Asianet Suvarna News Asianet Suvarna News

ನಾಲ್ಕು ಮಕ್ಕಳನ್ನು ಹೆತ್ತು, ಲಿಂಗ ಸಮಾನತೆ ಮೆರೆದ 21 ವರ್ಷದ ಮಹಿಳೆ

ನಾಲ್ಕೂ ಮಕ್ಕಳನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಯಿಯ ಆರೋಗ್ಯ ಸಹ ಕ್ಷೀಣಿಸಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

21 year old woman-gives-birth-of-four-children-two-sons-and-two-daughters in jaipur hospital mrq
Author
First Published Aug 6, 2024, 3:01 PM IST | Last Updated Aug 6, 2024, 3:01 PM IST

ಜೈಪುರ: ರಾಜಸ್ಥಾನದ ಜೈಪುರದ ಸರ್ಕಾರಿ ಆಸ್ಪತ್ರೆಯಲ್ಲಿ 21 ವರ್ಷದ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳಲ್ಲಿ ಎರಡು ಗಂಡು, ಇನ್ನೆರಡು ಹೆಣ್ಣು. ಸಂತೋಷ ದೇವಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ. ಕಡಿಮೆ ತೂಕ ಮತ್ತು ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ನಾಲ್ಕೂ ಮಕ್ಕಳನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಯಿಯ ಆರೋಗ್ಯ ಸಹ ಕ್ಷೀಣಿಸಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ರಾಜಸ್ಥಾನದ ದೌಸಾ ಜಿಲ್ಲೆಯ ನಿವಾಸಿಯಾಗಿದ್ದಾರೆ. ಸಂಗಾನೇರಿ ಗೇಟ್ ಬಳಿಯಲ್ಲಿರು ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಾರೆ. 

ನಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿರೋದು. ಈ ಹಿಂದೆ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ ದಾಖಳೆ ಇತ್ತು. ನಾವು ನಾಲ್ಕು ಮಕ್ಕಳನ್ನು ಆರೈಕೆ ಮಾಡಲಾಗುತ್ತಿದ್ದು, ಎಲ್ಲರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ತಾಯಿ ಸಂತೋಷ ದೇವಿ ಗರ್ಭಾಶಯಕ್ಕೆ ಸಂಬಂಧಿಸಿದ ಎನಿಮಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಮಹಿಳೆಗೂ ನಮ್ಮ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.  ಸದ್ಯ ತಾಯಿ ಆರೋಗ್ಯ ಸರಿ ಇಲ್ಲ. ನಾಲ್ಕು ಮಕ್ಕಳ ಆರೋಗ್ಯದಲ್ಲಿಯೂ ವ್ಯತ್ಯಾಸ ಕಂಡು ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದ್ದು, ಸುಧಾರಣೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಆಸ್ಪತ್ರೆಯ ವೈದ್ಯೆ ಡಾ.ಆಶಾ ವರ್ಮಾ ಮಾಹಿತಿ ನೀಡಿದ್ದಾರೆ.

25 ಬೆರಳುಗಳಿರುವ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ!

ಈ ಕುರಿತು ಆಸ್ಪತ್ರೆಯ ಐಸಿಯು ವಿಭಾಗದ ಮುಖ್ಯಸ್ಥ ಡಾ.ವಿಷ್ಣು ಅಗರ್ವಾಲ್, ಅವಧಿ ಪೂರ್ವವೇ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೋಮವಾರ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಆಕೆಯನ್ನು ಸಹ ತೀವ್ರಾ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಎನಿಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ನಮ್ಮಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಒಂದು ಮಗುವಿನ ತೂಕ 900 ಗ್ರಾಂಗಿಂತಲೂ ಕಡಿಮೆ ಇದೆ. ಎರಡು ಮಕ್ಕಳ ತೂಕ ಒಂದು ಕೆಜಿ ಇದ್ದು, ಮತ್ತೊಂದು ಕೇವಲ 700 ಗ್ರಾಂ ತೂಕ ಹೊಂದಿದೆ. ಸಾಮಾನ್ಯವಾಗಿ ಆರೋಗ್ಯಕರ ನವಜಾತ ಶಿಶು 2.5 ರಿಂದ 3 ಕೆಜಿ ಹೊಂದಿರುತ್ತೆ ಎಂದು ಹೇಳಿದ್ದಾರೆ. 

ಮೊದಲ ಬಾರಿಗೆ ಮಹಿಳೆಯನ್ನು ನಮ್ಮಲ್ಲಿಗೆ ಕರೆದುಕೊಂಡು ಬಂದಾಗ ಆಕೆ ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರು. ವೈದ್ಯಕೀಯ ತಪಾಸಣೆ ನಡೆಸಿದಾಗ, ಪ್ರಿಕ್ಲೆಂಪಸಿಯಾ, ಆರ್‌ಎಚ್‌ ನೆಗಟಿವ್, ಗರ್ಭಾಶಯದಲ್ಲಿ ತೊಂದರೆ, ಫಾಯಿಬ್ರಡ್, ಎನಿಮಿಯ ಮತ್ತು ಹೊಟ್ಟೆ ನೋವಿನ ಸಮಸ್ಯೆಗಳಿಂದ ಬಳಲುತ್ತಿದ್ದರು.  ಹೆರಿಗೆಗೂ ಮೊದಲೇ ಮಹಿಳೆ ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಎರಡು ದೇಹ ಎರಡು ಮುಖ 4 ಕೈಕಾಲುಗಳಿರುವ ವಿಚಿತ್ರ ಮಗುವಿಗೆ ಜನ್ಮ ನೀಡಿದ ತಾಯಿ

Latest Videos
Follow Us:
Download App:
  • android
  • ios