Asianet Suvarna News Asianet Suvarna News

ಕೋವಿಡ್‌ನಿಂದ ದುಡಿಯುವ ಸದಸ್ಯನ ಕಳೆದುಕೊಂಡ ಕುಟುಂಬಕ್ಕೆ ಪಿಂಚಣಿ ನೆರವು!

  • ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಕುಟುಂಬ ಪಿಂಚಣಿ
  • ಇಡಿಎಲ್ಐ ಯೋಜನೆಯಡಿ ವಿಮಾ ಪ್ರಯೋಜನ ಹೆಚ್ಚಳ 
  • ಕುಟುಂಬದ ಆರ್ಥಿಕ ಸಮಸ್ಯೆ ತಗ್ಗಿಸಲು ಕೇಂದ್ರದ  ಹೊಸ ಯೋಜನೆ 
Government announces further measures to help families who lost earning member due to Covid ckm
Author
Bengaluru, First Published May 29, 2021, 8:49 PM IST

ನವದೆಹಲಿ(ಮೇ.29): ಕೊರೋನಾ ಭೀಕರತೆಗೆ ನಲುಗಿದ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೆರವು ಘೋಷಿಸಿದೆ. ಈಗಾಗಲೇ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ ಸರ್ಕಾರ ಇದೀಗ ಕೊರೋನಾ ವೈರಸ್ ಕಾರಣ ದುಡಿಯುವ ಸದಸ್ಯನ ಕಳೆದುಕೊಂಡ ಕುಟುಂಬಕ್ಕೆ ಕೇಂದ್ರ ಸರ್ಕಾರ ಹೊಸ ಯೋಜನೆ ಮೂಲಕ ನೆರವು ನೀಡಲು ಮುಂದಾಗಿದೆ.

ಕೋವಿಡ್‌ನಿಂದ ತಬ್ಬಲಿಯಾದ ಮಕ್ಕಳ ಸಬಲೀಕರಣಕ್ಕೆ ಹೊಸ ಯೋಜನೆ ಘೋಷಿಸಿದ ಮೋದಿ!.

ನೌಕರರ ರಾಜ್ಯ ವಿಮಾ ನಿಗಮದಡಿಯಲ್ಲಿ ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡ  ಅವಲಂಬಿತರಿಗೆ ಕುಟುಂಬಕ್ಕೆ ಪಿಂಚಣಿ ನೀಡಲು ನಿರ್ಧರಿಸಲಾಗಿದೆ.ಜೊತೆಗೆ ವಿಮಾ ನೆರವು ಘೋಷಿಸಲಾಗಿದೆ. ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ತಗ್ಗಿಸಲು ಈ ಯೋಜನೆಗಳು ಸಹಾಯ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

EDLI ಯೋಜನೆಯಡಿ ವಿಮಾ ಪ್ರಯೋಜನಗಳನ್ನು ವರ್ಧಿಸಲಾಗಿದೆ. ಕುಟುಂಬದ ಜೊತೆ ಭಾರತ ಸರ್ಕಾರ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಸೋಂಕಿತರ ನೆರವಿಗೆ 'ಮೈ ಸೇವಾ' ತಂಡ, ಪ್ರತಿ ಜಿಲ್ಲೆಗೂ ಸಿಗಲಿದೆ ಆಂಬುಲೆನ್ಸ್ ಸೇವೆ

ನೌಕರರ ರಾಜ್ಯ ವಿಮಾ ನಿಗಮ (ESIC) ಅಡಿಯಲ್ಲಿ ಕುಟುಂಬ ಪಿಂಚಣಿ 
ಕೊರೋನಾ ಕಾರಣ ಕುಟುಂಬದ ಆಧಾರ ಸ್ಥಂಭವಾಗಿದ್ದ ಸದಸ್ಯರು ನಿಧನರಾದರೆ, ಅವರ ಕುಟುಂಬಕ್ಕೆ ಗೌರವಯುತ ಜೀವನ ನಡೆಸಲು ಸರ್ಕಾರ ಎಲ್ಲಾ ನೆರವು ನೀಡಲಿದೆ. ಇದಕ್ಕಾಗಿ  ಇಎಸ್ಐಸಿ ಪಿಂಚಣಿ ಯೋಜನೆ ಪ್ರಯೋಜನ ವಿಸ್ತರಿಸಲಾಗಿದೆ. ಸರಾಸರಿ ದೈನಂದಿನ ವೇತನದ 90% ಗೆ ಸಮಾನವಾದ ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ- ನೌಕರರ ಠೇವಣಿ ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್ (EDLI)
1)
EDLI ಯೋಜನೆಯಡಿ ವಿಮಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ.  ನಿರ್ದಿಷ್ಟವಾಗಿ COVID ಯಿಂದ ಪ್ರಾಣ ಕಳೆದುಕೊಂಡ ನೌಕರರ ಕುಟುಂಬಗಳಿಗೆ ಸಹಾಯ ಮಾಡಲಿದೆ. 
ವಿಮಾ ಮೊತ್ತವನ್ನು 6 ಲಕ್ಷದಿಂದ 7 ಲಕ್ಷಕ್ಕೆ ರೂಪಾಯಿಗೆ ಹೆಚ್ಚಿಸಲಾಗಿದೆ
2) 2.5 ಲಕ್ಷದ ಕನಿಷ್ಠ ವಿಮಾ ಪ್ರಯೋಜನವನ್ನು ಮರುಸ್ಥಾಪಿಸಲಾಗಿದೆ.  ಮುಂದಿನ ಮೂರು ವರ್ಷಗಳವರೆಗೆ ವಿಸ್ತರಿಸಲಾಗಿದೆ
3) ಗುತ್ತಿಗೆ ಹಾಗೂ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗುವಂತೆ ಉದ್ಯೋಗದ ಸ್ಥಿತಿಯನ್ನು ಉದಾರೀಕರಣಗೊಳಿಸಲಾಗಿದೆ.  ಸಾವಿಗೆ ಮುಂಚಿನ ಕಳೆದ 12 ತಿಂಗಳುಗಳಲ್ಲಿ ಉದ್ಯೋಗಗಳನ್ನು ಬದಲಿಸಿದ ನೌಕರರ ಕುಟುಂಬಗಳಿಗೂ ಪ್ರಯೋಜನವನ್ನು ಒದಗಿಸಲಾಗಿದೆ.

Follow Us:
Download App:
  • android
  • ios