ಜಾಗತಿಕ ನಾವೀನ್ಯತೆ ಸೂಚ್ಯಂಕ 2021ದಲ್ಲಿ 2 ಸ್ಥಾನ ಏರಿದ ಭಾರತ 2015ರಲ್ಲಿ 81ನೇ ಸ್ಥಾನ, 2021ರಲ್ಲಿ 46ನೇ ಸ್ಥಾನ ಕೊರೋನಾ ನಡುವೆ ಸ್ವಾವಲಂಬನೆ ಭಾರತ ನಿರ್ಮಾಣ  

ನವದೆಹಲಿ(ಸೆ.20): ಜಾಗತಿಕ ನಾವೀನ್ಯತೆ ಸೂಚಂಕ್ಯದಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ. ಕೊರೋನಾ ಎರಡು ಅಲೆ, ಲಾಕ್‌ಡೌನ್, ಆರ್ಥಿಕ ಸಂಕಷ್ಟದ ನಡುವೆ ಭಾರತ ಮತ್ತಷ್ಟು ಸದೃಢವಾಗುತ್ತಿದೆ. ಇದು ಜಾಗತಿಕ ನಾವೀನ್ಯತೆ ಸೂಚ್ಯಂಕ 2021( Global Innovation Index 2021)ನಲ್ಲಿ ಭಾರತ ಕಳೆದ ವರ್ಷಕ್ಕೆ ಹೋಲಿಸಿದರೆ 2ನೇ ಸ್ಥಾನ ಏರಿಕೆ ಕಂಡಿದೆ. ಈ ಮೂಲಕ ಭಾರತ 46ನೇ ಸ್ಥಾನ ಪಡೆದಿದೆ.

Scroll to load tweet…

ರಫ್ತುದಾರರ ಸಮಸ್ಯೆಗೆ ತಕ್ಷಣ ಪರಿಹಾರ, ನೆರವು; ಬ್ರಾಂಡ್ ಇಂಡಿಯಾ ಕಟ್ಟಲು ಮಹತ್ವದ ನಿರ್ಧಾರ!

2015ರಲ್ಲಿ Global Innovation Indexನಲ್ಲಿ ಭಾರತ 81ನೇ ಸ್ಥಾ ಪಡೆದಿತ್ತು. ದೇಶದಲ್ಲಿ ಕೈಗೊಂಡ ಹಲವು ಯೋಜನೆಗಳಿಂದ 2021ರಲ್ಲಿ 46ನೇ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಕೊರೋನಾ ಸಂಕಷ್ಟದ ನಡುವೆಯೂ ಭಾರತ ಜಾಗತಿಕ ನಾವೀನ್ಯತೆ ಸೂಚಂಕ್ಯದಲ್ಲಿ ಮುನ್ನುಗ್ಗುತ್ತಿದೆ. ದೇಶದ ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬನೆ ಭಾರತ ಮುನ್ನಡೆಸುವಲ್ಲಿ ಇದು ಪ್ರಮುಖವಾಗಿದೆ.

ಖಾಸಗಿಕರಣ: ಕೇಂದ್ರಕ್ಕೆ ನೀತಿ ಆಯೋಗದಿಂದ 12 ಸಂಸ್ಥೆಗಳ ಪಟ್ಟಿ ಸಲ್ಲಿಕೆ!

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಕೈಗೊಂಡ ಇನೋವೇಶನ್ ಕಾರ್ಯಕ್ರಮಗಳು ಭಾರತದ ಸ್ಥಾನ ಹೆಚ್ಚಿಸಿದೆ. ಖಾಸಗಿ ಸಂಶೋಧನಾ ಸಂಸ್ಥೆಯ ಅವರಿತ ಶ್ರಮ, ವೈಜ್ಞಾನಿಕ ಇಲಾಖೆ, ಪರಮಾಣು ಶಕ್ತಿ ಇಲಾಖೆ, ವಿಜ್ಞಾನ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಇಲಾಖೆ ಸೇರಿದಂತೆ ಭಾರತದ ಸರ್ಕಾರಿ ಸಂಸ್ಥೆಗಳ ಇನೋವೇಶನ್ ವ್ಯವಸ್ಥೆಯಿಂದ ಭಾರತ ಸಮೃದ್ಧಗೊಂಡಿದೆ.

Scroll to load tweet…

ನೀತಿ ಆಯೋಗದ ಸಭೆಯಲ್ಲಿ ಮೋದಿ ಮುಂದೆ ಕೆಲ ಮಹತ್ವದ ಬೇಡಿಕೆ ಇಟ್ಟ ಸಿಎಂ

ನೀತಿ(NITI)ಆಯೋಗ ಭಾರತದಲ್ಲಿ ಹಲವು ಸುಧಾರಾಣಾತ್ಮಕ ಕ್ರಮ ಕೈಗೊಂಡಿದೆ. ಆಧುನಿಕ ಜಗತ್ತಿನಲ್ಲಿ ಭಾರತವನ್ನು ಮತ್ತಷ್ಟು ಬಲಪಡಿಸಿದೆ. ಎಲೆಕ್ಟ್ರಿಕ್ ವಾಹನಗಳು, ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಬಾಹ್ಯಾಕಾಶ, ಪರ್ಯಾಯ ಇಂಧನ ಮೂಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೀತಿ ಆಧಾರಿತ ಆವಿಷ್ಕಾರಗಳನ್ನು ತರುವ ರಾಷ್ಟ್ರೀಯ ಪ್ರಯತ್ನಗಳ ಆಪ್ಟಿಮೈಸೇಶನ್ ಖಚಿತಪಡಿಸಿಕೊಳ್ಳಲು NITI ಆಯೋಗವು ನಿರಂತರ ಶ್ರಮಿಸುತ್ತಿದೆ.

ನಾವೀನ್ಯತೆಯಲ್ಲಿ ರಾಜ್ಯ ನಂ.1: ಸತತ 2ನೇ ಬಾರಿ ಪ್ರಥಮ ಸ್ಥಾನ!

ರಾಷ್ಟ್ರೀಯ ಆರ್ಥಿಕ ಬೆಳವಣಿಗೆ ಪೂರಕವಾದ ವಾತಾರವಣನ್ನು ಭಾರತದಲ್ಲಿ ನಿರ್ಮಿಸಲಾಗಿದೆ. ದೂರದೃಷ್ಟಿ ಆಡಳಿತದಿಂದ ದೇಶದ ನಾವೀನ್ಯತೆ ಸಾಮರ್ಥ್ಯಗಳನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಈ ಕಾರ್ಯ್ರಮಗಳಿಂದ ದೇಶದ ಆರ್ಥಿಕತಕೆ ಚೇತರಿಕೆ ನೀಡಲಾಗಿದೆ. 

ಆಯಾ ದೇಶದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳನ್ನು ಪರಿಶೀಲಿಸಲು ಸರ್ಕಾರ GII ಸ್ಥಾಪಿಸಿದೆ. GII ವಿವಿಧ ಸರ್ಕಾರಗಳಿಗೆ ನೀತಿ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ.