ಝೋಮ್ಯಾಟೋ ಡೆಲಿವರಿ ಬಾಯ್ ಖಾಸಗಿ ಅಂಗ ಕಚ್ಚಿದ ಜರ್ಮನ್ ಶೆಫರ್ಡ್ ಶ್ವಾನ: ಭಯಾನಕ ವಿಡಿಯೋ
ಅಪಾರ್ಟ್‌ಮೆಂಟ್ ಒಂದರ ಲಿಫ್ಟ್‌ನಲ್ಲಿ ಆಹಾರ ಪೂರೈಸುವುದಕ್ಕಾಗಿ ಹೊರಟಿದ್ದ ಡೆಲಿವರಿ ಬಾಯ್ ಮೇಲೆ ವ್ಯಕ್ತಿಯೊಬ್ಬರ ಜರ್ಮನ್ ಶೆಫರ್ಡ್ ಶ್ವಾನವೊಂದು ದಾಳಿ ಮಾಡಿದ್ದು, ಇದರಿಂದ ಝೋಮ್ಯಾಟೋ ಡೆಲಿವರಿ ಬಾಯ್ ಖಾಸಗಿ ಅಂಗಕ್ಕೆ ಗಾಯವಾಗಿದೆ.
ಮುಂಬೈ: ಕೆಲ ದಿನಗಳ ಹಿಂದಷ್ಟೇ ಲಿಫ್ಟ್‌ನಲ್ಲಿ ಮಹಿಳೆಯೊಬ್ಬರ ಸಾಕುನಾಯೊಂದು ಪುಟ್ಟ ಬಾಲಕನ ಮೇಲೆ ದಾಳಿ ಮಾಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಈಗ ಅಪಾರ್ಟ್‌ಮೆಂಟ್ ಒಂದರ ಲಿಫ್ಟ್‌ನಲ್ಲಿ ಆಹಾರ ಪೂರೈಸುವುದಕ್ಕಾಗಿ ಹೊರಟಿದ್ದ ಡೆಲಿವರಿ ಬಾಯ್ ಮೇಲೆ ವ್ಯಕ್ತಿಯೊಬ್ಬರ ಜರ್ಮನ್ ಶೆಫರ್ಡ್ ಶ್ವಾನವೊಂದು ದಾಳಿ ಮಾಡಿದ್ದು, ಇದರಿಂದ ಝೋಮ್ಯಾಟೋ ಡೆಲಿವರಿ ಬಾಯ್ ಖಾಸಗಿ ಅಂಗಕ್ಕೆ ಗಾಯವಾಗಿದೆ. ಘಟನೆಯ ವಿಡಿಯೋ ಲಿಫ್ಟ್ ಹೊರಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನ ಪನ್ವೆಲ್‌ನಲ್ಲಿರುವ ಇಂಡಿಯಾಬುಲ್ಸ್ ಗ್ರೀನ್ಸ್ ಮಾರಿಗೋಲ್ಡ್ ಸಿಎಚ್‌ಎಸ್‌ನಲ್ಲಿ ಆಗಸ್ಟ್ 29 ರಂದು ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾಯಿ ದಾಳಿಗೊಳಗಾದ ಡೆಲಿವರಿ ಎಕ್ಸಿಕ್ಯೂಟಿವ್ ಆಗಿರುವ ನರೇಂದ್ರ ಪೆರಿಯಾರ್ ಅವರು ಪ್ರಸ್ತುತ ನವಿ ಮುಂಬೈನ (Navi Mumbai) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ವೀಡಿಯೋದಲ್ಲಿ ಝೋಮ್ಯಾಟೋ ಡೆಲಿವರಿ ಬಾಯ್ (delivery executive) ಒಬ್ಬರು ಲಿಫ್ಟ್‌ನಿಂದ ಹೊರ ಬರುತ್ತಿದ್ದು ಈ ವೇಳೆ ಹೊರಗೆ ತನ್ನ ಮಾಲೀಕನೊಂದಿಗೆ ಜರ್ಮನ್ ಶೆಫರ್ಡ್ ನಾಯಿ ನಿಂತಿರುತ್ತದೆ. ಇದನ್ನು ನೋಡಿ ಝೋಮ್ಯಾಟೋ ಡೆಲಿವರಿ ಬಾಯ್ ಹಿಂದೆ ಸರಿಯುತ್ತಾನೆ. ಅಷ್ಟರಲ್ಲಾಗಲೇ ನಾಯಿ ಮಾಲೀಕನ ಕೈಯಿಂದ ಎಳೆದುಕೊಂಡು ಬಂದು ಈತನ ಮೇಲೆ ದಾಳಿ ಮಾಡಿದ್ದು, ಖಾಸಗಿ ಅಂಗವನ್ನು ಕಚ್ಚಿ ಗಾಯಗೊಳಿಸಿದೆ. ನಾಯಿ ಕಚ್ಚಿದ್ದರಿಂದ ಅವರ ಖಾಸಗಿ ಭಾಗದಲ್ಲಿ ರಕ್ತಸ್ರಾವ ಆಗಲು ಶುರು ಆಗಿದ್ದು, ಅವರು ನೋವಿನಿಂದ ಸಂಕಟಪಡಲು ಶುರು ಮಾಡಿದ್ದಾರೆ.
ನಾಯಿ ಕಚ್ಚಿದಾಗ ತಕ್ಷಣ ಕ್ರಮ ತಗೊಳ್ಳಿ, ಇಲ್ಲಾಂದ್ರೆ ರೇಬೀಸ್ ಬರೋದು ಗ್ಯಾರಂಟಿ !
ಮಿಡ್‌ಡೇ ವರದಿಯ ಪ್ರಕಾರ ಪೆರಿಯರ್, ಹೇಳುವಂತೆ ನಾಯಿ ಕಚ್ಚಿದ (Dog bite) ಬಳಿಕ ಅವರಿಗೆ ರಕ್ತ ಸೋರಲು (Bleeding)ಶುರು ಆಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕವೂ ಅವರಿಗೆ ನೋವು ಕಡಿಮೆ ಆಗದ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಶ್ವಾನದ ಮಾಲೀಕರು ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಘಟಣೆ ಬಗ್ಗೆ ಆ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಪ್ರತಿಕ್ರಿಯಿಸಿದ್ದು, ನಾಯಿ ಜೋರಿದೆ ಎಂಬುದು ಮಾಲೀಕರಿಗೆ ಗೊತ್ತಿರುತ್ತದೆ. ಹೀಗಿರುವಾಗ ಅದನ್ನು ಶಾಂತವಾಗಿರಿಸುವುದು ಅವರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
ಲಿಫ್ಟ್‌ನಲ್ಲಿ ಬಾಲಕನನ್ನು ಕಚ್ಚಿದ ನಾಯಿ, ಹೃದಯವೇ ಇಲ್ಲದ ಕಟುಕಿಯಂತೆ ನಿಂತಿದ್ಲು ಮಹಿಳೆ !
ಇನ್ನು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವ್ಯಾಪಕ ಆಕ್ರೋಶ ಹೊರ ಹಾಕಲಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಬೇಟೆ ನಾಯಿಗಳಾದ ಈ ಜರ್ಮನ್ ಶೆಫರ್ಡ್ (German shepherd)ಶ್ವಾನಗಳನ್ನು ಏಕೆ ಸಾಕಬೇಕು ಎಂದು ಕೆಲವರು ಪ್ರಶ್ನಿಸಿದ್ದಾರೆ. ನಾಯಿಗಳ ಬಾಯಿಗೆ ಹೊರಗೆ ಕರೆದುಕೊಂಡು ಹೋಗುವಾಗ ಬಾಯಿ ತೆರಯಲಾಗದಂತಹ ಉಪಕರಣ ಮಾರುಕಟ್ಟೆಯಲ್ಲಿ ಸಿಗುತ್ತದೆ ಅದನ್ನು ಅಳವಡಿಸಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಅರಪಾರ್ಟ್‌ಮೆಂಟ್, ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಶ್ವಾನಗಳನ್ನು ಬಿಡಬಾರದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಭಯಾನಕವಾಗಿದೆ, ಒಂದು ವೇಳೆ ಮನುಷ್ಯರು ಶ್ವಾನದ ಮೇಲೆ ಹಲ್ಲೆ ಮಾಡಿದ್ದರೆ ಇದು ದೊಡ್ಡ ಸುದ್ದಿಯಾಗುತ್ತಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಗಾಜಿಯಾಬಾದ್‌ನ ಲಿಫ್ಟ್ ಒಂದರಲ್ಲಿ ಬಾಲಕನ ಮೇಲೆ ಶ್ವಾನವೊಂದು ದಾಳಿ ಮಾಡಿತ್ತು. ಆದರೆ ನಾಯಿ ದಾಳಿ ಮಾಡುತ್ತಿದೆ ಎಂದು ತಿಳಿದರೂ ಕೂಡ ಶ್ವಾನದ ಮಾಲಕಿ ನಿರ್ಲಕ್ಷಿಸಿದ ಪರಿಣಾಮ ಪುಟ್ಟ ಬಾಲಕ ಗಾಯಗೊಂಡಿದ್ದ.