Asianet Suvarna News Asianet Suvarna News

ಏನ್‌ ದೇವ್ರೆ ಇದೆಲ್ಲಾ.. 'ಪಾಪ ಮುಕ್ತಿ' ಆಗಿರೋ ಸರ್ಟಿಫಿಕೇಟ್‌ ಕೊಡಲು ಆರಂಭಿಸಿದ ದೇವಸ್ಥಾನ!

ಗಂಗೆಯಲ್ಲಿ ಒಮ್ಮೆ ಮುಳುಗಿ ಎದ್ದರೆ ಮಾಡಿದ ಎಲ್ಲಾ ಪಾಪಗಳು ಪರಿಹಾರ ಆಗುತ್ತದೆ ಅನ್ನೋದು ಮಾತು. ಹೆಚ್ಚಿನವರು ಇದೇ ಕಾರಣಕ್ಕೆ ಜೀವನದಲ್ಲಿ ಒಮ್ಮೆಯಾದರೂ ಗಂಗೆಯಲ್ಲಿ ಸ್ನಾನ ಮಾಡಿ ಪಾಪಗಳಿಂದ ಮುಕ್ತಿಯಾಗಲು ಬಯಸುತ್ತಾರೆ. ಆದರೆ, ರಾಜಸ್ಥಾನದ ದೇವಸ್ಥಾನವೊಂದು ಪಾಪ ಮುಕ್ತಿಯಾಗಿರೋ ಸರ್ಟಿಫಿಕೇಟ್‌ ಕೂಡ ನೀಡಲು ಆರಂಭಿಸಿದೆ.
 

Gotameshwar Mahadev Mandir in southern Rajasthan gives Paap Mukti certificate for a dip in its kund san
Author
First Published Nov 3, 2023, 10:04 PM IST

ನವದೆಹಲಿ (ನ.3): ಹಿಂದುಗಳಲ್ಲಿ ಒಂದು ನಂಬಿಕೆಯಿದೆ. ಇತಿಹಾಸದಲ್ಲಿ ಹಾಗೂ ಪುರಾಣಗಳಲ್ಲಿ ಪ್ರಸಿದ್ಧವಾಗಿ ಪವಿತ್ರವಾಗಿರುವ ನದಿಗಳಲ್ಲಿ ಒಮ್ಮೆ ಸ್ನಾನ ಮಾಡಿಬಿಟ್ಟರೆ, ತಾವು ಮಾಡಿದ್ದ ಪಾಪಗಳೆಲ್ಲಾ ತೊಳೆದು ಹೋಗುತ್ತದೆ ಎನ್ನುವುದು. ಅದಕ್ಕಾಗಿ ದೇಶಾದ್ಯಂತ ಯಾತ್ರಾರ್ಥಿಗಳು ತೀರ್ಥಕ್ಷೇತ್ರಗಳಿಗೆ ಹೋದಾಗ ಪುಣ್ಯಸ್ನಾನ ಮಾಡುತ್ತಾರೆ. ಹಾಗಂತ ಪಾಪಗಳು ತೊಳೆದುಹೋಗಿರುವ ಯಾವ ಗುರುತೂ ನಿಮಗೆ ಸಿಗೋದಿಲ್ಲ. ಆದರೆ, ರಾಜಸ್ಥಾನದ ದೇವಸ್ಥಾನವೊಂದು ಪಾಪಗಳು ತೊಳೆದುಹೋಗಿವೆ ಎನ್ನುವ ಪಾಪ ಮುಕ್ತಿ ಸರ್ಟಿಫಿಕೇಟ್‌ ನೀಡಲು ಆರಂಭಿಸಿದೆ. ದಕ್ಷಿಣ ರಾಜಸ್ಥಾನದಲ್ಲಿರುವ ಪುರಾಣ ಪ್ರಸಿದ್ಧ ದೇವಸ್ಥಾನದಲ್ಲಿರುವ ಕುಂಡದಲ್ಲಿ ಸ್ನಾನ ಮಾಡಿದರೆ, ಭಕ್ತಾದಿಗಳು ಪಾಪಗಳು ಮುಕ್ತವಾಗಿದೆ ಅನ್ನೋದಕ್ಕೆ 'ಅಧಿಕೃತ ಸರ್ಟಿಫಿಕೇಟ್‌' ಕೂಡ ಸಿಗುತ್ತದೆ. ಈ ಪಾಪ ಮುಕ್ತಿ ಪ್ರಮಾಣ ಪತ್ರಕ್ಕಾಗಿ ಯಾತ್ರಾರ್ಥಿಗಳು 12 ರೂಪಾಯಿ ಪಾವತಿ ಮಾಡಬೇಕಿದೆ. ವಾಗಡ್‌ನ ಹರಿದ್ವಾರ ಎಂದು ಪ್ರಸಿದ್ಧವಾಗಿರುವ ಗೋತಮೇಶ್ವರ ಮಹಾದೇವ ಮಂದಿರವು ರಾಜ್ಯದ ರಾಜಧಾನಿ ಜೈಪುರದಿಂದ ಸುಮಾರು 450 ಕಿಮೀ ದೂರದಲ್ಲಿರುವ ಪ್ರತಾಪ್‌ಗಢ ಜಿಲ್ಲೆಯಲ್ಲಿದೆ. ರಾಜ್ಯ ಸರ್ಕಾರದ ದೇವಸ್ಥಾನ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯದ ಟ್ರಸ್ಟ್‌ನಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಹಾಗಿದ್ದರೂ ಈ ಪ್ರಮಾಣಪತ್ರವನ್ನು ಪಡೆದುಕೊಳ್ಳುವವರ ಸಂಖ್ಯೆ ಬಹಳ ಸೀಮಿತವಾಗಿದೆ. ಈ ದೇವಾಲಯದ 'ಮಂದಾಕಿನಿ ಕುಂಡ'ದಲ್ಲಿ ಸ್ನಾನ ಮಾಡಲು ಒಂದು ವರ್ಷದಲ್ಲಿ ಸುಮಾರು 250-300 ಪ್ರಮಾಣಪತ್ರಗಳನ್ನು ಮಾತ್ರವೇ ನೀಡಲಾಗುತ್ತದೆ. ಈ ಪ್ರಮಾಣ ಪತ್ರ ನೀಡುವ ಸಂಪ್ರದಾಯ ಎಂದಿನಿಂದ ಆರಂಭವಾಯಿತು ಎನ್ನುವ ವಿವರಗಳು ಲಭ್ಯವಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆ ಪ್ರಾಣಿಯನ್ನು ಕೊಲ್ಲುವ "ಪಾಪ" ವನ್ನು ಮಾಡಿದವರು ಅಥವಾ ಅವರ ಜಾತಿ ಅಥವಾ ಸಮುದಾಯದಿಂದ ಬಹಿಷ್ಕರಿಸಿದವರು ಕುಂಡದಲ್ಲಿ ಸ್ನಾನ ಮಾಡಿದ ನಂತರ ಪ್ರಮಾಣಪತ್ರವನ್ನು ಪಡೆಯಲು ಬಯಸುತ್ತಾರೆ ಎಂದು ಹೇಳಲಾಗುತ್ತದೆ.  ಪ್ರಮಾಣಪತ್ರಗಳು ಪಡೆದ  ಅವರು ಯಾವುದೇ "ಪಾಪ" ವನ್ನು ಹೊಂದಿರುವುದಿಲ್ಲ ಮತ್ತು ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವ ಸಾಕ್ಷಿಯಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.

ದೇವಾಲಯದ ಪಾಪ ಮುಕ್ತಿ ಪ್ರಮಾಣ ಪತ್ರವು, “ಈ ಜನ ತನ್ನ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಮಿಸಲಾದ ಶ್ರೀ ಗೋತಮೇಶ್ವರ ಜಿಯವರ 'ಮಂದಾಕಿನಿ ಪಾಪ ಮೋಚಿನಿ ಗಂಗಾ ಕುಂಡ'ದಲ್ಲಿ ಈ ವ್ಯಕ್ತಿಯು ಸ್ನಾನ ಮಾಡಿದ್ದಾನೆ ಎಂದು ಗ್ರಾಮಗಳ 'ಪಂಚ್'ಗಳು (ಪಂಚಾಯತ್ ಸದಸ್ಯರು) ತಿಳಿದಿರಬೇಕು. ಆದ್ದರಿಂದ ಈ ಪ್ರಮಾಣ ಪತ್ರ ನೀಡಲಾಗಿದೆ. ದಯವಿಟ್ಟು ಅವನನ್ನು/ಅವಳನ್ನು ಜಾತಿ ಸಮಾಜಕ್ಕೆ ಮರಳಿ ಸ್ವೀಕರಿಸಿ' ಎಂದು ಬರೆಯಲಾಗಿದೆ. ‘ಪಾಪ್ ಮೋಚಿನಿ ಮಂದಾಕಿನಿ ಕುಂಡ್’ ಬಳಿ ಇರುವ ಕಚೇರಿಯಲ್ಲಿ ಕುಳಿತುಕೊಳ್ಳುವ ‘ಅಮಿನ್’ (ಪಟ್ವಾರಿ ಅಥವಾ ಕಂದಾಯ ಇಲಾಖೆ ಸಿಬ್ಬಂದಿ) ಸಹಿ ಮತ್ತು ಮುದ್ರೆಯೊಂದಿಗೆ 12 ರೂ.ಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಸ್ಥಳೀಯ ಸರಪಂಚ್ ಉದಯ್ ಲಾಲ್ ಮೀನಾ ತಿಳಿಸಿದ್ದಾರೆ.

“ಪ್ರಸಿದ್ಧ ಹಿಂದೂ ಋಷಿ ಮಹಿರ್ಷಿ ಗೌತಮ ಇಲ್ಲಿ ಸ್ನಾನ ಮಾಡಿದ ನಂತರ ಹಸುವನ್ನು ಕೊಂದ ಪಾಪದಿಂದ ವಿಮೋಚನೆಗೊಂಡರು ಎಂದು ನಂಬಲಾಗಿದೆ. ಸಂಪ್ರದಾಯವನ್ನು ಇಂದಿಗೂ ಅನುಸರಿಸಲಾಗುತ್ತಿದೆ ಮತ್ತು ಈ 'ಕುಂಡ'ದಲ್ಲಿ ಸ್ನಾನ ಮಾಡುವವರು ತಮ್ಮ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬುದು ದೃಢವಾದ ನಂಬಿಕೆಯಾಗಿದೆ, ”ಎಂದು ಅವರು ತಿಳಿಸಿದ್ದಾರೆ. ಸಾಮಾನ್ಯವಾಗಿ, ಕೀಟಗಳು ಅಥವಾ ಇತರ ಜೀವಿಗಳು ಕೃಷಿಯ  ಸಾಯುತ್ತವೆ, ಅಥವಾ ಪಕ್ಷಿಗಳ ಮೊಟ್ಟೆಗಳು ನಾಶವಾಗುತ್ತವೆ, ಅದನ್ನು ಪಾಪವೆಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು. ಆದರೆ, ಜಾತಿ ಆಧಾರಿತ ಬಹಿಷ್ಕಾರದ ವಿಚಾರವಾಗಿ ಮಾತನಾಡಲು ಅವರು ನಿರಾಕರಿಸಿದ್ದಾರೆ.

Humaira Himu Death: ಅನುಮಾನಾಸ್ಪದ ರೀತಿಯಲ್ಲಿ ನಟಿ ಹುಮೈರಾ ಸಾವು!

ಭಗವಾನ್‌ ಶಿವನಿಗೆ ಸಮರ್ಪಿತವಾದ ದೇವಾಲಯ ಇದಾಗಿದೆ. ಇದೇ ದೇವಸ್ಥಾನದ ಮೇಲೆ ಘಜ್ನಿ ಮೊಹಮದ್‌ ದಾಳಿ ಮಾಡಿ ಶಿವಲಿಂಗವನ್ನು ಹಾಳು ಮಾಡಲು ಬಯಸಿದ್ದ. ಆದರೆ, ಘಜ್ನಿಯ ಸೇನೆ ದಾಳಿ ಮಾಡಿದಾಗ, ದೇವಸ್ಥಾನದ ಆವರಣದಲ್ಲಿ ಜೇನುನೊಣಗಳ ಅವರ ಮೇಳೆ ದಾಳಿ ಮಾಡಿದ್ದವು. ಆ ಬಳಿಕ ಘಜ್ನಿಯೇ ಈ ದೇವಸ್ಥಾನವನ್ನು ಮರು ನಿರ್ಮಾಣ ಮಾಡಿದ್ದ. ಹಾನಿಯಾಗಿರುವ ಶಿವಲಿಂಗವನ್ನೇ ಇನ್ನೂ ಪೂಜಿಸಲಾಗುತ್ತಿದೆ.  ಹಿಂದೆಲ್ಲಾ ಈ ದೇವಸ್ಥಾನವನ್ನು ತಲುಪುವುದು ಕಷ್ಟಕರವಾದ ಕಾರಣ, ‘ಕುಂಡ’ದಲ್ಲಿ ಸ್ನಾನ ಮಾಡಿದ್ದೇನೆ ಎಂದು ಜನರು ನಂಬುತ್ತಿರಲಿಲ್ಲ ಎಂದು ಅವರು ಹೇಳಿದರು. "ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಸ್ನಾನ ಮಾಡಿದ್ದಾನೆ ಎಂಬುದಕ್ಕೆ ಪ್ರಮಾಣಪತ್ರವನ್ನು ಪುರಾವೆ ರೀತಿಯಲ್ಲಿ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಯೂಟ್ಯೂಬ್‌ ವೀಕ್ಷಣೆ ಇನ್ನಷ್ಟು ದುಬಾರಿ, ಹೊಸ ಪ್ಲ್ಯಾನ್‌ಗಳ ದರ ಏರಿಸಿದ ಗೂಗಲ್‌!

Follow Us:
Download App:
  • android
  • ios