ನವದೆಹಲಿ(ಏ.16): ಕೊರೋನಾ ಪ್ರಕರಣ ದಿಢೀರ್ ಏರಿಕೆಯಿಂದ ಇದೀಗ ದೇಶದಲ್ಲಿ ಮತ್ತೆ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಲಾಕ್‌ಡೌನ್ ಇಲ್ಲದೆ ಕೊರೋನಾ ನಿಯಂತ್ರಿಸಲು ಸರ್ಕಾರ ಹೆಣಗಾಡುತ್ತಿದೆ. ಇದರ ನಡುವೆ ಲಸಿಕೆ ಅಭಾವ ಕೂಡ ಎದ್ದು ಕಾಣುತ್ತಿದೆ. ಹೀಗಾಗಿ ಆತ್ಮನಿರ್ಭರ್ ಭಾರತ್ 3.0 ಕೋವಿಡ್ ಸುರಕ್ಷಾ ಮಿಶನ್ ಅಡಿಯಲ್ಲಿ ಸ್ಥಳೀಯ ಕೊರೋನಾ ಲಸಿಕೆ ಉತ್ಪಾದನೆ ವೇಗ ಹೆಚ್ಚಿಸಲು ಕೇಂದ್ರ ಮುಂದಾಗಿದೆ.

'ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್‌ ಸುರಕ್ಷಿತ, ರೋಗ ನಿರೋಧಕ ಶಕ್ತಿ ಸೃಷ್ಟಿಸುತ್ತೆ, ಅಡ್ಡ ಪರಿಣಾಮ ಇಲ್ಲ

ಸ್ಥಳೀಯ ಲಸಿಕೆ ಉತ್ಪಾದನೆ ವೇಗ ವರ್ಧಿಸಲು  ಕೋವಿಡ್ ಸುರಕ್ಷಾ ಮಿಷನ್ ಅಡಿಯಲ್ಲಿ ಭಾರತ ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚಿನ ಹಣಕಾಸಿನ ಅನುದಾನ ನೀಡಲಿದೆ. ಇದರಿಂದ ಸ್ಥಳೀಯವಾಗಿ ಆಭಿವೃದ್ಧಿ ಪಡಿಸಿರುವ ಕೋವಾಕ್ಸಿನ್ ಕೊರೋನಾ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಮೇ-ಜೂನ್ ತಿಂಗಳಿಗೆ ದುಪ್ಪಟ್ಟಾಗಲಿದೆ. ಜುಲೈ ಹಾಗೂ ಆಗಸ್ಟ್ ವೇಳೆಗೆ ಲಸಿಕೆ ಉತ್ಪಾದನೆ ಪ್ರಮಾಣ 6 ರಿಂದ 7 ಪಟ್ಟು ಹೆಚ್ಚಾಗಲಿದೆ. 

ಏಪ್ರಿಲ್‌ನಲ್ಲಿ 1 ಕೋಟಿ ಲಸಿಕೆ ಉತ್ಪಾದನೆಯಾಗುತ್ತಿದ್ದ ಪ್ರಮಾಣ ಜುಲೈ ಹಾಗೂ ಆಗಸ್ಟ್ ವೇಳೆಗೆ 6-7 ಕೋಟಿ ಲಸಿಕೆ ಉತ್ಪಾದನೆಯಾಗಲಿದೆ. ಇನ್ನು ಸೆಪ್ಟೆಂಬರ್ 2021 ರ ವೇಳೆಗೆ ಇದು ತಿಂಗಳಿಗೆ ಸುಮಾರು 10 ಕೋಟಿ ಪ್ರಮಾಣವನ್ನು ತಲುಪುವ ನಿರೀಕ್ಷೆಯಿದೆ.

ಬ್ರಿಟನ್‌ ವೈರಸ್‌ ವಿರುದ್ಧವೂ ಕೋವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿ: ಅಧ್ಯಯನ

ಏಪ್ರಿಲ್ ಮೊದಲ ವಾರದಲ್ಲಿ ಎರಡು ತಂಡಗಳು ಲಸಿಕೆ ಉತ್ಪಾದನೆ ಘಟನೆಗಳಿಗೆ ಭೇಟಿ ನೀಡಿ ಉತ್ಪಾದನೆ ಹೆಚ್ಚಿಸುವ ಕುರಿತು ಮಹತ್ವದ ಚರ್ಚೆ ನಡೆಸಿದೆ. ಈ ಯೋಜನೆ ಅಡಿಯಲ್ಲಿ ಭಾರತ್ ಬಯೋಟೆಕ್ ಲಿಮಿಡೆಟ್ ಸೇರಿದಂತೆ ಸ್ಥಳೀಯ ಲಸಿಕೆ ಉತ್ಪದಾನ ಘಟಕಗಳ ಸಾಮರ್ಥ್ಯ ಹಾಗೂ ಮೂಲ ಸೌಕರ್ಯ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಸರ್ಕಾರ ಮುಂದಾಗಿದೆ.