Tata Group: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪ್ರವೇಶ, ಘಟಕ ಸ್ಥಾಪನೆಗೆ ಕರ್ನಾಟಕದಲ್ಲೂ ಸ್ಥಳ ಪರಿಶೀಲನೆ

ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರವೇಶಿಸೋ ಬಗ್ಗೆ ಟಾಟಾ ಗ್ರೂಪ್ ಈ ಹಿಂದೆಯೇ ಆಸಕ್ತಿ ತೋರಿಸಿತ್ತು.ಆದ್ರೆ ಇದೇ ಮೊದಲ ಬಾರಿಗೆ ಟಾಟಾ ಸಂಸ್ಥೆ ಸೆಮಿಕಂಡಕ್ಟರ್ ಉದ್ಯಮಕ್ಕೆ ಕಾಲಿರಿಸಿರೋ ಬಗ್ಗೆ ಸುದ್ದಿಯಾಗಿದೆ.ಆದ್ರೆ ಈ ಬಗ್ಗೆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tata in talks with 3 southern states to set up $300 million semiconductor assembly unit anu

ಟಾಟಾ ಸಮೂಹ ಸಂಸ್ಥೆ (Tata group) 300 ಮಿಲಿಯನ್ ಡಾಲರ್ ವೆಚ್ಚದಲ್ಲಿ ಅರೆವಾಹಕ ( semiconductor) ಜೋಡಣೆ ( assembly) ಹಾಗೂ ಪರೀಕ್ಷಾ (test) ಘಟಕ ಸ್ಥಾಪಿಸೋ ಬಗ್ಗೆ ಮೂರು ರಾಜ್ಯಗಳೊಂದಿಗೆ ಮಾತುಕತೆಯಲ್ಲಿ ತೊಡಗಿದೆ ಎಂದು ಎರಡು ಆಪ್ತಮೂಲಗಳು ತಿಳಿಸಿವೆ. ಉನ್ನತ ತಂತ್ರಜ್ಞಾನ(high-tech) ಉತ್ಪಾದನಾ ಕ್ಷೇತ್ರದಲ್ಲಿ ಮುನ್ನುಗುವ ಸಂಘಟಿತ ಪ್ರಯತ್ನದ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಟಾಟಾ ಸಮೂಹ ನಿರ್ಧರಿಸಿದೆ ಎಂಬುದು ತಿಳಿದು ಬಂದಿದೆ.

ಅರೆವಾಹಕ ಜೋಡಣೆ ಹಾಗೂ ಪರೀಕ್ಷಾ ಹೊರಗುತ್ತಿಗೆ ಘಟಕ (outsourced semiconductor assembly and test) ನಿರ್ಮಾಣಕ್ಕೆ ಸ್ಥಳ ಹುಡುಕೋ ಬಗ್ಗೆ ಟಾಟಾ ಗ್ರೂಪ್ ದಕ್ಷಿಣ ರಾಜ್ಯಗಳಾದ ಕರ್ನಾಟಕ(Karnataka), ತಮಿಳುನಾಡು(Tamil Nadu) ಹಾಗೂ ತೆಲಂಗಣದೊಂದಿಗೆ(Telangana) ಈಗಾಗಲೇ ಮಾತುಕತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ ಈ ವಿಷಯವನ್ನುಈಗಲೇ ಬಹಿರಂಗಪಡಿಸಲು ಟಾಟಾ ಸಂಸ್ಥೆ ನಿರಾಕರಿಸಿದೆ. ಈ ಹಿಂದೆ ಕೂಡ ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರವೇಶಿಸಲು ಆಸಕ್ತಿ ಹೊಂದಿರೋದಾಗಿ ಅದು ತಿಳಿಸಿತ್ತು. ಆದ್ರೆ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಟಾಟಾ ಕಾಲಿಟ್ಟಿರೋದು ಹಾಗೂ ಅದರ ಗಾತ್ರದ ಬಗ್ಗೆ ಸುದ್ದಿಯಾಗಿರೋದು ಮಾತ್ರ ಇದೇ ಮೊದಲು.

Sensexಗೂ ಹೊಸ ಸೋಂಕಿನ ಶಾಕ್‌ : ಜಗತ್ತಿನೆಲ್ಲೆಡೆ ಷೇರುಗಳ ಬೆಲೆ ಕುಸಿತ!

OSAT ಘಟಕದಲ್ಲಿ ಎರಕ ಹೊಯ್ದ ಸಿಲಿಕಾನ್(silicon) ಬಿಲ್ಲೆಗಳನ್ನು(wafers) ಪ್ಯಾಕ್(pack), ಜೋಡಣೆ (assemble) ಹಾಗೂ ಪರೀಕ್ಷೆ( test) ಮಾಡಿ ಅವುಗಳನ್ನು ಸೆಮಿಕಂಡಕ್ಟರ್ ಚಿಪ್ ಗಳನ್ನಾಗಿ ಮಾರ್ಪಡಿಸಲಾಗುತ್ತದೆ.ಟಾಟಾ ಸಂಸ್ಥೆ ಈಗಾಗಲೇ ಘಟಕ(plant) ನಿರ್ಮಾಣಕ್ಕೆಕೆಲವು ಸ್ಥಳಗಳನ್ನು ಪರಿಶೀಲಿಸಿದ್ದು, ಮುಂದಿನ ತಿಂಗಳು ಅಂತಿಮಗೊಳಿಸೋ ನಿರೀಕ್ಷೆಯಿದೆ ಎಂದು ಮೂಲವೊಂದು ಮಾಹಿತಿ ನೀಡಿದೆ. 'ಟಾಟಾ ಸಂಸ್ಥೆ ಸಾಫ್ಟವೇರ್ ವಿಷಯದಲ್ಲಿ ತುಂಬಾ ಬಲಿಷ್ಠವಾಗಿದ್ದು, ಹಾರ್ಡ್ ವೇರ್ ಗೆ ಸಂಬಂಧಿಸಿ ಒಂದಿಷ್ಟು ಹೊಸತನವನ್ನು ಸೃಷ್ಟಿಸಲು ಬಯಸುತ್ತಿದ್ದು, ದೀರ್ಘಾವಧಿಯಲ್ಲಿ ಅದು ಸಂಸ್ಥೆಯ ಬೆಳವಣಿಗೆಗೆ ಅತ್ಯವಶ್ಯಕವಾಗಿದೆ ಕೂಡ' ಎಂದು ಮೂಲವೊಂದು ತಿಳಿಸಿದೆ. ಆದ್ರೆ ಈ ಸುದ್ದಿಗೆ ಸಂಬಂಧಿಸಿ ಟಾಟಾ ಸಂಸ್ಥೆಯಾಗಲಿ ಅಥವಾ ಸಂಬಂಧಿಸಿದ ಮೂರು ರಾಜ್ಯಗಳಾಗಲೀ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟಾಟಾದ ಈ ಹೊಸ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹೆಚ್ಚಿಸೋ ಪ್ರಯತ್ನದ ಭಾಗವೇ ಆಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನೀಡುತ್ತಿರೋ ಪ್ರೋತ್ಸಾಹದಿಂದಲೇ ಇಂದು ಭಾರತ ವಿಶ್ವದ ಎರಡನೇ ಅತೀದೊಡ್ಡ ಸ್ಮಾರ್ಟ್ ಫೋನ್ ಉತ್ಪಾದನಾ ರಾಷ್ಟ್ರವಾಗಿ ಬೆಳೆದಿರೋದು.

ಭಾರತದ ಪ್ರಮುಖ ಸಾಫ್ಟ್ ವೇರ್ ಸೇವಾ ರಫ್ತುದಾರ
ಭಾರತದ ಪ್ರಮುಖ ಸಾಫ್ಟ್ ವೇರ್ ಸೇವಾ ರಫ್ತುದಾರ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಟಾಟಾ ಗ್ರೂಪ್ ಭಾಗವಾಗಿದೆ. ಟಾಟಾ ಗ್ರೂಪ್ ಅಟೋಮೊಬೈಲ್ಸ್ ನಿಂದ ಹಿಡಿದು ವಿಮಾನಯಾನದ ತನಕ ಪ್ರತಿ ಕ್ಷೇತ್ರದಲ್ಲೂಆಸಕ್ತಿ ತೋರಿಸುತ್ತಿದ್ದು, ಹೈ ಎಂಡ್ ಎಲೆಕ್ಟ್ರಾನಿಕ್ಸ್ ಹಾಗೂ ಡಿಜಿಟಲ್ ಉದ್ಯಮದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ಸಂಸ್ಥೆಯ ಚೇರ್ಮನ್ ಎನ್. ಚಂದ್ರಶೇಖರನ್ ಈ ಹಿಂದೆ ತಿಳಿಸಿದ್ದರು. ಇಂಟೆಲ್, ಅಡ್ವಾನ್ಡ್ ಮೈಕ್ರೋ ಡಿವೈಸ್ಸ್ (AMD) ಹಾಗೂ ಎಸ್ ಟಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಕಂಪನಿಗಳು ಟಾಟಾದ OSAT ಉದ್ಯಮದ ಗ್ರಾಹಕರರಾಗೋ( clients) ಸಾಧ್ಯತೆಯಿದೆ.

Post Office Scheme:ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 2000ರೂ. ಪಕ್ಕಾ

ಮುಂದಿನ ವರ್ಷ ಕಾರ್ಯಾರಂಭ
ಟಾಟಾದ ಸೆಮಿಕಂಡಕ್ಟರ್ ಘಟಕ ಮುಂದಿನ ವರ್ಷದ ಅಂತ್ಯಕ್ಕೆ ಕಾರ್ಯಾರಂಭ ಮಾಡೋ ಸಾಧ್ಯತೆಯಿದ್ದು, 4,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಸೂಕ್ತ ವೇತನಕ್ಕೆ ಕೌಶಲ್ಯಯುತ ನೌಕರರು ಲಭ್ಯತೆ ದೀರ್ಘಾವಧಿಯಲ್ಲಿಯೋಜನೆ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲ ತಿಳಿಸಿದೆ. ಕೌಶಲ್ಯಯುತ ಕಾರ್ಮಿಕರನ್ನು ಹೊಂದಿರೋ ಸ್ಥಳವನ್ನುಹುಡುಕೋದು ಕಷ್ಟದ ಕೆಲಸವಾಗಿದೆ. ಸ್ಥಳ ಅಂತಿಮವಾದ ತಕ್ಷಣ ಟಾಟಾ ಸಂಸ್ಥೆ ಘಟಕಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲಿದೆ ಎಂದು ಮೂಲ ಹೇಳಿದೆ. ಟಾಟಾ ಸಂಸ್ಥೆ ಈಗಾಗಲೇ ತಮಿಳು ನಾಡಿನ ದಕ್ಷಿಣ ಭಾಗದಲ್ಲಿ ಹೈ ಟೆಕ್ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕವನ್ನು ಆರಂಭಿಸಿದೆ. -

 

 

Latest Videos
Follow Us:
Download App:
  • android
  • ios