ನವದೆಹಲಿ(ಜೂ.04): ಕೊರೋನಾ ವೈರಸ್ ಬಳಿಕ ಬಹುತೇಕ ರಾಷ್ಟ್ರಗಳು ಚೀನಾದಲ್ಲಿರುವ ತಮ್ಮ ತಮ್ಮ ಉತ್ಪಾದನ ಘಟಕ, ಶಾಖೆಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದೆ. ಇದೀಗ ಜರ್ಮನ್ ಚಪ್ಪಲಿ ಕಂಪನಿ ಚೀನಾದಿಂದ ದೆಹಲಿಯ ಆಗ್ರಾಗೆ ಸ್ಥಳಾಂತರಗೊಳ್ಳುತ್ತಿದೆ. ಈ ಕುರಿತು ಭಾರತದ ಸರ್ಕಾರ ಜೊತೆಗೆ ಮಹತ್ವದ ಮಾತುಕತೆ ನಡೆಸಿದೆ. ಕಾಸಾ ಎವೆರ್ಜ್ Gmbh ಕಂಪನಿ ಇದೀಗ ಚೀನಾಗೆ ಗುಡ್‌ಬೇ ಹೇಳಿ, ಆಗ್ರಾದಲ್ಲಿ ಘಟಕ ಸ್ಥಾಪಿಸಲು ನಿರ್ಧರಿಸಿದೆ.

ಲಡಾಖ್ ಗಡಿಯಲ್ಲಿ ಚೀನಾ ಯುದ್ದ ವಿಮಾನ ಹಾರಾಟ; ಯುದ್ಧದ ಕಾರ್ಮೋಡ!.

ಕಾಸಾ ಎವೆರ್ಜ್ Gmbh ಕಂಪನಿಯ ವೊನ್ ವೆಲ್ಲೆಕ್ಸ್ ( Von Wellx) ಬ್ರ್ಯಾಂಡ್ ಶೂ, ಚಪ್ಪಲ್ ಘಟಕ ಸ್ಥಳಾಂತರವಾಗುತ್ತಿದೆ. ಈ ಕುರಿತು ಕಾಸಾ ಎವೆರ್ಜ್ Gmbh ಕಂಪನಿ ಜೊತೆ ಮಾತುಕತೆ ನಡೆಸಿರುವ MSME ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಈ ವಿಚಾರ ಬಹಿರಂಗ ಪಡಿಸಸಿದ್ದಾರೆ. ಆಗ್ರಾದಲ್ಲಿ ಘಟಕ ಸ್ಥಾಪನೆಯಾದರೆ ಬರೋಬ್ಬರಿ 10,000 ಉದ್ಯೋಗ ಸೃಷ್ಟಿಯಾಗಲಿದೆ.

ಚೀನಿ ವಸ್ತು ಬಹಿಷ್ಕರಿಸಲು ವಾಂಗ್‌ಚುಕ್ ಕರೆ; ಟಿಕ್‌ಟಾಕ್‌ ಡಿಲೀಟ್ ಮಾಡಿದ ಮಿಲಿಂದ್ ಸೋಮನ್!.

ಭಾರತದ ಲ್ಯಾಟ್ರಿಕ್ಸ್ ಲಿಮಿಟೆಡ್ ಕಂಪನಿ ಜೊತೆ ಕಾಸಾ ಎವೆರ್ಜ್ Gmbh ಕಂಪನಿ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಜಂಟಿಯಾಗಿ ಬೃಹತ್ ಫ್ಯಾಕ್ಟರಿ ತೆರೆಯಲು ಉದ್ದೇಶಿಸಿದೆ. ಒಂದು ಕಂಪನಿಯೊಂದು ಚೀನಾದಿಂದ  ಆಗ್ರಾಗೆ ಬರುತ್ತಿದೆ. ಈ ಮೂಲಕ ಇತರ ಕಂಪನಿಗಳು ಭಾರತಕ್ಕೆ ಆಗಮಿಸಲಿದೆ ಎಂದು ರಾಜ್ಯ ಸಚಿವ ಉದಯಾನ್ ಸಿಂಗ್ ಹೇಳಿದ್ದಾರೆ.