ಪ್ರಧಾನಿ ಮೋದಿ, Goolge ಸಿಇಓ ಪಿಚೈ ಮಾತುಕತೆ, ಭಾರತದಲ್ಲಿ 75,000 ಕೋಟಿ ಹೂಡಿಕೆ!
ಕೊರೋನಾ ವೈರಸ್‌ನಿಂಗ ಕಂಗೆಟ್ಟ ಸಂದರ್ಭದಲ್ಲಿ ಗೂಗಲ್ ಭಾರತಕ್ಕೆ ಸಿಹಿ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ನಡೆಸಿದ ಗೂಗಲ್ CEO ಸುಂದರ್ ಪಿಚೈ ಭಾರತದಲ್ಲಿ ಬರೋಬ್ಬರಿ 75,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಡಿಜಿಟಲ್ ಇಂಡಿಯಾ ಸೇರಿದಂತೆ ಪ್ರಧಾನಿ ಮೋದಿ ಕನಸಿಗೆ ಮತ್ತಷ್ಟು ವೇಗ ನೀಡಲು ಗೂಗಲ್ ಸಜ್ಜಾಗಿದೆ.
ನವದೆಹಲಿ(ಜು.13): ಕೊರೋನಾ ವೈರಸ್‌ನಿಂದ ಕಂಗೆಟ್ಟಿರುವ ದೇಶದ ಆರ್ಥಿಕತೆಗೆ ಪುನಶ್ಚೇತರ ನೀಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡಲು ರೆಡ್‌ಕಾರ್ಪೆಟ್ ಸ್ವಾಗತ ನೀಡಿದೆ. ಈ ಬೆಳೆವಣಿಗೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ, Google ಸಿಇಓ ಸುಂದರ್ ಪಿಚೈ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಆರ್ಥಿಕ ಚೇತರಿಕೆಯಲ್ಲಿ ಭಾರತವೇ ಮುಂಚೂಣಿ: ಬಂಡವಾಳ ಹೂಡಲು ಮೋದಿ ಕರೆ!
ಉದ್ಯಮಿಗಳು, ಕೈಗಾರಿಗಳು ಸೇರಿದಂತೆ ಹಲವು ಕ್ಷೇತ್ರದ ದಿಗ್ಗಜರೊಂದಿಗೆ ಪ್ರಧಾನಿ ಮೋದಿ ಕೊರೋನಾ ವೈರಸ್ ಸೃಷ್ಟಿಸಿದ ಸವಾಲು ಹಾಗೂ ಪರಿಹಾರದ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ Goolge ಸಿಇಓ ಸುಂದರ್ ಪಿಚೈ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ.
ಸಾಮಾನ್ಯ ನೌಕರನಿಗಿಂತ 1085 ಪಟ್ಟು ಅಧಿಕ ವೇತನ ಪಡೆಯುವ ಪಿಚೈ!.
ಅತ್ಯಾಧುನಿಕ ತಂತ್ರಜ್ಞಾನವನ್ನು ರೈತರು, ಯುವಕರು, ಉದ್ಯಮಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಬಳೆಕೆ ಕುರಿತು ಮಾತನಾಡಿದ್ದೇವೆ. ಹಲವು ವಿಚಾರಗಳ ಕುರಿತು ಸುದೀರ್ಘ ಮಾತುಕತೆ ಫಲಪ್ರದವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಡಿಜಿಟೈಸೇಶನ್ ಇಂಡಿಯಾ ಮೂಲಕ ಭಾರತದಲ್ಲಿ Goolge ಬರೋಬ್ಬರಿ 75,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಸುಂದರ್ ಪಿಚೈ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಜೊತೆ ಉಪಯುಕ್ತ ಮಾತುಕತೆ ನಡೆಸಿದ್ದೇನೆ. ಕೊರೋನಾ ವೈರಸ್ ಸಂದರ್ಭದಲ್ಲಿ ತಂತ್ರಜ್ಞಾನ ಬಳಸಿ ಸವಾಲನ್ನು ಎದುರಿಸುವುದು ಹೇಗೆ? ಸೈಬರ್ ಸೆಕ್ಯೂರಿಟಿ ಹಾಗೂ ಡಾಟಾ ಕುರಿತು ಮಾತನಾಡಿದ್ದೇವೆ ಎಂದು ಪಿಚೈ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಂದರ್ ಪಿಚೈ ಫಲಪ್ರದ ಮಾತುಕತೆಗೆ ಪ್ರಧೋನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ. ನಿಮ್ಮ ಡಿಜಿಟಲ್ ಇಂಡಿಯಾ ಜೊತೆ ಕೆಲಸ ಮಾಡಲು Goolge ಉತ್ಸುಕವಾಗಿದೆ. ಮುಂದಿನ ನಿರ್ಧಾರಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಸುಂದರ್ ಪಿಚೈ ಹೇಳಿದ್ದಾರೆ.
News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"