ಚಮೋಲಿ (ಫೆ.12): ನೀರ್ಗಲ್ಲು ಸ್ಫೋಟ ದುರಂತಕ್ಕೆ ದೇವಿಯ ಶಾಪವೇ ಕಾರಣ. ಗ್ರಾಮದಲ್ಲಿದ್ದ ದೇವಿಯ ದೇಗುಲವನ್ನು ನಿರ್ನಾಮ ಮಾಡಿದ್ದರಿಂದ ಈ ಮಟ್ಟಿನ ಸಾವು-ನೋವು ಸಂಭವಿಸಿದೆ ಎಂದು ಸ್ಥಳೀಯರು ಆಪಾದಿಸುತ್ತಿದ್ದಾರೆ. 

ರಿಷಿ ನಗರ ಮತ್ತು ಧೌಲಿಗಂಗಾ ಜಂಕ್ಷನ್‌ನಲ್ಲಿ ರೈನಿ ಗ್ರಾಮದ ದೇವಿಯ ದೇಗುಲ ಇತ್ತು. ನದಿಯ ದಡವನ್ನು ಸುತ್ತಿ ದೇಗುಲಕ್ಕೆ ಹೋಗುವುದು ಕಷ್ಟವಾಗಿತ್ತು. ಹಾಗಾಗಿ ಗ್ರಾಮಸ್ಥರೆಲ್ಲ ಸೇರಿ ಮುಖ್ಯ ದೇಗುಲವನ್ನು ಪ್ರತಿನಿಧಿಸುವ ಸಣ್ಣ ದೇಗುಲವನ್ನು ರಸ್ತೆ ಬದಿ ನಿರ್ಮಿಸಿಕೊಂಡಿದ್ದರು. 

206 ಮಂದಿ ನಾಪತ್ತೆ: ಹೈಟೆಕ್‌ ಶೋಧಕ್ಕೂ ಸಿಗುತ್ತಿಲ್ಲ ನೀರ್ಗಲ್ಲು ಸ್ಫೋಟ ಸಂತ್ರಸ್ತರು!

ಆದರೆ ಕಳೆದ ವರ್ಷ ಸ್ಥಳೀಯ ಅಧಿಕಾರಿಗಳು ಮತ್ತು ಜಲವಿದ್ಯುತ್‌ಗಾರದ ಅಧಿಕಾರಿಗಳು ಭಾರೀ ವಿರೋಧದ ನಡುವೆಯೂ ದೇಗುಲವನ್ನು ಧ್ವಂಸ ಮಾಡಿದ್ದರು. 

ಸದ್ಯ ಪ್ರವಾಹದಿಂದಾಗಿ ಮುಖ್ಯ ದೇಗುಲವೂ ಸಂಪೂರ್ಣ ಕೊಚ್ಚಿ ಹೋಗಿದೆ. ಹೀಗಾಗಿ ಈ ದುರಂತಕ್ಕೆ ದೇವಿಯ ಶಾಪವೇ ಕಾರಣ ಎನ್ನುತ್ತಿದ್ದಾರೆ ಸ್ಥಳೀಯರು.