Asianet Suvarna News Asianet Suvarna News

ಖಾಸಗಿಕರಣ: ಕೇಂದ್ರಕ್ಕೆ ನೀತಿ ಆಯೋಗದಿಂದ 12 ಸಂಸ್ಥೆಗಳ ಪಟ್ಟಿ ಸಲ್ಲಿಕೆ!

ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿಕರಣಗೊಳಿಸುವ ಪ್ರಕ್ರಿಯೆ| ಕೇಂದ್ರಕ್ಕೆ ನೀತಿ ಆಯೋಗದಿಂದ 12 ಸಂಸ್ಥೆಗಳ ಪಟ್ಟಿ ಸಲ್ಲಿಕೆ!

NITI Aayog submits first list of about 12 PSUs for privatisation pod
Author
Bangalore, First Published Mar 13, 2021, 11:26 AM IST

ನವದೆಹಲಿ(ಮಾ.13): ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವ ನೀತಿ ಆಯೋಗ, 12 ಸಂಸ್ಥೆಗಳ ಮೊದಲ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

ಈ ಪಟ್ಟಿಯಲ್ಲಿ ರಕ್ಷಣಾ ದೃಷ್ಟಿಯಿಂದ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಸಂಸ್ಥೆಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಸೇರಿವೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಹಾಗೂ ಬಂಡವಾಳ ಹಿಂಪಡೆಯುವಿಕೆ ಸಂಬಂಧಿಸಿದ ಕಾರ್ಯದರ್ಶಿಗಳ ಸಮೂಹ ಈ ಪಟ್ಟಿಯನ್ನು ಪರಿಶೀಲನೆ ನಡೆಸಲಿದೆ.

ಕೇಂದ್ರ ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ ಬಂಡವಾಳ ಹಿಂಪಡೆಯುವಿಕೆಯಿಂದ 1.75 ಲಕ್ಷ ಕೋಟಿ ರು. ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣಗೊಳಿಸುವ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್‌ ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದರು.

Follow Us:
Download App:
  • android
  • ios