Asianet Suvarna News Asianet Suvarna News

Fertilizer plant: 3 ದಶಕಗಳ ಬಳಿಕ ಗೋರಖ್‌ಪುರ ರಸಗೊಬ್ಬರ ಸ್ಥಾವರ ರೀ ಓಪನ್, ಯೋಗಿ ತಾಯ್ನಾಡಿಗೆ ಉಡುಗೊರೆ

  • 3 ದಶಕಗಳ ಬಳಿಕ ಗೋರಖ್‌ಪುರ ರಸಗೊಬ್ಬರ ಸ್ಥಾವರ ಓಪನ್ 
  • ಡಿಸೆಂಬರ್ 7 ರಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ
  • ಮೋದಿಯಿಂದ ಏಮ್ಸ್‌ನ ಅತ್ಯಾದುನಿಕ ಸುಸಜ್ಜಿತ ಕಟ್ಟಡ ಕೂಡ ಉದ್ಘಾಟನೆ
Gorakhpur Fertilizer plant to be inaugurated by pm  Modi Gow
Author
Bengaluru, First Published Dec 4, 2021, 4:44 PM IST
  • Facebook
  • Twitter
  • Whatsapp

ನವದೆಹಲಿ (ಡಿ.4): ಡಿಸೆಂಬರ್ 7 ರಂದು ಗೋರಖ್ ಪುರಕ್ಕೆ ಭೇಟಿ ನೀಡುವ ಪ್ರಧಾನಿ ಮೋದಿ ಅವರು 9,600 ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಪಿಎಂಒ (PMO) ಶುಕ್ರವಾರ ಮಾಹಿತಿ ನೀಡಿದೆ.

ಮುಖ್ಯವೆಂದರೆ ಈ ಯೋಜನೆಯಲ್ಲಿ ಪ್ರಮುಖವಾಗಿ ಬರೋಬ್ಬರಿ 31 ವರ್ಷಗಳ ಕಾಲ ಮುಚ್ಚಿ ಹೋಗಿದ್ದ ಗೋರಖ್‌ಪುರ ರಸಗೊಬ್ಬರ ಸ್ಥಾವರವನ್ನು(Gorakhpur Fertilizer plant)  ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದು, ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ತವರುನಾಡಿಗೆ  ದೊಡ್ಡ ಉಡುಗೊರೆಯಾಗಿದೆ.

Accused got bail: ಮೋದಿ ಹಾಗೂ ಯೋಗಿಗೆ ಕೊಲೆ ಬೆದರಿಕೆಯೊಡ್ಡಿದ ಆರೋಪಿಗೆ ಜಾಮೀನು

ಈ ಸ್ಥಾವರಲ್ಲಿ ವಾರ್ಷಿಕವಾಗಿ 12.7 LMT ಸ್ಥಳೀಯ ಬೇವು ಲೇಪಿತ ಯೂರಿಯಾವನ್ನು ಉತ್ಪಾದಿಸಲಾಗುತ್ತದೆ. ಪೂರ್ವಾಂಚಲ್ ಪ್ರದೇಶ ಮತ್ತು ಪಕ್ಕದ ಪ್ರದೇಶಗಳ ರೈತರ ರಸಗೊಬ್ಬರ (Fertilizer)  ಬೇಡಿಕೆಯನ್ನು ಪೂರೈಸುವಲ್ಲಿ ಸಹಾಯಕವಾಗಿದೆ.

UP Elections: ಮೋದಿ, ಯೋಗಿ ಸಂಭಾಷಣೆಯ ಸೀಕ್ರೆಟ್ ರಿವೀಲ್ ಮಾಡಿದ ರಾಜನಾಥ್ ಸಿಂಗ್!

 ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (NTPC), ಕೋಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಫರ್ಟಿಲೈಸರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಹಿಂದೂಸ್ತಾನ್ ಫರ್ಟಿಲೈಸರ್ ಕಾರ್ಪೊರೇಷನ್ ಲಿಮಿಟೆಡ್‌ನ ಜಂಟಿ ಉದ್ಯಮವಾದ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (HURL) ಅಡಿಯಲ್ಲಿ ಈ ಯೋಜನೆಯನ್ನು ಸ್ಥಾಪಿಸಲಾಗಿದೆ. ಸಿಂಡ್ರಿ ಮತ್ತು ಬರೌನಿ ರಸಗೊಬ್ಬರ ಸ್ಥಾವರಗಳ ಪುನಶ್ಚೇತನ ಕಾರ್ಯವನ್ನು ಕೂಡ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ ಹೊಂದಿದೆ.

Yogi Warns 'Abba Jaan': ಸಿಎಎ ವಿರುದ್ಧ ದಂಗೆ ಏಳಿಸುವವರ ಮೇಲೆ ಬುಲ್ಡೋಜರ್‌ ಹತ್ತಿಸಲು ಯೋಚಿಸಲ್ಲ

ಇತ್ತೀಚಿನ ಅತ್ಯಂತ ಸುಧಾರಿತ ತಂತ್ರಜ್ಞಾನದೊಂದಿಗೆ ಅನೇಕ ಉದ್ಯಮ ಮಾನದಂಡಗಳನ್ನು ಇಟ್ಟುಕೊಂಡು ಈ ಸ್ಥಾವರನ್ನು ವಿಶ್ವ ಗುಣಮಟ್ಟಕ್ಕೆ ಸಮನಾಗಿ ನಿರ್ಮಿಸಲಾಗಿದೆ. 2018 ರಲ್ಲಿ ಜಪಾನ್‌ನ ಟೊಯೊ ಎಂಜಿನಿಯರಿಂಗ್ ಕಾರ್ಪೊರೇಷನ್‌ಗೆ  ದೊಡ್ಡ ಪ್ರಮಾಣದ ರಸಗೊಬ್ಬರ ಸಂಕೀರ್ಣ ನಿರ್ಮಿಸಲು ಗುತ್ತಿಗೆಯನ್ನು ನೀಡಲಾಯಿತು. ಈ ಕಟ್ಟಡವನ್ನು  ಟೊಯೊ ಇಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಭಾರತದಲ್ಲಿನ TOYO ಸಮೂಹ ಕಂಪನಿ, HURL, CIL, NTPC, ಮತ್ತು IOCL ಸೇರಿದಂತೆ ಪ್ರಮುಖ ಸಂಸ್ಥೆಗಳು  ಜಂಟಿಯಾಗಿ ಈ ರಸಗೊಬ್ಬರ ಸ್ಥಾವರವನ್ನು  ನಿರ್ಮಿಸಿದೆ.

Tata Group: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪ್ರವೇಶ, ಘಟಕ ಸ್ಥಾಪನೆಗೆ ಕರ್ನಾಟಕದಲ್ಲೂ ಸ್ಥಳ ಪರಿಶೀಲನೆ

ಈ ಸ್ಥಾವರವು 149.2 ಮೀಟರ್‌ ಎತ್ತರದ ಗೋಪುರವನ್ನು ಹೊಂದಿದ್ದು, ವಿಶ್ವದ ಅತಿ ಎತ್ತರದ ಗೋಪುರ ಎನಿಸಿಕೊಂಡಿದೆ. ಅತ್ಯಂತ ಸುಸಜ್ಜಿತ ಸುರಕ್ಷತಾ ಅಂಶಗಳನ್ನು ಇದು ಹೊಂದಿದ್ದು, ಭಾರತದ ಮೊದಲ ವಾಯು ಚಾಲಿತ ರಬ್ಬರ್ ಅಣೆಕಟ್ಟು ಮತ್ತು ಬ್ಲಾಸ್ಟ್ ಪ್ರೂಫ್ ಕಂಟ್ರೋಲ್ ರೂಮ್ ಅನ್ನು ಕೂಡ ಇದು ಹೊಂದಿದೆ. ಈ ರಸಗೊಬ್ಬರ ಕಾರ್ಖಾನೆಯು ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಗೋರಖ್‌ಪುರ ಪಟ್ಟಣದಿಂದ ಉತ್ತರಕ್ಕೆ 12 ಕಿಮೀ ದೂರದಲ್ಲಿ NH-28 ರಲ್ಲಿದೆ. ಇಲ್ಲಿಗೆ ರಸ್ತೆ ಮತ್ತು ರೈಲಿನ ಮೂಲಕ ಸಂಪರ್ಕಿಸಬಹುದಾಗಿದೆ.

ರಸ​ಗೊ​ಬ್ಬ​ರ​ಗ​ಳಿಗೆ ಕೇಂದ್ರದ 28,655 ಕೋಟಿ ರೂ. ಸಬ್ಸಿ​ಡಿ!

ಈ ಭೇಟಿಯ ಸಮಯದಲ್ಲಿ ಪ್ರಧಾನಿಯವರು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಗೋರಖ್‌ಪುರದ (Gorakhpur) ಏಮ್ಸ್‌ನ (AIIMS) ಅತ್ಯಾದುನಿಕ ಸುಸಜ್ಜಿತ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ. ಜುಲೈ 22, 2016 ರಲ್ಲಿ ಪ್ರಧಾನಿಯವರು ಇದರ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಸ್ಥಾಪಿಸಲಾಗಿರುವ ಗೋರಖ್‌ಪುರ ಏಮ್ಸ್ ಈ ಸುಸಜ್ಜಿತ ಕಟ್ಟಡದಲ್ಲಿ 750 ಹಾಸಿಗೆಗಳ ಆಸ್ಪತ್ರೆ, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಆಯುಷ್ ಕಟ್ಟಡ, ಎಲ್ಲಾ ಸಿಬ್ಬಂದಿಗೆ ವಸತಿ ಸೌಲಭ್ಯ, ಪಿಜಿ ಮತ್ತು ಯುಜಿಗೆ ಹಾಸ್ಟೆಲ್ ವಸತಿಯನ್ನು ಕೂಡ ಒಳಗೊಂಡಿದೆ. 

Follow Us:
Download App:
  • android
  • ios