Asianet Suvarna News Asianet Suvarna News

ತಮಾಷೆಯೇ ಅಲ್ಲ! ಆದೇಶ ಪಾಲಿಸದ ಅಧಿಕಾರಿಗೆ 100 ಗಿಡ ನೆಡುವ ಶಿಕ್ಷೆ

ತಪ್ಪಿತಸ್ಥರಿಗೆ ಕೋರ್ಟ್‌ಗಳು ಸಾಮಾನ್ಯವಾಗಿ ಜೈಲು ಶಿಕ್ಷೆ ಅಥವಾ ದಂಡ ವಿಧಿಸುತ್ತವೆ. ಆದರೆ, ಕೇರಳ ಹೈಕೋರ್ಟ್‌ ತೆರಿಗೆ ಸಂಗ್ರಹ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ಕಾರಣಕ್ಕಾಗಿ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರಿಗೆ 100 ಸಸಿಗಳನ್ನು ನೆಡುವಂತೆ ನಿರ್ದೇಶನ ನೀಡಿದೆ.

Government Official To Plant 100 saplings As Punishment
Author
Bengaluru, First Published Feb 15, 2020, 4:56 PM IST

ನವದೆಹಲಿ (ಫೆ. 15): ತಪ್ಪಿತಸ್ಥರಿಗೆ ಕೋರ್ಟ್‌ಗಳು ಸಾಮಾನ್ಯವಾಗಿ ಜೈಲು ಶಿಕ್ಷೆ ಅಥವಾ ದಂಡ ವಿಧಿಸುತ್ತವೆ. ಆದರೆ, ಕೇರಳ ಹೈಕೋರ್ಟ್‌ ತೆರಿಗೆ ಸಂಗ್ರಹ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ಕಾರಣಕ್ಕಾಗಿ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರಿಗೆ 100 ಸಸಿಗಳನ್ನು ನೆಡುವಂತೆ ನಿರ್ದೇಶನ ನೀಡಿದೆ.

ತಮಾಷೆ ಅಲ್ಲ! ಪೋಸ್ಟ್‌ ಆಫೀಸ್‌ಗೆ ಕನ್ನ ಹಾಕಿದವನಿಗೆ ಸಿಕ್ಕಿದ್ದು ಬರೀ 487 ರೂ!

ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ನಿರ್ದೇಶಕ ಕೆ.ಬಿಜು ಶಿಕ್ಷೆ ಗುರಿಯಾದ ಅಧಿಕಾರಿ. 2007ರಲ್ಲಿ ಖಾಸಗಿ ರಾಸಾಯನಿಕ ಕೈಗಾರಿಕಾ ಕಂಪನಿಯೊಂದಕ್ಕೆ ನೀಡಲಾದ ತೆರಿಗೆ ವಿನಾಯಿತಿ ಆದೇಶವನ್ನು ಜಾರಿ ಮಾಡಲು 10 ವರ್ಷ ವಿಳಂಬ ಆದ ಕಾರಣಕ್ಕೆ ಈ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ತೆರಿಗೆ ಹಣದಲ್ಲಿ 5 ಲಕ್ಷ ರು. ವಿನಾಯಿತಿ ನೀಡಿತ್ತು. ಆದರೆ, ಆದೇಶದಂತೆ ಪ್ರಕರಣ ಇತ್ಯರ್ಥಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು.

Follow Us:
Download App:
  • android
  • ios