ಮತ ಪಟ್ಟಿ ಜೊತೆ ಆಧಾರ್ ಲಿಂಕ್ ಮಾಡಲು ಸರ್ಕಾರ ಚಿಂತನೆ!
ಮತದಾರರ ಪಟ್ಟಿಗೆ ಆಧಾರ್ ಜೋಡಣೆಗೆ ಸರ್ಕಾರ ಚಿಂತನೆ| ಲೋಕಸಭೆಯಲ್ಲಿ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ
ನವದೆಹಲಿ(ಮಾ.18): ಒಬ್ಬನೇ ವ್ಯಕ್ತಿ ಬೇರೆ ಬೇರೆ ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಮತದಾರರ ಪಟ್ಟಿಯನ್ನು ಆಧಾರ್ ವ್ಯವಸ್ಥೆಯ ಜೊತೆ ಜೋಡಿಸುವ ಚುನಾವಣಾ ಆಯೋಗ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.
ಲಸಿಕೆ ಫಲಾನುಭವಿಗಳ ಪತ್ತೆಗೆ ಮತದಾರರ ಪಟ್ಟಿ ಬಳಕೆ!
ಈ ಸಂಬಂಧ ಲಿಖಿತ ಉತ್ತರ ನೀಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮತದಾರರ ಹಸರು ಪುನರಾವರ್ತನೆ ಆಗುವುದನ್ನು ತಡೆಯುವ ಉದ್ದೇಶದಿಂದ ಆಧಾರರ್ ವ್ಯವಸ್ಥೆಯ ಜೊತೆಗೆ ಮತದಾರರ ಪಟ್ಟಿಯನ್ನು ಸಂಯೋಜಿಸುವ ಕುರಿತು ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿದೆ. ಈ ವಿಷಯವನ್ನು ಸರ್ಕಾರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬೇರೆಯವರ ಸೈಟ್ ತೋರಿಸಿ 2 ಕೋಟಿ ವಂಚಿಸಿದ ಉದ್ಯಮಿ
ಇದೇ ವೇಳೆ ವೋಟರ್ ಐಡಿಯನ್ನು ಆಧಾರ್ ಜೊತೆ ಸಂಯೋಜಿಸುವ ಚುನಾವಣಾ ಆಯೋಗದ ಪ್ರಸ್ತಾವನೆ ಈಗ ಯಾವ ಹಂತದಲ್ಲಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮತದಾರರ ಪಟ್ಟಿಯ ದತ್ತಾಂಶಗಳ ಸುರಕ್ಷತೆ ಮತ್ತು ಭದ್ರತೆಗೆ ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.