Asianet Suvarna News Asianet Suvarna News

UP Elections: ಮೋದಿ, ಯೋಗಿ ಸಂಭಾಷಣೆಯ ಸೀಕ್ರೆಟ್ ರಿವೀಲ್ ಮಾಡಿದ ರಾಜನಾಥ್ ಸಿಂಗ್!

* ಪಿಎಂ ಮೋದಿ, ಸಿಎಂ ಯೋಗಿ ಫೋಟೋ ವೈರಲ್

* ಯೋಗಿ ಹೆಗಲ ಮೇಲೆ ಕೈ ಹಾಕಿದ್ದ ಮೋದಿ ಏನು ವಿವರಿಸುತ್ತಿದ್ದರು?

* ಮೋದಿ, ಯೋಗಿ ಸಂಭಾಷಣೆಯ ಸೀಕ್ರೆಟ್ ರಿವೀಲ್ ಮಾಡಿದ ರಾಜನಾಥ್ ಸಿಂಗ್

Uttar Pradesh Elections Rajnath Singh Reveals The Secret Of PM Modi CM Yogi Adityanath Viral Photo pod
Author
Bangalore, First Published Nov 25, 2021, 6:39 PM IST
  • Facebook
  • Twitter
  • Whatsapp

ಲಕ್ನೋ(ನ.25): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಅವರ ಫೋಟೋ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಫೋಟೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ್ ಅವರ ಭುಜದ ಮೇಲೆ ಕೈ ಹಾಕಿ, ಯುಪಿ ಸಿಎಂಗೆ ಏನೋ ವಿವರಿಸುತ್ತಿದ್ದ ದೃಶ್ಯವಿತ್ತು. ಜನಸಂಖ್ಯೆಯ ವಿಚಾರದಲ್ಲಿ ದೇಶದ ಅತಿ ದೊಡ್ಡ ರಾಜ್ಯ ಯುಪಿಯಲ್ಲಿ (UP Elections) ಮುಂದಿನ ವರ್ಷ ವಿಧಾನಸಭೆ ಚುನಾವಣೆ (Assembly Elections) ನಡೆಯಲಿರುವುದರಿಂದ ಈ ಫೋಟೋ ಕುರಿತು ಜನರಲ್ಲಿ ಹಾಗೂ ರಾಜಕೀಯ ಪಕ್ಷಗಳಲ್ಲಿ ಅನೇಕ ಊಹಾಪೋಹಗಳು ಹರಿದಾಡಿದ್ದವು. ಈ ಚಿತ್ರದಲ್ಲಿ ಯೋಗಿ ಅವರ ಭುಜದ ಮೇಲೆ ಕೈ ಹಾಕಿದ ಮೋದಿ ಐದು ವರ್ಷಗಳ ಕಾರ್ಯಶೈಲಿಯನ್ನು ಹೊಗಳುತ್ತಿದ್ದಾರೆ ಎಂದು ಬಿಜೆಪಿ (BJP) ಬೆಂಬಲಿಗರು ಹೇಳಿಕೊಂಡಿದ್ದರು. ಬಿಜೆಪಿಯ ವಿರೋಧ ಪಕ್ಷಗಳು ಈ ಫೋಟೋದಲ್ಲಿ ಯೋಗಿಯನ್ನು ಉತ್ತಮವಾಗಿ ಆಡಳಿತ ನಡೆಸಬೇಕು ಎಂದು ಮೋದಿ ಹೇಳುತ್ತಿದ್ದಾರೆಂದು ವ್ಯಂಗ್ಯವಾಡಿದ್ದರು. ಆದರೀಗ, ಬಿಜೆಪಿಯ ಪ್ರಬಲ ನಾಯಕ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Union Minister Rajnath Singh) ಈ ಫೋಟೋದಲ್ಲಿ ಪ್ರಧಾನಿ ಯೋಗಿಗೆ ಏನು ಹೇಳುತ್ತಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

Uttar Pradesh | ಮೋದಿ-ಯೋಗಿ ‘ಡಬಲ್‌ ಎಂಜಿನ್‌’ ಫೋಟೋ ವೈರಲ್‌

ಕಳೆದ ವಾರ ಟ್ವಿಟ್ಟರ್‌ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityyanath)  ತನ್ನ ಮತ್ತು ಮೋದಿಜಿಯವರ ಫೋಟೋವನ್ನು ಟ್ವೀಟ್ ಮಾಡಿದ್ದರು, ಅದರಲ್ಲಿ ಮೋದಿಜಿ ಅವರ ಭುಜದ ಮೇಲೆ ಕೈಯಿಟ್ಟು ಏನೋ ಹೇಳುತ್ತಿದ್ದರು. ಮೋದಿ ಯೋಗಿಯ ಕಿವಿಯಲ್ಲಿ ಹೇಳಿದ್ದೇನು ಗೊತ್ತಾ? ಯೋಗಿಜಿ ವೇಗವಾಗಿ ಬ್ಯಾಟಿಂಗ್ ಮಾಡಬೇಕು. ಶಕ್ತಿಯುತವಾಗಿ ಚೆನ್ನಾಗಿ ಆಟವಾಡಿ. ಗೆಲುವು ನಿಶ್ಚಿತ ಎಂದಿರುವುದಾಗಿ ರಾಜನಾಥ್ ಸಿಂಗ್ (Rajnath Singh) ಟ್ವೀಟ್ ಮಾಡಿದ್ದಾರೆ. ಗಮನಾರ್ಹವಾಗಿ, ಜನಸಂಖ್ಯೆಯ ದೃಷ್ಟಿಯಿಂದ, ಮುಂದಿನ ವರ್ಷ ದೇಶದ ಅತಿದೊಡ್ಡ ರಾಜ್ಯ ಯುಪಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು (Uttar Pradesh Elections 2022) ಸಾರ್ವತ್ರಿಕ ಚುನಾವಣೆ-2024 ರ ಮೊದಲ 'ಸೆಮಿಫೈನಲ್' ಎಂದು ಪರಿಗಣಿಸಲಾಗುತ್ತಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದಿಂದ ಕಠಿಣ ಪೈಪೋಟಿ ಪಡೆಯುವ ಸಾಧ್ಯತೆಯಿದೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ಅವರ ಸಮಾಜವಾದಿ ಪಕ್ಷ (Samajwadi Party) ಚುನಾವಣೆಗೆ ಮುನ್ನ ಕೆಲವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದೆ. ಎಸ್‌ಪಿಯು ಆರ್‌ಎಲ್‌ಡಿ, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ, ಮಹಾನ್ ದಳ ಮತ್ತು ಅಪ್ನಾ ದಳ ಕಾಮೆರವಾಡಿ ಮತ್ತು 'ಎಎಪಿ' ಜೊತೆ ಮೈತ್ರಿ ಹೊಂದಿದೆ ಮತ್ತು ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷವು ಇನ್ನೂ ಸರದಿಯಲ್ಲಿದೆ. ಅಂದಹಾಗೆ, ಬಿಜೆಪಿ ಮತ್ತು ಎಸ್‌ಪಿ ಹೊರತುಪಡಿಸಿ, ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಕಾಂಗ್ರೆಸ್ ಪಕ್ಷಗಳು ಕೂಡ ಅಖಾಡಕ್ಕೆ ಇಳಿದಿವೆ. ಅಸಾದುದ್ದೀನ್ ಓವೈಸಿ (Asaduddin Owaisi) ಅವರ ಪಕ್ಷ ಎಐಎಂಐಎಂ ಕೂಡ ಹಲವು ಮುಸ್ಲಿಂ ಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ತಲೆಕೆಳಗಾದ ಚುನಾವಣಾ ಲೆಕ್ಕಾಚಾರ, ಗೊಂದಲದಲ್ಲಿ ಪಕ್ಷಗಳು!

ಎಲ್ಲಾ ಮೂರು ಕೃಷಿ ಕಾನೂನುಗಳನ್ನು (Farm Laws) ಹಿಂತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ದೊಡ್ಡ ನಿರ್ಧಾರದ ನಂತರ, ಈಗ 2022 ರ ಚುನಾವಣೆಗೆ ಬಹಳ ಮುಖ್ಯವಾದ ಉತ್ತರ ಪ್ರದೇಶ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸುಳಿವು ಲಭಿಸಿದೆ. ಶನಿವಾರ, ಆರ್‌ಎಲ್‌ಡಿ ಅಧ್ಯಕ್ಷ (RLD President) ಜಯಂತ್ ಚೌಧರಿ (Jayant Chaudhari) ಅವರ ಸಾರ್ವಜನಿಕ ಸಭೆಯಲ್ಲಿ ಸುಮಾರು ಶೇ 70 ರಷ್ಟು ಮುಸ್ಲಿಮರಿದ್ದರು (Muslims), ಆದರೂ ಜಯಂತ್‌ರವರು ರಾಮ್ ರಾಮ್ ಎನ್ನುವ ಮೂಲಕ ಸಾರ್ವಜನಿಕ ಸಭೆಯನ್ನು ಪ್ರಾರಂಭಿಸಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಜೊತೆಗಿನ ಮೈತ್ರಿಯ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿರುವುದು ಕಂಡುಬಂದಿದೆ. ಕೃಷಿ ಕಾನೂನು ಹಿಂಪಡೆದ ನಂತರ ಸಮಾಜವಾದಿ ಪಕ್ಷ (Samajwadi Party) ಅವರಿಗೆ ಹೆಚ್ಚಿನ ಸ್ಥಾನಗಳನ್ನು ನೀಡುವ ಉತ್ಸಾಹದಲ್ಲಿ ಇಲ್ಲ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios