ನವದೆಹಲಿ[ಫೆ.11]: ಆರೆಸ್ಸೆಸ್‌ ಮುಖಂಡರು ಹಾಗೂ ಆರೆಸ್ಸೆಸ್‌ ಕಚೇರಿಗಳಿಗೆ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಬೆದರಿಕೆ ಇದೆ. ಉಗ್ರಗಾಮಿಗಳು ಇವರ ಮೇಲೆ ಸುಧಾರಿತ ಸ್ಫೋಟಕಗಳು (ಐಇಡಿ) ಅಥವಾ ಐಇಡಿ ತುಂಬಿದ ವಾಹನಗಳನ್ನು ಬಳಸಿ ದಾಳಿ ಮಾಡಬಹುದು ಎಂದು ಗುಪ್ತಚರ ದಳÜ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರ, ಪಂಜಾಬ್‌, ದಿಲ್ಲಿ, ಉತ್ತರಪ್ರದೇಶ, ಅಸ್ಸಾಂ, ರಾಜಸ್ಥಾನ- ಮುಂತಾದೆಡೆ ಈ ದಾಳಿ ನಡೆಯಬಹುದು. ಜಾಗತಿಕ ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ಈ ಅನಾಮಿಕ ಭಯೋತ್ಪಾದಕರು ಆರೆಸ್ಸೆಸ್‌ ಕಚೇರಿಗಳು, ಆರೆಸ್ಸೆಸ್‌ ನಾಯಕರು ಹಾಗೂ ಪೊಲೀಸ್‌ ಠಾಣೆ ಮೇಲೆ ಮುಂಬರುವ ದಿನಗಳಲ್ಲಿ ದಾಳಿ ನಡೆಸಬಹುದು ಎಂಬ ಮಾಹಿತಿ ಇದೆ. ಹೀಗಾಗಿ ಎಲ್ಲ ರಾಜ್ಯ ಸರ್ಕಾರಗಳು ಸೂಕ್ತ ಭದ್ರತಾ ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ ಈ ರಾಜ್ಯಗಳ ಆರೆಸ್ಸೆಸ್‌ ಮುಖಂಡರು ಹಾಗೂ ಕಚೇರಿಗಳ ಭದ್ರತೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.