Asianet Suvarna News Asianet Suvarna News

ಎನ್‌ಜಿಒ ನಡೆಸುತ್ತಿದ್ದ ಅನಾಥಾಶ್ರಮದಲ್ಲಿ ಹೆಣ್ಮಕ್ಕಳನ್ನು ತಲೆಕೆಳಗೆ ನೇತುಹಾಕಿ ಚಿತ್ರಹಿಂಸೆ!

ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

Girls are tortured by hanging upside down in an orphanage at Indore akb
Author
First Published Jan 20, 2024, 7:00 AM IST

ಇಂದೋರ್‌: ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇಂದೋರ್‌ ನಗರದಲ್ಲಿರುವ ‘ವಾತ್ಸಲ್ಯಪುರಂ’ ಎಂಬ ಚಿಕ್ಕ ಹೆಣ್ಣುಮಕ್ಕಳ ಅನಾಥಾಶ್ರಮವನ್ನು ಜೈನ್‌ ವೆಲ್‌ಫೇರ್‌ ಎಂಬ ಎನ್‌ಜಿಒ ಸಂಸ್ಥೆ ನಡೆಸುತ್ತಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಹೆಣ್ಣುಮಕ್ಕಳನ್ನು ವಾರ್ಷಿಕ ಕೇವಲ 5 ರು. ಹಣ ಶುಲ್ಕ ಪಡೆದುಕೊಂಡು ಇಲ್ಲಿ ನೋಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಮಕ್ಕಳಿಗೆ ನಾನಾ ರೀತಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪವನ್ನು ಜೈನ್‌ ಸಂಸ್ಥೆ ತಳ್ಳಿಹಾಕಿದೆ.

ಹೆಣ್ಣು ಹೆತ್ತವಳಿಗೆ ನಡುರಸ್ತೆಯಲ್ಲೇ ಕಾಲಿನಿಂದ ಒದ್ದು ಚಿತ್ರಹಿಂಸೆ! ವಿಡಿಯೋ ವೈರಲ್

ಏನೇನು ಕ್ರೌರ್ಯ?

ಕೊಳಕು ಬಟ್ಟೆ ಧರಿಸಿದ್ದ ಕಾರಣಕ್ಕೆ ನಾಲ್ಕು ವರ್ಷದ ಬಾಲಕಿಗೆ ಥಳಿಸಿ, ಬಾತ್‌ರೂಮಲ್ಲಿ ಕೂಡಿ ಹಾಕಲಾಗಿತ್ತು. ಅಲ್ಲದೇ ಆಕೆಗೆ 2 ದಿನಗಳ ಕಾಲ ಊಟ ನೀಡಿಲ್ಲ. ಮೆಣಸಿನ ಹೊಗೆ ಹಾಕುವುದು, ತಲೆಕೆಳಗಾಗಿ ನೇತುಹಾಕುವ ಶಿಕ್ಷೆ ನೀಡಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ.

ಗೋವಿಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪಿಗಳ ಮನೆ ಧ್ವಂಸಗೊಳಿಸಿ ಮಧ್ಯಪ್ರದೇಶ ಸರ್ಕಾರ!

Follow Us:
Download App:
  • android
  • ios