ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ; ಸ್ಪಷ್ಟನೆ ನೀಡಿದ ಕೇಂದ್ರ!

  • ಏರ್ ಇಂಡಿಯಾ ಮಾರಾಟ ವರದಿ ಸುಳ್ಳು, ಸ್ಪಷ್ಟನೆ ನೀಡಿದ ಕೇಂದ್ರ
  • ಟಾಟಾ ಸನ್ಸ್ ಪಾಲಾಗಿದೆ ಎಂಬ ವರದಿ ಕುರಿತು ಕೇಂದ್ರ ಸ್ಪಷ್ಟನೆ
  • ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಖರೀದಿ ಎಂಬ ವರದಿ ವೈರಲ್
Government denied media reports that Tata Group won bid for debt laden Air India ckm

ನವದೆಹಲಿ(ಅ,01): ಕೇಂದ್ರ ಸರ್ಕಾರ ಈಗಾಗಲೇ ಕೆಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ(privatisation) ಸಾರ್ವಜನಿಕರಿಗೆ ಉತ್ಕೃಷ್ಟ ದರ್ಜೆಯ ಸೇವೆ ಹಾಗೂ ಲಾಭ ತಂದುಕೊಡು ನಿರ್ಧಾರ ಮಾಡಿದೆ. ಈಗಾಗಲೇ ಕೆಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗಿದೆ. ಇದರ ನಡುವೆ ಏರ್ ಇಂಡಿಯಾ ವಿಯಾನಯಾನ(Air India) ಸಂಸ್ಥೆಯನ್ನು ಖಾಸಗೀಕರಣ ಸ್ಕೀಮ್ ಅಡಿಯಲ್ಲಿ ಮಾರಾಟ ಮಾಡಲಾಗಿದ್ದು, ಟಾಟಾ ಗ್ರೂಪ್(Tata Group) ಖರೀದಿಸಿದೆ ಅನ್ನೋ ಮಾಹಿತಿ ಮಿಂಚಿನಂತೆ ಹರಿದಾಡಿದೆ. ಈ ವರಿದು ಕುರಿತು ಕೇಂದ್ರ ಸರ್ಕಾರ(Finance Ministry) ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವುದೇ ಬಿಡ್ ನಡೆದಿಲ್ಲ, ಮಾಧ್ಯಮ ವರದಿ(Media Reports) ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರು: KIAನಲ್ಲಿ ಮೂರು ಗಂಟೆ ನಿಂತಲ್ಲೇ ನಿಂತ ಏರ್‌ ಇಂಡಿಯಾ ವಿಮಾನ

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಬಿಡ್ಡಿಂಗ್‌ನಲ್ಲಿ(Bid) ಟಾಟಾ ಅಂಡ್ ಸನ್ಸ್(Tata And sons)  ಮೇಲುಗೈ ಸಾಧಿಸಿದೆ. ಈ ಮೂಲಕ ಸರ್ಕಾರದ ಏರ್ ಇಂಡಿಯಾ ಟಾಟಾ ಅಂಡ್ ಸನ್ಸ್ ಪಾಲಾಗಿದೆ ಎಂದು ಬ್ಲೂಮ್‌ಬರ್ಗ್ ಸುದ್ಧಿ ಸಂಸ್ಥೆ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಹಲವು ಮಾಧ್ಯಮಗಳು ಕೂಡ ಟಾಟಾ ಪಾಲಾದ ಏರ್ ಇಂಡಿಯಾ ಎಂದು ಸುದ್ದಿ ಪ್ರಕಟಿಸಿತ್ತು. ಈ ವರದಿಗಳನ್ನು ಕೇಂದ್ರ ಸರ್ಕಾರ  ತಳ್ಳಿ ಹಾಕಿದೆ.

 

ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಟಾಟಾ ಪಾಲಾಗಿದೆ ಅನ್ನೋ ಸುದ್ಧಿ ಸುಳ್ಳು. AI ಡಿಸ್‌ಇನ್ವೆಸ್ಟ್‌ಮೆಂಟ್ ಪ್ರಕರಣದಲ್ಲಿ ಭಾರತ ಸರ್ಕಾರವು ಹಣಕಾಸು ಬಿಡ್ ಅನುಮೋದನೆ ಸೂಚಿಸುವ ಏರ್ ಇಂಡಿಯಾ ಬಿಡ್ ಕುರಿತು ಮಾಧ್ಯಮ ವರದಿ ಸುಳ್ಳು.  ಈ ಕುರಿತು ಸರ್ಕಾರ ಯಾವಾಗ ತೆಗೆದುಕೊಳ್ಳುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಲಾಗುತ್ತದೆ ಎಂದು ಕೇಂದ್ರ ಆಸ್ತಿ ನಿರ್ವಹಣಾ ಇಲಾಖೆ ಟ್ವೀಟ್(Tweet) ಮೂಲಕ ಗೊಂದಲಗಳಿಗೆ ಉತ್ತರ ನೀಡಿದೆ. 

ಸೈಬರ್‌ ದಾಳಿ: ಲಕ್ಷಾಂತರ ಏರಿಂಡಿಯಾ ಪ್ರಯಾಣಿಕರ ಮಾಹಿತಿ ಸೋರಿಕೆ!

ಸಾಲ ಸುಳಿಗೆ ಸಿಲುಕಿರುವ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರ ಮಾರಾಟ ಮಾಡಲು ಎರಡು ಬಾರಿ ಮುಂದಾಗಿದೆ. ಆದರೆ ಎರಡೂ ಪ್ರಯತ್ನಗಳು ವಿಫಲಗೊಂಡಿತ್ತು. ಇದರ ನಡುವೆ ಬ್ಲೂಮ್ ಬರ್ಗ್ ಪ್ರಕಟಿಸಿದ್ದ ವರದಿ ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿತ್ತು. ಏರ್ ಇಂಡಿಯಾ ಸೇಲ್ ಬಿಡ್‌ನಲ್ಲಿ ಟಾಟಾ ಗ್ರೂಪ್ ಹಾಗೂ ಸ್ಪೈಸ್ ಜೆಟ್ ಸಂಸ್ಥೆ ಅಂತಿಮ ಹಂತದ ಬಿಡ್‌ಗೆ ಆಯ್ಕೆಯಾಗಿತ್ತು. ಅಂತಿಮ ಬಿಡ್‌ನಲ್ಲಿ ಟಾಟಾ ಅಂಡ್ ಸನ್ಸ್ ಬಿಡ್ ಗೆದ್ದುಕೊಂಡಿದೆ ಎಂಬ ವರದಿ ಭಾರಿ ಸಂಚಲನ ಸೃಷ್ಟಿಸಿತ್ತು.

ನಷ್ಟದಲ್ಲಿರವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಹೆಚ್ಚುತ್ತಿರುವ ಬಜೆಟ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ನಷ್ಟದಲ್ಲಿರುವ ಸಂಸ್ಥೆಗಳಲ್ಲಿ ಲಾಭಗಳಿಸಲು ಕೇಂದ್ರದ ಮಹತ್ವದ ಖಾಸಗೀಕರಣ ಯೋಜನೆಗೆ ಭಾರಿ ಪರ ವಿರೋಧಗಳಿವೆ. ಆದರೆ ಸರ್ಕಾರದ ಆದಾಯ ದೃಷ್ಟಿಯಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಇದುವರೆಗೆ ಬರೋಬ್ಬರಿ 70,000 ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ಏರ್ ಇಂಡಿಯಾ ಸಂಸ್ಥೆ ಕೇಂದ್ರದ ಖಾಸಗೀಕರಣ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಆದರೆ ಬಿಡ್ ಮಾಡಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳು ಕೈಗೂಡಿರಲಿಲ್ಲ. 

ಏರ್‌ ಇಂಡಿಯಾ ಖರೀದಿ: ಅಂತಿಮ ಬಿಡ್‌ಗೆ ಟಾಟಾ, ಸ್ಪೈಸ್‌ ಜೆಟ್‌!

2018ರಲ್ಲಿ ನರೇಂದ್ರ ಮೋದಿ ಸರ್ಕಾರ ಏರ್ ಇಂಡಿಯಾ ಖಾಸಗೀಕರಣಕ್ಕೆ ಮುಂದಾಗಿತ್ತು. ಬಳಿಕ ಇತ್ತೀಚೆಗೆ ಏರ್ ಇಂಡಿಯಾ ಬಿಡ್ ಚುರುಕುಗೊಳಿಸಿತ್ತು. ಆದರೆ ರಾಜಕೀಯ ವಿರೋಧ, ನಷ್ಟದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಖರೀದಿಗೂ ಹಲವು ಸಂಸ್ಥೆಗಳು ಹಿಂದೇಟು ಹಾಕಿತ್ತು. ಹೀಗಾಗಿ ಬಿಡ್ ಫಲಪ್ರದವಾಗಿರಲಿಲ್ಲ. 

ಏರ್ ಇಂಡಿಯಾ ಸಂಸ್ಥೆ ಖಾಸಗೀಕರಣಕ್ಕೆ ಬಿಡ್ ಕರೆಯಲಾಗಿದೆ. ಸದ್ಯ ಬಿಡ್‌ಗೆ ಆಸಕ್ತಿವಹಿಸಿರುವ ಸಂಸ್ಥೆಗಳ ಕುರಿತು ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿಲ್ಲ. ಏರ್ ಇಂಡಿಯಾ ಸಂಸ್ಥೆ ಖರೀದಿಸುವ ಸಂಸ್ಥೆ, ಏರ್ ಇಂಡಿಯಾದ ದೇಶಿ 4,400 ವಿಮಾನ ಹಾಗೂ 1,800 ಅಂತಾರಾಷ್ಟ್ರೀಯ ವಿಮಾನಗಳ ಒಡೆತನ ಸಿಗಲಿದೆ. 

Latest Videos
Follow Us:
Download App:
  • android
  • ios