‘ಒಂದು ದೇಶ ಒಂದು ಚುನಾವಣೆ’ ಸಾಕಾರಕ್ಕೆ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಮಂಡಿಸಲಿದೆ. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಉದ್ದೇಶದಿಂದ ಈ ಮಸೂದೆಗಳನ್ನು ಮಂಡಿಸಲಾಗುತ್ತಿದೆ.

ನವದೆಹಲಿ: ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಸಾಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಮಂಡನೆ ಮಾಡುವ ನಿರೀಕ್ಷೆ ಇದೆ. ಈ ಪೈಕಿ 2 ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳಾಗಿವೆ. ಅದರಲ್ಲಿ ಒಂದಕ್ಕೆ ಅರ್ಧದಷ್ಟು ರಾಜ್ಯಗಳ ಅನುಮತಿ ಕಡ್ಡಾಯವಾಗಿದೆ.

Add Asianetnews Kannada as a Preferred SourcegooglePreferred

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ನಡೆಸುವ ಸಂಬಂಧ ಸಂವಿಧಾನದ ಸೆಕ್ಷನ್‌ 82 ಎಗೆ ತಿದ್ದುಪಡಿ ತರುವುದು ಮೊದಲ ಮಸೂದೆಯಾಗಿರಲಿದೆ. ಅದೇ ಮಸೂದೆಯ ಮೂಲಕ ಸಂವಿಧಾನದ 83(2)ಕ್ಕೂ ತಿದ್ದುಪಡಿ ತರಲಾಗುತ್ತದೆ. ಈ ವಿಧೇಯಕಕ್ಕೆ ರಾಜ್ಯಗಳ ಅನುಮತಿ ಬೇಕಾಗಿರುವುದಿಲ್ಲ.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಜತೆಗೇ ಸ್ಥಳೀಯ ಸಂಸ್ಥೆಗಳನ್ನು ನಡೆಸುವ ಸಂಬಂಧ 2ನೇ ವಿಧೇಯಕವನ್ನು ಸರ್ಕಾರ ಮಂಡನೆ ಮಾಡುವ ಅಗತ್ಯವಿದೆ. ಆ ಮಸೂದೆಗೆ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ.

ಮನ್‌ ಕೀ ಬಾತ್‌ಗೆ ದಶಕದ ಸಂಭ್ರಮ: ಭಾವುಕರಾದ ಪ್ರಧಾನಿ ಮೋದಿ

ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆಗಳನ್ನು ಹೊಂದಿರುವ ಪುದುಚೇರಿ, ದೆಹಲಿ ಹಾಗೂ ಜಮ್ಮು-ಕಾಶ್ಮೀರಗಳ ಅಸೆಂಬ್ಲಿ ಅವಧಿಯನ್ನು ದೇಶದ ಇತರೆ ವಿಧಾನಸಭೆ ಹಾಗೂ ಲೋಕಸಭೆ ಜತೆ ಸರಿಹೊಂದಿಸಲು ಮೂರನೇ ತಿದ್ದುಪಡಿಯನ್ನು ಮಂಡಿಸಲಾಗುತ್ತದೆ. ಇದಕ್ಕೆ ಸಂವಿಧಾನದಲ್ಲಿ ಯಾವುದೇ ಬದಲಾವಣೆ ತರಬೇಕಾಗಿರುವುದಿಲ್ಲ. ರಾಜ್ಯಗಳ ಅನುಮತಿಯೂ ಬೇಕಾಗಿರುವುದಿಲ್ಲ.

ಮೋದಿಯನ್ನ ಇಳಿಸೋವರೆಗೆ ನಾನು ಸಾಯೊಲ್ಲ: ಪ್ರಧಾನಿ ವಿರುದ್ಧ ಖರ್ಗೆ ಗುಡುಗು!