ಭಯೋತ್ಪಾದನೆ ಭಾರತದತ್ತ ತಿರುಗಿದರೆ ವಾಯುದಾಳಿಗೆ ಸಿದ್ಧರಾಗಿ; ತಾಲಿಬಾನ್ ಉಗ್ರರಿಗೆ ಯೋಗಿ ನೇರ ಎಚ್ಚರಿಕೆ!

  • ತಾಲಿಬಾನ್ ಉಗ್ರರ ಕಣ್ಣು ಭಾರತದ ಮೇಲೆ ಬಿದ್ದರೆ ಪರಿಣಾಣ ನೆಟ್ಟಗಿರುವುದಿಲ್ಲ
  • ತಾಲಿಬಾನ್ ಉಗ್ರರಿಗೆ ನೇರ ಎಚ್ಚರಿಕೆ ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ
  • ಉಗ್ರರು ಭಾರತದತ್ತ ಸಾಗಲು ಧೈರ್ಯ ಮಾಡಿದರೆ ವಾಯು ದಾಳಿ ಖಚಿತ
     
Get Reday for Air strike if Taliban dares to move towards India UP CM Yogi adityanath warns terrorist ckm

ಲಕ್ನೌ(ನ.01): ಆಫ್ಘಾನಿಸ್ತಾನದಲ್ಲಿ(Afghanistan) ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್ ಉಗ್ರರು(Taliban Terror) ಇದೀಗ ಭಯೋತ್ಪಾದನೆಯನ್ನು ವಿಸ್ತರಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನ(Pakistan) ಕೂಡ ಕುಮ್ಮಕ್ಕು ನೀಡುತ್ತಿದೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇದೀಗ ಭಾರತದತ್ತ ಕಣ್ಣು ಹಾಕಿರುವ ತಾಲಿಬಾನ್ ಉಗ್ರರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi adityanath) ನೇರ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನ್ ಉಗ್ರರು ಭಾರತದತ್ತ(India) ಸಾಗುವ ಧೈರ್ಯ ಮಾಡಿದರೆ, ಏರ್‍‌ಸ್ಟ್ರೈಕ್(Airstrike) ಎದುರಿಸಲು ಸಿದ್ದರಾಗಿ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಗ್ಗ: VAT ಇಳಿಸುವ ಬಗ್ಗೆ ಯೋಗಿ ಸಭೆ!

ಲಕ್ನೌದಲ್ಲಿ ಆಯೋಜಿಸಿದ್ದ ಸಾಮಾಜಿಕ ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಆಫ್ಘಾನಿಸ್ತಾನ ಮಾತ್ರವಲ್ಲ ಪಾಕಿಸ್ತಾನ ಕೂಡ ನಲುಗಿ ಹೋಗಿದೆ. ಭಾರತದ ಗಡಿಯಲ್ಲಿ(Indian Border) ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಕೈಹಾಕಿದೆ. ತಾಲಿಬಾನ್ ಉಗ್ರರು ಭಾರದತ್ತ ದೃಷ್ಟಿ ಹಾಯಿಸಿದರೆ ವಾಯು ದಾಳಿ ಮೂಲಕ ಉಗ್ರರ ಎಲ್ಲಾ ಚಟುವಟಿಕೆಯನ್ನು ಶಾಶ್ವತವಾಗಿ ಮುಗಿಸಲಿದ್ದೇವೆ ಎಂದು ಯೋಗಿ ಎಚ್ಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ(PM Narendra Modi) ನಾಯಕ್ವದಲ್ಲಿ ಭಾರತ ಬಲಿಷ್ಠ ಶಕ್ತಿಯಾಗಿ ಬೆಳೆದಿದೆ. ಹೀಗಾಗಿ ಯಾರಿಗೂ ಭಾರತದ ಮೇಲೆ ಕಣ್ಣು ಹಾಕುವಷ್ಟು ಧೈರ್ಯವಿಲ್ಲ. ಒಂದು ವೇಳೆ ಆ ಸಾಹಸಕ್ಕೆ ಕೈಹಾಕಿದರೆ ಪರಿಣಾಮ ಎದುರಿಸಲು ಸಿದ್ದರಾಗಿರಿ ಎಂದು ಯೋಗಿ ಹೇಳಿದ್ದಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ, ಭಯೋತ್ಪಾದನೆ ಬೆಳೆಸುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಯೋಗಿ ಹೇಳಿದ್ದಾರೆ.

ಫೈಜಾಬಾದ್‌ ರೈಲು ನಿಲ್ದಾಣ ಇನ್ನು ಅಯೋಧ್ಯಾ ಕಂಟೋನ್ಮೆಂಟ್‌

ಉಗ್ರವಾದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಗಳು ಈಗಾಗಲೇ ಎಲ್ಲರೂ ಗಮನಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಸೇರಿದಂತೆ ಉಗ್ರರ ಅಡುಗುತಾಣಗಳನ್ನೇ ಧ್ವಂಸ ಮಾಡಿದ ಹಲವು ಉದಾಹರಣೆಗಳಿವೆ. ಹೀಗಾಗಿ ಭಾರತದ ಮೇಲೆ ಕಣ್ಣು ಹಾಕುವ ಯಾವ ಪ್ರಯತ್ನಕ್ಕೂ ಕೈಹಾಕದಿರಿ ಎಂದು ಯೋಗಿ ಎಚ್ಚರಿಸಿದ್ದಾರೆ.

ಕಳೆದ ತಿಂಗಳ ಯೋಗಿ ಆದಿತ್ಯನಾಥ್ ತಾಲಿಬಾನ್ ಉಗ್ರರು ಹಾಗೂ ತಾಲಿಬಾನ್ ಬೆಂಬಲಿಸುವವರನ್ನು ಖಂಡಿಸಿದ್ದರು. ಭಾರತದಲ್ಲಿದ್ದುಕೊಂಡು ತಾಲಿಬಾನ್ ಬೆಂಬಲಿಸುವವರು, ದೇಶ ವಿರೋಧಿಗಳು(Anti India), ಮಹಿಳಾ ಹಾಗೂ ಮಕ್ಕಳ ವಿರೋಧಿಗಳು, ಮಾನವೀಯತೆಯ ವಿರೋಧಿಗಳು, ಈ ನೆಲದ ಕಾನೂನು ವಿರೋಧಿಗಳು ಎಂದಿದ್ದರು. ಈ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು.

ಚೀನಾಗೆ ಎಚ್ಚರಿಕೆ ಕೊಟ್ಟಿದ್ದ ಐಸಿಸ್‌-ಕೆನಿಂದ ಪಾಕಿಸ್ತಾನ ಅಳಿಸಿ ಹಾಕುವ ವಾರ್ನಿಂಗ್

ಆಗಸ್ಟ್ ತಿಂಗಳಲ್ಲಿ ತಾಲಿಬಾನ್ ಉಗ್ರರು ಆಫ್ಘಾನಿಸ್ತಾದ ಚುನಾಯಿತ ಸರ್ಕಾರವನ್ನು ಬೆದರಿಸಿ, ರಕ್ತಪಾತದ ಮೂಲಕ ಸಂಪೂರ್ಣ ದೇಶವನ್ನು ಕೈಶಮಾಡಿಕೊಂಡಿತು. ಮಕ್ಕಳು, ಮಹಿಳೆಯರು ಸೇರಿದಂತೆ ಅಮಾಯಕರು ಬಲಿಯಾಗಿದ್ದಾರೆ. ಮಹಿಳೆಯರು ಮಕ್ಕಳ ಮೇಲೆ ಶೋಷಣೆ, ಅತ್ಯಾಚಾರ ನಡೆಯುತ್ತಲೇ ಇದೆ. ಆಫ್ಘಾನಿಸ್ತಾನ ಜತೆ ದೇಶ ತೊರೆಯಲು ಹಾತೊರೆಯುತ್ತಿದ್ದಾರೆ. ಆಫ್ಘಾನಿಸ್ತಾನ ಕೈವಶ ಮಾಡಿರುವ ತಾಲಿಬಾನ್ ಉಗ್ರರು ತಮ್ಮ ಕ್ರೂರ ಹಾಗೂ ರಕ್ತಪಾತದ ಆಡಳಿತವನ್ನೇ ನೀಡಿದ್ದಾರೆ. ಇದೀಗ 2 ತಿಂಗಳು ಕಳೆದರೂ ಆಫ್ಘಾನಿಸ್ತಾನದ ಪರಿಸ್ಥಿತಿ ಒಂದಿಂಚು ಬದಲಾಗಿಲ್ಲ. 

ತಾಲಿಬಾನ್ ಷರಿಯಾ ಕಾನೂನಿನ ಹೆಸರಿನಲ್ಲಿ ಅಮಾಯಕರು ಗುಂಡಿನ ದಾಳಿಗೆ, ಬಾಂಬ್ ಸ್ಫೋಟಕ್ಕೆ ಬಲಿಯಾಗುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನದ ನೆರವಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ತಾಲಿಬಾನ್ ಉಗ್ರರು ಯತ್ನಿಸುತ್ತಿದ್ದಾರೆ ಅನ್ನೋ ವರದಿಗಳು ಇದೀಗ ಭಾರತವನ್ನು ಕೆರಳಿಸಿದೆ. ಇದರ ನಡುವೆ ಯೋಗಿ ಆದಿತ್ಯನಾಥ್ ಉಗ್ರರಿಗೆ ನೇರ ಎಚ್ಚಿರಕೆ ನೀಡಿದ್ದಾರೆ.

ಕಣಿವೆ ರಾಜ್ಯದಲ್ಲಿ ನಾಗರೀಕರನ್ನು ಗುರಿಯಾಗಿಸಿ, ಭಾರತೀಯ ಸೇನಾ ಪಡೆ ಗುರಿಯಾಗಿಸಿ ಹಲವು ದಾಳಿಗಳು ನಡೆದಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಕಟ್ಟು ನಿಟ್ಟಿನ ಭದ್ರತೆ ಕಲ್ಪಿಸಲು ಸೂಚಿಸಿದ್ದಾರೆ. 
 

Latest Videos
Follow Us:
Download App:
  • android
  • ios