಖ್ಯೆಯ ಶೇ. 20 ಜನರು ಹಿರಿಯ ನಾಗರಿಕರಾಗಿರುತ್ತಾರೆ

ಒಂದು ವರದಿಯ ಪ್ರಕಾರ, ಮುಂದಿನ 2050 ರ ವೇಳೆಗೆ, ದೇಶದ ಹಿರಿಯ ನಾಗರಿಕರ ಜನಸಂಖ್ಯೆಯು ಸುಮಾರು ಶೇ. 20 ರಷ್ಟು ಇರುತ್ತದೆ. ಅಂದರೆ, ಈ ಜನಸಂಖ್ಯೆಯು 300 ಮಿಲಿಯನ್ ಗಿಂತ ಹೆಚ್ಚು ಇರುವ ಸಾಧ್ಯತೆಯಿದೆ. ದೇಶದ ಹಿರಿಯ ನಾಗರಿಕರ ಈ ಜನಸಂಖ್ಯೆಯು ಅನೇಕ ದೇಶಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ. ಈ ವಯಸ್ಸಿನ ಜನರು ವಿವಿಧ ಮಾನಸಿಕ, ಭಾವನಾತ್ಮಕ, ಆರ್ಥಿಕ, ಕಾನೂನು ಮತ್ತು ದೈಹಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೊರೋನಾ ಸೋಂಕು ಈ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಟಾಟಾ ಟ್ರಸ್ಟ್‌ ಕ್ರಮದ ಫಲವಾಗಿ ಎಲ್ಡರ್ ಲೈನ್

ಎಲ್ಡರ್ ಲೈನ್ ಟಾಟಾ ಟ್ರಸ್ಟ್ ಇಟ್ಟ ಹೆಜ್ಜೆಯ ಫಲಿತಾಂಶವಾಗಿದೆ. ಟಾಟಾ ಟ್ರಸ್ಟ್‌ 2017 ರಲ್ಲಿ ವಯಸ್ಸಾದವರಿಗಾಗಿ ಈ ಸಹಾಯವಾಣಿಯನ್ನು ತೆಲಂಗಾಣ ಸರ್ಕಾರದ ಸಹಯೋಗದೊಂದಿಗೆ ಹೈದರಾಬಾದ್‌ನ ವಿಜಯ ವಾಹಿನಿ ಚಾರಿಟಬಲ್ ಫೌಂಡೇಶನ್ ಮೂಲಕ ಆರಂಭಿಸಿತು. ಅಲ್ಲಿಂದ ಈವರೆಗೆ 17 ರಾಜ್ಯಗಳು ತಮ್ಮದೇ ಆದ ಎಲ್ಡರ್ ಲೈನ್ ಅನ್ನು ತೆರೆದಿದ್ದು, ಇದನ್ನು ಟಾಟಾ ಟ್ರಸ್ಟ್‌ಗಳ ಸಹಯೋಗದೊಂದಿಗೆ ನಿರ್ವಹಿಸಲಾಗುತ್ತಿದೆ.

ನಾಲ್ಕು ತಿಂಗಳಲ್ಲಿ ಎರಡು ಲಕ್ಷ ಕರೆಗಳು

ಹಿರಿಯ ಸಹಾಯವಾಣಿಗೆ ಕಳೆದ 4 ತಿಂಗಳಲ್ಲಿ 2 ಲಕ್ಷ ಕರೆಗಳು ಬಂದಿವೆ. 30,000 ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಸಹಾಯ ಮಾಡಲಾಗಿದೆ. ಇವುಗಳಲ್ಲಿ, ಸುಮಾರು ಶೇ. 40ರಷ್ಟು ಕರೆಗಳು ಲಸಿಕೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅಗತ್ಯ ಮಾರ್ಗದರ್ಶನ ಪಡೆಯಲು ಮತ್ತು ಸುಮಾರು ಶೇ 23 ರಷ್ಟು ಕರೆಗಳು ಪಿಂಚಣಿಗೆ ಸಂಬಂಧಿಸಿವೆ. ಇನ್ನೊಂದು ಪ್ರಕರಣದಲ್ಲಿ ಪಿಂಚಣಿ ಸಿಗದೆ ಈ ಸಹಾಯವಾಣಿಗೆ ಕರೆ ಮಾಡಿದ್ದರು ಹಾಗೂ ಎಲ್ಡರ್ ಲೈನ್ ತಂಡದಿಂದ ಸಹಾಯ ಕೋರಿದ್ದರು. ತಂಡವು ಸಂಬಂಧಪಟ್ಟ ಪಿಂಚಣಿ ಅಧಿಕಾರಿಯನ್ನು ಸಂಪರ್ಕಿಸಿತು. ಹಿರಿಯ ನಾಗರಿಕರ ಪಿಂಚಣಿಯನ್ನು ತಕ್ಷಣವೇ ಅವರ ಖಾತೆಗೆ ವರ್ಗಾಯಿಸಲಾಯಿತು.

Follow Us:
Download App:
  • android
  • ios