ಲಿಫ್ಟ್‌ನಲ್ಲಿ ಬಾಲಕನನ್ನು ಕಚ್ಚಿದ ನಾಯಿ, ಹೃದಯವೇ ಇಲ್ಲದ ಕಟುಕಿಯಂತೆ ನಿಂತಿದ್ಲು ಮಹಿಳೆ !

ಹೆಣ್ಣು ಎಂದರೆ ಮಮತಾಯಿ, ದಯೆಯುಳ್ಳವಳು, ಕರುಣಾಮಯಿ ಎಂದೆಲ್ಲಾ ಹೇಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮಾತ್ರ ಇದೆಲ್ಲದ್ದಕ್ಕೆ ತದ್ವಿರುದ್ಧವಾಗಿ ವರ್ತಿಸಿದ್ದಾಳೆ. ತನ್ನ ಸಾಕು ನಾಯಿ ಕಣ್ಣಮುಂದೆಯೇ ಬಾಲಕನಿಗೆ ಕಚ್ಚುತ್ತಿದ್ದರೂ ಏನೂ ಪ್ರತಿಕ್ರಿಯಿಸಿದೆ ಸುಮ್ಮನೇ ನಿಂತಿದ್ದಾಳೆ.

Viral Video: Pet Dog Bites Child in Lift, Owner Looks On Vin

ಗಾಜಿಯಾಬಾದ್: ನಾಯಿ ಕಚ್ಚೋದು ಅಂದ್ರೆ ಸಾಕು ಸಾಮಾನ್ಯವಾಗಿ ಎಲ್ಲರಿಗೂ ಭಯವಾಗುತ್ತೆ. ಯಾಕಂದ್ರೆ ನಾಯಿ ಕಚ್ಚೋದ್ರಿಂದ ಮಾಂಸಾನೇ ಕಿತ್ತು ಬರುತ್ತೆ. ಮಾತ್ರವಲ್ಲ ಸೋಂಕು ಹರಡೋ ಸಾಧ್ಯತೆನೂ ಇದೆ. ಹೀಗಾಗಿಯೇ ನಾಯಿ ಕಚ್ಚದಂತೆ ಎಲ್ಲರೂ ಜಾಗೃತೆ ವಹಿಸುತ್ತಾರೆ. ಹೀಗಿದ್ದೂ ರಸ್ತೆಯಲ್ಲಿ ಹೋಗುವಾಗ, ಸುಮ್ಮನೆ ಕುಳಿತಿದ್ದಾಗ ನಾಯಿ ಬಂದು ಕಚ್ಚಿದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ನಾಯಿ ಅಟ್ಟಾಡಿಸಿಕೊಂಡು ಬಂದರೆ, ಕಚ್ಚಲು ಬಂದರೆ ಜೊತೆಯಲ್ಲಿದ್ದವರು ನೆರವಿಗೆ ಬರುತ್ತಾರೆ. ಯಾಕೆಂದರೆ ನಾಯಿ ಕಚ್ಚುವುದೆಂದರೆ ಎಷ್ಟು ಭಯಾನಕವಾಗಿದೆ ಎಂದು ಅವರೆಲ್ಲರಿಗೂ ತಿಳಿದಿದೆ. ಆದರೆ ಇಲ್ಲೊಬ್ಬ ಮಹಿಳೆ ಮಾತ್ರ ಬಾಲಕನಿಗೆ ನಾಯಿ ಕಚ್ಚುತ್ತಿದ್ದರೂ ನೆರವಿಗೆ ಬಾರದೆ ನೋಡುತ್ತಾ ನಿಂತಿದ್ದಾಳೆ. 

ಬಾಲಕನನ್ನು ಕಚ್ಚಿದ ಮಹಿಳೆಯ ಸಾಕು ನಾಯಿ
ಘಾಜಿಯಾಬಾದ್ ಪೊಲೀಸ್ ಠಾಣಾ ನಂದಗ್ರಾಮ್ ಪ್ರದೇಶದ ರಾಜನಗರ ವಿಸ್ತರಣೆಯ ಚಾರ್ಮ್ಸ್ ಕೌಂಟಿ ಸೊಸೈಟಿಯ ಲಿಫ್ಟ್‌ನಲ್ಲಿ ಮಹಿಳೆಯ ಸಾಕು ನಾಯಿ ಬಾಲಕ (Boy)ನನ್ನು ಕಚ್ಚಿದೆ. ಬಾಲಕ ನೋವಿನಿಂದ ನರಳುತ್ತಿದ್ದರೂ ಮಹಿಳೆ (Woman) ಮೌನವಾಗಿ ನಿಂತಿದ್ದಳು. ಯಾವುದೇ ರೀತಿಯಲ್ಲಿ ಬಾಲಕನ ನೆರವಿಗೆ ಬಂದಿಲ್ಲ. ಮಹಿಳೆಯ ವಿರುದ್ಧ ಬಾಲಕನ ತಂದೆ ಪೊಲೀಸರಿಗೆ ದೂರು (Complaint) ನೀಡಿದ್ದಾರೆ. ತನ್ನ ಒಂಬತ್ತು ವರ್ಷದ ಮಗ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಸೋಮವಾರ ಸಂಜೆ ಟ್ಯೂಷನ್‌ನಿಂದ ಹಿಂತಿರುಗುತ್ತಿದ್ದ. ಅವನು ಲಿಫ್ಟ್‌ಗೆ ಹೋದಾಗ, ಒಬ್ಬ ಮಹಿಳೆ ತನ್ನ ಮುದ್ದಿನ ನಾಯಿ (Dog)ಯೊಂದಿಗೆ ಲಿಫ್ಟ್‌ಗೆ ಪ್ರವೇಶಿಸಿದ್ದಳು.

ನಾಯಿ ಕಚ್ಚಿದಾಗ ಏನು ಮಾಡಬೇಕು, ಏನು ಮಾಡಬಾರದು?

ಬಾಲಕನ ನೆರವಿಗೆ ಬರದೆ ನೋಡುತ್ತಲ್ಲೇ ನಿಂತಿದ್ದ ಕಟುಕಿ !
ಮಹಿಳೆ ನಾಯಿಯೊಂದಿಗೆ ಲಿಫ್ಟ್‌ನಲ್ಲಿ ಹಿಂದಕ್ಕೆ ಬಂದಾಗ, ನಾಯಿಯನ್ನು ತಪ್ಪಿಸಲು ಬಾಲಕ ಲಿಫ್ಟ್‌ನಲ್ಲಿ ಮುಂದಕ್ಕೆ ಹೋಗುತ್ತಾನೆ. ಈ ಸಮಯದಲ್ಲಿ, ನಾಯಿ ಮಗುವಿನ ಮೇಲೆ ದಾಳಿ (Attack) ಮಾಡುತ್ತದೆ ಮತ್ತು ಅವನ ಸೊಂಟದ ಬಳಿ ಕಚ್ಚುತ್ತದೆ. ಮಗು ನಾಯಿ ಕಚ್ಚಿದ ಜಾಗವನ್ನು ಹಿಡಿದುಕೊಂಡು  ನೋವಿನಿಂದ ನರಳುತ್ತದೆ ಮತ್ತು ಕತ್ತರಿಸಿದ ಪ್ರದೇಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ನೋವಿನಿಂದಾಗಿ, ಬಾಲಕ ತನ್ನ ಪಾದಗಳನ್ನು ನೆಲದ ಮೇಲೆ ಇಡಲು ಸಾಧ್ಯವಾಗದೆ ಕುಂಟಲು ಪ್ರಾರಂಭಿಸುತ್ತಾನೆ. ಹೀಗಿದ್ದೂ ಮಹಿಳೆ ಕಿಂಚಿತ್ತೂ ದಯೆ ತೋರದೆ ಸುಮ್ಮನಿದ್ದು ಬಿಡುತ್ತಾಳೆ. ಕೊನೆಯ ಪಕ್ಷ ಬಾಲಕನಿಗೆ ಎಂಬುದನ್ನು ಕೇಳಲು ಸಹ ಹೋಗುವುದಿಲ್ಲ. 

ಬಾಲಕ ಮನೆಗೆ ತೆರಳಿ ಲಿಫ್ಟ್‌ನಲ್ಲಾದ ಘಟನೆಯ ಬಗ್ಗೆ ತಾಯಿಯ ಬಳಿ ಹೇಳಿದ್ದಾನೆ. ಮಗುವಿನ ತಂದೆ ಸೊಸೈಟಿಯನ್ನು ತಲುಪಿದಾಗ, ಮಹಿಳೆ ತನ್ನ ನಾಯಿಯೊಂದಿಗೆ ನಡೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಬಾಲಕನ ತಂದೆ ಮಹಿಳೆಯ ಬಳಿ ಕೇಳಿದಾಗ ಆಕೆ ಅವನೊಂದಿಗೆ ಸರಿಯಾಗಿ ಮಾತನಾಡದೆ ತನ್ನ ಫ್ಲಾಟ್‌ಗೆ ಹೋದಳು.ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಕಾಟ: ಬಾಲಕಿಯ ಮೇಲೆ ಅಟ್ಯಾಕ್

ಮಗುವಿನ ತಂದೆಯ ದೂರಿನ ಮೇರೆಗೆ ಪೊಲೀಸರು ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಘಟನೆಯ ನಂತರ ಅಪಾರ್ಟ್‌ಮೆಂಟ್‌ನ ಜನರು ಸಿಟ್ಟಿಗೆದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಹ ಮಹಿಳೆಯ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios