* ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ವಿಚ್ಛೇದನದ ಆಘಾತಕಾರಿ ಪ್ರಕರಣ* ನಾಲ್ಕು ವರ್ಷ ಪ್ರೀತಿಸಿ ಮದುವೆಯಾದ ಜೋಡಿ* ಮದುವೆಯಾದ ಬೆನ್ನಲ್ಲೇ ಯುವತಿಯ ವರಸೆ ಬದಲು
ಲಕ್ನೋ(ಮೇ.17): ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ವಿಚ್ಛೇದನದ ಆಘಾತಕಾರಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ. ಇಲ್ಲಿ ಪ್ರೇಮ ವಿವಾಹದ ನಂತರ ವಧು ಹನಿಮೂನ್‌ನಲ್ಲಿ ಪತಿಯೊಂದಿಗೆ ದೈಹಿಕ ಸಂಬಂಧವನ್ನು ನಿರಾಕರಿಸಿ ಮರುದಿನ ವಿಚ್ಛೇದನ ನೀಡಿದ್ದಾಳೆ. ಈ ಪ್ರಕರಣ ಜನರಲ್ಲಿ ಅಚ್ಚರಿ ಮೂಡಿಸಿದೆ. ಪ್ರೇಮವಿವಾಹ ಆದ ಮೇಲೂ ಯಾಕೆ ಇಂತಹ ಹೆಜ್ಜೆ ಇಟ್ಟಿದ್ದಾರೆ ಎಂಬುವುದೇ ಸದ್ಯದ ಪ್ರಶ್ನೆ.
ಏನಿದು ಪ್ರಕರಣ?
ಆದರೆ, ಮಾಹಿತಿ ಪ್ರಕಾರ ಮೊರಾದಾಬಾದ್ ನಗರದಲ್ಲಿ ನೆಲೆಸಿರುವ ಈ ಯುವತಿ ತನ್ನ ಸಹೋದರಿಯ ಮೈದುನ ಜತೆ ನಾಲ್ಕು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಆ ಹುಡುಗ ಸೋನಿಪತ್ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾನೆ ಎಂಬುವುದು ಉಲ್ಲೇಖನೀಯ. ಕೆಲಸಕ್ಕೆ ಸಂಬಂಧಿಸಿದಂತೆ, ಅವರು ಆಗಾಗ್ಗೆ ಮೊರಾದಾಬಾದ್‌ಗೆ ಬರಬೇಕಾಗಿತ್ತು, ಅಲ್ಲಿ ಅವರು ತಮ್ಮ ಅತ್ತಿಗೆಯ ಮನೆಯಲ್ಲಿ ಹಲವಾರು ಬಾರಿ ಹೊರಗೆ ಇರುತ್ತಿದ್ದರು. ಈ ವೇಳೆ ಅವರಿಬ್ಬರ ಪ್ರೀತಿ ಚಿಗುರೊಡೆಯಿತು.
ಈ ಬಗ್ಗೆ ಸ್ಥಳೀಯರು ಹೇಳಿದ್ದೇನು?
ಈ ಬಗ್ಗೆ ಸ್ಥಳೀಯರು ಹೇಳುವಂತೆ, 'ತಂಗಿ ಅಕ್ಕನ ಮೈದುನನ ಮೇಲಿನ ಪ್ರೀತಿಯನ್ನು ಮನೆಯವರಿಗೂ ತಿಳಿಸಿದ್ದಾಳೆ. ಆರಂಭದಲ್ಲಿ ಈ ಮದುವೆಗೆ ಮನೆಯವರು ಒಪ್ಪದಿದ್ದರೂ ಮಗಳ ಒತ್ತಾಯಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದಾರೆ ಹಾಘೂ ಮದುವೆ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ಸುಖವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಅತ್ತೆಯ ಮನೆಗೆ ಹೋಗಲು ನಿರಾಕರಿಸಿದ ಯುವತಿ
ಆದರೆ, ಮದುವೆಯಾದ ಮರುದಿನ ಯುವತಿ ತನ್ನ ತಾಯಿಯ ಮನೆಗೆ ಬಂದಿದ್ದಳು. ಆದರೆ ಮರಳಿ ತನ್ನ ಅತ್ತೆಯ ಮನೆಗೆ ಹೋಗಲಿಲ್ಲ ಎಂದು ಹೇಳಲಾಗುತ್ತಿದೆ. ಹಲವು ಬಾರಿ ಕುಟುಂಬಸ್ಥರು ಆಕೆಯ ಮನವೊಲಿಸಲು ಯತ್ನಿಸಿದರೂ ಯುವತಿ ಒಪ್ಪಿಕೊಳ್ಳಲು ಮುಂದಾಗಿರಲಿಲ್ಲ. ಒತ್ತಡ ಹೇರಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದೂ ಬೆದರಿಕೆ ಹಾಕಿದ್ದಾಳೆ
ವಿಷಯ ಮಹಿಳಾ ಉನ್ನತಿ ಕೇಂದ್ರದ ಮೆಟ್ಟಿಲೇರಿತ್ತು
ಇದಾದ ಬಳಿಕ ವಿಷಯ ನಾರಿ ಉತ್ಥಾನ ಕೇಂದ್ರಕ್ಕೆ ಹೋಯಿತು, ಅಲ್ಲಿ ಸಲಹೆಗಾರ್ತಿ ರಿತು ನಾರಂಗ್ ಕೂಡ ಮನವೊಲಿಸಲು ಪ್ರಯತ್ನಿಸಿದಳು, ಆದರೆ ಅಯುವತಿ ಯಾರ ಮಾತನ್ನು ಕೇಳಲಿಲ್ಲ ಮತ್ತು ಅಂತಿಮವಾಗಿ ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಅವರು ವಿಚ್ಛೇದನ ಪಡೆದಿದ್ದಾರೆ
ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೇಮಿಸಿ ಕೈ ಕೊಟ್ಟ ಯುವಕ
ಮೇಲ್ವರ್ಗದ ಯುವಕನೊಬ್ಬ ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೇಮಿಸಿ (Love) ಕೈ ಕೊಟ್ಟಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲೂಕು ಕೋಣನಕೆರೆಯಲ್ಲಿ ನಡೆದಿದೆ. ಅದು ಎರಡು ವರ್ಷಗಳ ಹಿಂದೆ ಗ್ರಾಮದ ಜಾತ್ರೆಯಲ್ಲಿ ಆಗಿದ್ದ ಭೇಟಿ. ಆ ಒಂದು ಭೇಟಿಯೇ ಪ್ರೀತಿ ಮೊಳಕೆಯೊಡಲು ಕಾರಣವಾಯ್ತು. ಮದುವೆಯಾಗುವ ನಿರ್ಧಾರಕ್ಕೆ ಬಂದ ಆ ಪ್ರೇಮಿಗಳು ಸ್ವರ್ಗಕ್ಕೆ ಹತ್ತಿರ ಎಂಬಂತೆ ಓಡಾಡಿದರು. ಆದರೆ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದೆ ತಡ ಹುಡುಗ ಎಸ್ಕೇಪ್ (Escape) ಆಗಿದ್ದಾನೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಕೋಣನಕೆರೆ ಗ್ರಾಮದ ಈಕೆ ವಸಂತಾ. ಬುಡಕಟ್ಟು ಸೋಲಿಗ ಸಮುದಾಯಕ್ಕೆ ಸೇರಿದ ಈ ಯುವತಿ ಎರಡು ವರ್ಷಗಳ ಹಿಂದೆ ಪಕ್ಕದ ಊರು ಪೊನ್ನಾಚಿಯ ಪರಂ ಜ್ಯೋತಿ (25) ಎಂಬಾತನ ಪ್ರೇಮಪಾಶಕ್ಕೆ ಬಿದ್ದು ಪ್ರೇಮಲೋಕದಲ್ಲಿ ತೆಲಾಡಿದ ಜೋಡಿಗಳು. ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತೆ ಪ್ರೀತಿಸಿದವರು. ಪ್ರೀತಿ ಕುರುಡು, ಪ್ರೀತಿಗೆ ಯಾವುದೆ ಜಾತಿ ಧರ್ಮವಿಲ್ಲ ಎಂಬಂತೆ ಪ್ರೀತಿಸಿ ಸುತ್ತಾಡಿದವರು. ಮದುವೆ ವಿಚಾರ ಬಂದಾಗ ಇದ್ದಕ್ಕಿದ್ದ ಹಾಗೆ ಎಸ್ಕೇಪ್ ಆದ ಪ್ರೇಮಿ ಈಗ ನ್ಯಾಯಕ್ಕಾಗಿ ಪ್ರೇಯಸಿ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾಳೆ.
Mangaluru ವಿದ್ಯಾರ್ಥಿನಿ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ: ವಿಎಚ್ ಪಿ ಆರೋಪ
ನಿನ್ನನ್ನೆ ಮದ್ವೆ ಆಗ್ತಿನಿ, ನನ್ನದು ಪವಿತ್ರ ಪ್ರೇಮ ಎಂದೆಲ್ಲ ರೀಲು ಬಿಟ್ಟಿದ್ದ ಪರಂ ಜ್ಯೋತಿಯ ಮಾತಿಗೆ ಮರುಳಾಗಿದ್ದ ವಸಂತಾ ಮಾನಸಿಕವಾಗಿ ಹಾಗು ದೈಹಿಕವಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ. ಹೇಗಿದ್ದರೂ ಮದ್ವೆ ಆಗೋ ಹುಡುಗ ಅಂತ ಆತನೊಂದಿಗೆ ಎಲ್ಲಾ ಕಡೆ ಸುತ್ತಾಡಿ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಆದರೆ ಈಗ ಪ್ರಿಯಕರ ಪರಂ ಜ್ಯೋತಿ ಮದುವೆಗೆ ನಿರಾಕರಿಸಿದ್ದು ವಸಂತಾ ಬಾಳಲ್ಲಿ ಕತ್ತಲು ಆವರಿಸಿದೆ. ಬೆಂಗಳೂರಿನಲ್ಲಿ ಕಾರು ಡ್ರೈವರ್ ಆಗಿರುವ ಪೊನ್ನಾಚಿ ಗ್ರಾಮದ ಯುವಕ ಪರಂ ಜ್ಯೋತಿ ಮೇಲ್ವರ್ಗಕ್ಕೆ ಸೇರಿದ್ದು ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೀತಿಸಿರುವ ವಿಷಯ ತಿಳಿದ ಆತನ ಮನೆಯವರು ಬೇರೆ ಹುಡುಗಿ ನೋಡಿದ್ದು, ನಿಶ್ಚಿತಾರ್ಥ ಸಹ ಆಗಿದೆ ಎನ್ನಲಾಗಿದೆ.
ವಿಚಾರ ತಿಳಿದ ಯುವತಿ ಮನೆಯವರು ಯುವಕನ ಮನೆಗೆ ತೆರಳಿ ಮನವೊಲಿಸಲು ಪ್ರಯತ್ನಿಸಿ ನಂತರ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಳಿಕ ಎರಡು ಗ್ರಾಮದ ಗ್ರಾಮಸ್ಥರು ನ್ಯಾಯ ಪಂಚಾಯಿತಿ ನಡೆಸಿದ್ದರು. ಈ ವೇಳೆ ಪರಂಜ್ಯೋತಿ ತನ್ನ ಪ್ರೇಯಸಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ ಹಿನ್ನಲೆ ವಿವಾಹ ನೋಂದಣಿ ಕಚೇರಿ ರಾಮಾಪುರಕ್ಕೆ ತೆರಳುತ್ತಿದ್ದಾಗ ಪರಂಜ್ಯೋತಿ ದಾರಿ ಮಧ್ಯೆ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಇದೀಗ ತನಗೆ ನ್ಯಾಯ ಕೊಡಿಸುವಂತೆ ಯುವತಿ ರಾಮಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪೊಲೀಸರ ಮುಂದೆ ವಸಂತಾ ಅಳಲು ತೋಡಿಕೊಂಡಿದ್ದಾಳೆ.
