ನವದೆಹಲಿ(ಜ.07): ಗೂಗಲ್‌ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಿರುವ ಕೋವಿನ್‌ ಆ್ಯಪ್‌ ನಕಲಿ. ಇದುವರೆಗೆ ಸರ್ಕಾರ ಇಂಥ ಆ್ಯಪ್‌ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

ಕೊರೋನಾ ಲಸಿಕೆ ವಿತರಣೆ ಕುರಿತ ಮಾಹಿತಿ, ನೋಂದಣಿ, ಮೇಲುಸ್ತುವಾರಿ ಹೀಗೆ ನಾನಾ ವಿಷಯ ಸಂಬಂಧ ಕೋವಿನ್‌ ಎಂಬ ಆ್ಯಪ್‌ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ. ಅದರೆ ಅದನ್ನು ಬಿಡುಗಡೆ ಮಾಡಿಲ್ಲ.

ಹೀಗಾಗಿ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿರುವ ಕೋವಿನ್‌ ಹೆಸರಿನ ಆ್ಯಪ್‌ ಡೌನ್‌ ಮಾಡಿಕೊಳ್ಳದಂತೆ ಮತ್ತು ಅದನ್ನು ಇತರರಿಗೆ ಷೇರ್‌ ಮಾಡದಂತೆ, ಅದರಲ್ಲಿ ಯಾವುದೇ ವೈಯಕ್ತಿಕ ಮಾಹಿತಿ ದಾಖಲು ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ.