ದೇಶದ ಭದ್ರತೆ, ಸಾರ್ವಭೌಮತಗೆ ಅಪಾಯ ತರಬಲ್ಲ ಸಾಧ್ಯತೆ ಹೊಂದಿರುವ ಚೀನಾ ಮೂಲದ 59 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿರ್ಭಂಧಿಸಿದೆ. ಗೃಹ ಸಚಿವಾಲಯದ ಶಿಫಾರಸು ಅನ್ವಯ, ಮಾಹಿತಿ ತಂತ್ರಜ್ಞಾನ ಇಲಾಖೆಯು ಶಿಸ್ತುಕ್ರಮ ಕೈಗೊಂಡಿದೆ.
ನವದೆಹಲಿ (ಫೆ.15): ದೇಶದ ಭದ್ರತೆ, ಸಾರ್ವಭೌಮತಗೆ ಅಪಾಯ ತರಬಲ್ಲ ಸಾಧ್ಯತೆ ಹೊಂದಿರುವ ಚೀನಾ ಮೂಲದ 54 ಆ್ಯಪ್‌ಗಳನ್ನು (Chinese App) ಕೇಂದ್ರ ಸರ್ಕಾರ (Central Government) ನಿರ್ಬಂಧಿಸಿದೆ. ಗೃಹ ಸಚಿವಾಲಯದ ಶಿಫಾರಸು ಅನ್ವಯ, ಮಾಹಿತಿ ತಂತ್ರಜ್ಞಾನ ಇಲಾಖೆಯು ಶಿಸ್ತು ಕ್ರಮ ಕೈಗೊಂಡಿದೆ. ಇದಕ್ಕೂ ಮುನ್ನ ಕೂಡಾ ಇದೇ ಕಾರಣಗಳಿಗಾಗಿ ಚೀನಾದ 267 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.
ಹಾಲಿ ನಿರ್ಬಂಧಕ್ಕೆ ಒಳಪಟ್ಟಿರುವ ಆ್ಯಪ್‌ಗಳು ಬಳಕೆದಾರರ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ದುರ್ಬಳಕೆ ಮಾಡುವುದರ ಜೊತೆಗೆ ಮತ್ತೊಂದು ದೇಶದ ಸರ್ವರ್‌ಗಳಿಗೆ ರವಾನಿಸುವ ಚಟುವಟಿಕೆ ನಡೆಸುತ್ತಿದ್ದವು. ಈ ಪ್ರಕ್ರಿಯೆ ವಿದೇಶವೊಂದಕ್ಕೆ ಖಾಸಗಿ ವ್ಯಕ್ತಿಗಳ ಮಾಹಿತಿ ಸಂಗ್ರಹ, ವಿಶ್ಲೇಷಣೆ, ಬಳಕೆಗೆ ಅವಕಾಶ ಮಾಡಿಕೊಡುತ್ತದೆ. ಇದು ದೇಶದ ಸಾರ್ವಭೌಮತೆಗೆ, ದೇಶದ ಏಕತೆಗೆ, ಭದ್ರತೆಗೆ ಅಪಾಯ ತರುವ ಸಾಧ್ಯತೆ ಇರುವ ಕಾರಣ ಇವುಗಳನ್ನ ನಿಷೇಧಿಸುವಂತೆ ಗೃಹ ಸಚಿವಾಲಯ ಶಿಫಾರಸು ಮಾಡಿತ್ತು ಎನ್ನಲಾಗಿದೆ. ಜೊತೆಗೆ ಕೆಲ ಆ್ಯಪ್‌ಗಳು ಈ ಹಿಂದೆ ನಿಷೇಧಿಸಿದ ಆ್ಯಪ್‌ಗಳ ನಕಲು ಮಾದರಿ ಕೂಡಾ ಆಗಿದ್ದವು.
ಯಾವ್ಯಾವುಗಳ ಮೇಲೆ ನಿರ್ಬಂಧ?: ಟೆನ್ಸೆಂಟ್ ಕ್ಸೇವಿಯರ್, ನೈಸ್ ವಿಡಿಯೋ ಬೈಡು, ವಿವಾ ವಿಡಿಯೋ ಎಡಿಟರ್, ಬ್ಯೂಟಿ ಕ್ಯಾಮೆರಾ, ಸ್ವೀಟ್ ಸೆಲ್ಫಿ ಎಚ್‌ಡಿ, ರೈಸ್ ಆಫ್ ಕಿಂಗ್‌ಡಮ್, ಲಾಸ್ಟ್ ಕ್ರುಸೇಡ್, ವಿವಾ ವಿಡಿಯೋ ಎಡಿಟರ್, ಆ್ಯಸ್ಟ್ರಾಕ್ರಾಫ್ಟ್, ಫ್ಯಾನ್ಸಿಯು ಪ್ರೊ, ಮೂನ್ ಚಾಟ್ ಮೊದಲಾದವುಗಳು ಸೇರಿವೆ.
ಆಫ್ಘನ್‌ನ 75 ಲಕ್ಷ ಕೋಟಿ ಖನಿಜದ ಮೇಲೆ ಚೀನಾ ಕಣ್ಣು?: ತಾಲಿಬಾನ್ ಬೆಂಬಲದ ರಹಸ್ಯ!
ಯಾವ ಉದ್ದೇಶದ ಆ್ಯಪ್‌ಗಳಿವು?: ಈ ಆ್ಯಪ್‌ಗಳು ಮ್ಯೂಸಿಕ್, ಕ್ಯಾಮರಾ, ಗೇಮ್, ಕ್ಯುಆರ್ ಕೋಡ್ ಸ್ಕ್ಯಾನಿಂಗ್, ವಿಡಿಯೋ ಚಾಟಿಂಗ್- ಮೊದಲಾದ ಉದ್ದೇಶಕ್ಕೆ ಬಳಕೆ ಆಗುತ್ತಿದ್ದವು.
ಈ ಹಿಂದಿನ ನಿಷೇಧ: 2020ರ ಜೂ.29ರಂದು 59, 2020ರ ಆ.10ರಂದು 47, 2020ರ ಸೆ.1ರಂದು 118, 2020ರ ನ.19ರಂದು 43 ಆ್ಯಪ್‌ಗಳನ್ನು ಇದೇ ಕಾರಣಗಳಿಗಾಗಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.
5 ಲಕ್ಷ ಜನಕ್ಕೆ ‘ಚೀನಿ ಆ್ಯಪ್’ 300 ಕೋಟಿ ದೋಖಾ: ಪಟಾಫಟ್ ಸಾಲ ನೀಡಿ ಅದಕ್ಕೆ ದುಬಾರಿ ಬಡ್ಡಿ ವಿಧಿಸಿ ಭಾರತೀಯರನ್ನು ವಂಚಿಸುತ್ತಿದ್ದ ಚೀನೀಯರು, ಇದೀಗ ಹಣ ದ್ವಿಗುಣದ ಆಮಿಷ ಒಡ್ಡಿ 5 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ 300 ಕೋಟಿ ರು.ಗೂ ಹೆಚ್ಚಿನ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ದೆಹಲಿ, ಗುರುಗ್ರಾಮ, ಡೆಹ್ರಾಡೂನ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ 12 ಜನರನ್ನು ಬಂಧಿಸಲಾಗಿದೆ. ಅಲ್ಲದೆ ಪ್ರಕರಣದ ಕುರಿತು ಇನ್ನಷ್ಟುತನಿಖೆ ನಡೆಸುವ ನಿಟ್ಟಿನಲ್ಲಿ ದೆಹಲಿ ಮತ್ತು ಉತ್ತರಾಖಂಡ ಪೊಲೀಸರು ಸಿಬಿಐ, ಇಂಟೆಲಿಜೆನ್ಸ್ ಬ್ಯೂರೋ, ಜಾರಿ ನಿರ್ದೇಶನಾಲಯದ ನೆರವು ಕೋರಿದ್ದಾರೆ. ಹೀಗಾಗಿ ತನಿಖೆ ಇನ್ನಷ್ಟುವಿಸ್ತೃತವಾದರೆ ಇನ್ನಷ್ಟುಜನರಿಗೆ ವಂಚನೆಯಾಗಿರುವ ವಿಷಯ ಬೆಳಕಿಗೆ ಬರುವ ನಿರೀಕ್ಷೆ ಇದೆ.
ಏನಿದು ಪ್ರಕರಣ?: ಚೀನಾ ಮೂಲದ ವ್ಯಕ್ತಿಗಳು ಭಾರತದಲ್ಲಿ ಕಮಿಷನ್ ಆಧಾರದಲ್ಲಿ ಏಜೆಂಟ್‌ಗಳ ನೇಮಕ ಮಾಡಿಕೊಳ್ಳುತ್ತಿದ್ದರು. ಈ ಏಜೆಂಟ್‌ಗಳು ಯೂಟ್ಯೂಬ್, ವಾಟ್ಸಾಪ್, ಟೆಲಿಗ್ರಾಂನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಎಸ್ಸೆಮ್ಮೆಸ್ ಮೂಲಕ ಈ ಆ್ಯಪ್‌ಗಳ ಪ್ರಚಾರ ನಡೆಸುತ್ತಿದ್ದರು. ಠೇವಡಿ ಇರಿಸಲೆಂದೇ ಪವರ್ ಬ್ಯಾಂಕ್, ಈಜಿ ಪ್ಲ್ಯಾನ್, ಸನ್‌ಫ್ಯಾಕ್ಟರಿ ಹೆಸರಲ್ಲಿ ಗೂಗಲ್ ಸ್ಟೋರ್‌ನಲ್ಲಿ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಈ ಆ್ಯಪ್‌ನಲ್ಲಿ ಹಣ ಇಟ್ಟರೆ 24-35 ದಿನಗಳಲ್ಲಿ ಹಣ ದ್ವಿಗುಣದ ಆಫರ್ ನೀಡಲಾಗುತ್ತಿತ್ತು.
ಮತ್ತೊಂದಿಷ್ಟು ಆಪ್‌ಗಳಿಗೆ ಈಗ ಕೇಂದ್ರ ಸರ್ಕಾರದ ಲಗಾಮು
ಈ ವೇಳೆ ಹಣ ದ್ವಿಗುಣದ ಆಸೆಗೆ ಬಿದ್ದ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಹಣ ಠೇವಣಿ ಇಡುತ್ತಿದ್ದರು. ಕನಿಷ್ಠ 300 ರು.ನಿಂದ ಗರಿಷ್ಠ 10 ಲಕ್ಷ ರು.ವರೆಗೆ ಠೇವಣಿ ಇಡುವ ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಗಂಟೆ ಮತ್ತು ದಿನಗಳ ಲೆಕ್ಕದಲ್ಲಿ ಠೇವಣಿ ಇಟ್ಟವರ ಆನ್‌ಲೈನ್ ಖಾತೆಗೆ ಹಣ ಜಮೆ ಆಗುತ್ತಿತ್ತು. ಆರಂಭದಲ್ಲಿ ಜನರ ವಿಶ್ವಾಸಗಳಿಸಲು ಗಂಟೆ ಲೆಕ್ಕದಲ್ಲಿ ಶೇ.5ರಿಂದ ಶೇ.10ರಷ್ಟುಬಡ್ಡಿ ಹಣ ಜಮೆ ಮಾಡಲಾಗುತ್ತಿತ್ತು. ಹೀಗೆ ಹಣ ಪಡೆದವರು ಮಲ್ಟಿಲೆವೆಲ್ ಮಾರ್ಕೆಂಟಿಂಗ್‌ನಲ್ಲಿ ಮಾಡುವಂತೆ ತಮ್ಮ ಪರಿಚಯದವರನ್ನೂ ಠೇವಣಿ ಇಡಲು ಆಹ್ವಾನಿಸುತ್ತಿದ್ದರು. ಹೀಗೆ ಆರಂಭದಲ್ಲಿ ಹಣ ನೀಡಿದ ಬಳಿಕ ಖಾತೆ ಬ್ಲಾಕ್ ಮಾಡಿ ಅವರಿಗೆ ವಂಚನೆ ಮಾಡಲಾಗುತ್ತಿತ್ತು.
