ಮೊದಲ ಭೇಟಿ, ಪ್ರಣಯ ವಿವಾಹದ ಬಗ್ಗೆ ಮನ ಬಿಚ್ಚಿ ಮಾತಾಡಿದ ಸಲಿಂಗಿ ಜೋಡಿ
- ಮನದಾಳ ಹಂಚಿಕೊಂಡ ಸಲಿಂಗಿ ಜೋಡಿ
- ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದ ಸಲಿಂಗಿಗಳು
- ಅಭಯ್ ಡಾಂಗೆ ಹಾಗೂ ಸುಪ್ರಿಯಾ ಚಕ್ರವರ್ತಿ
ಹೈದರಾಬಾದ್ (ಜ.3): ಇತ್ತೀಚೆಗೆ ಸಲಿಂಗಿ ಜೋಡಿಯೊಂದು ಹೈದರಾಬಾದ್‌ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಪ್ರಸ್ತುತ ಈ ಜೋಡಿ ತಮ್ಮ ಮೊದಲ ಭೇಟಿಯಿಂದ ಹಿಡಿದು ಕುಟುಂಬವನ್ನು ಒಪ್ಪಿಸಿ ಮದುವೆಯಾಗುವವರೆಗಿನ ಚಿತ್ರಣದವರೆಗಿನ ತಮ್ಮ ಜೀವನದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಸ್ತುತ ಭಾರತದಲ್ಲಿ ಸಲಿಂಗಿ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಆದರೆ ಕಾನೂನಿನ ಮಾನ್ಯತೆಯ ಅಗತ್ಯವಿಲ್ಲ ಎಂದು ಈ ಜೋಡಿ ಹೇಳಿದೆ.
ಸಲಿಂಗಿ ಜೋಡಿಯಾದ ಅಭಯ್ ಡಾಂಗೆ (Abhay Dange) ಹಾಗೂ ಸುಪ್ರಿಯಾ ಚಕ್ರವರ್ತಿ (Supriya Chakraborty) ಕಳೆದ ಡಿಸೆಂಬರ್ 18 ರಂದು ಹೈದರಾಬಾದನಲ್ಲಿ ವಿವಾಹವಾಗಿದ್ದರು. ಇವರ ವಿವಾಹದಿಂದ GBTQ ಸಮುದಾಯಕ್ಕೆ ಒಂದು ಬಲ ಬಂದಂತಾಗಿತ್ತು. ಇವರ ವಿವಾಹದ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಒಂದು ಕಾಫಿ ಡೇಟ್‌ನೊಂದಿಗೆ ನಮ್ಮ ಮೊದಲ ಭೇಟಿ ಶುರು ಆಯಿತು. ಅಭಯ್ ಜೊತೆ ನನ್ನ ಮೊದಲ ಡೇಟಿಂಗ್ ಸಂದರ್ಭ ನಾವು ಸುಮಾರು 7 ಗಂಟೆಯಷ್ಟು ಕಾಲ ಜೊತೆಯಾಗಿ ಕಳೆದೆವು. ಕಾಫಿಯೊಂದಿಗೆ ಆರಂಭವಾದ ಈ ಡೇಟ್ ಸಲೂನ್‌ನಲ್ಲಿ ಅಂತ್ಯವಾಯಿತು ( ಅಭಯ್‌ಗೆ ತಲೆ ಕೂದಲು ಕತ್ತರಿಸಬೇಕಾಗಿತ್ತು) ಆರಂಭದ ಭೇಟಿಯೇ ನಮಗೆ ಒಬ್ಬರಿಗೊಬ್ಬರಿಗೆ ಯಾವುದೇ ಮುಜುಗರವಿಲ್ಲದ ತುಂಬಾ ಆರಾಮ (comfort) ಭಾವನೆ ಮೂಡಿಸಿತ್ತು. ನಂತರ ಹೀಗೆ ನಾವು ತುಂಬಾ ಸಲ ಭೇಟಿಯಾದೆವು. ಬಳಿಕ ನಾನು ಆತನಿಗೆ ಬಿದ್ದೆ ಎಂದು ಸುಪ್ರಿಯಾ ಚಕ್ರವರ್ತಿ ಹೇಳಿದ್ದಾರೆ. ಇಬ್ಬರದ್ದು ಒಂದೇ ಚಿಂತನೆಯಾಗಿತ್ತು ಹಾಗೂ ಕುಟುಂಬ ಆಧರಿತವಾಗಿತ್ತು. ಅಭಯ್ ತಮ್ಮ ಸಂಬಂಧದ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಹೇಳಿದಾಗ ಅವರು ಕೂಡ ಅಭಯ್ ನಿರ್ಧಾರವನ್ನು ಸ್ವಾಗತಿಸಿದ್ದರು ಎಂದು ಸುಪ್ರಿಯಾ ಚಕ್ರವರ್ತಿ ಹೇಳಿದ್ದಾರೆ.
ಮೊದಲ ಸಲಿಂಗಿ ಜೋಡಿ ವಿವಾಹಕ್ಕೆ ಸಾಕ್ಷಿಯಾದ ಹೈದರಾಬಾದ್
ಆದರೂ ನಾವು ಪರಸ್ಪರ ವಿರುದ್ಧ ಧ್ರುವಗಳಾಗಿದ್ದೇವೆ. ಆತ ಅಂತರ್ಮುಖಿಯಾಗಿದ್ದರೆ, ನಾನು ಸಾಮಾಜಿಕವಾಗಿ ಹಾರುವ ಚಿಟ್ಟೆ. ಆದರೂ ನಮ್ಮ ಮೌಲ್ಯಗಳು ಒಂದೆ. ನಾವಿಬ್ಬರೂ ಕುಟುಂಬ ಹಿನ್ನೆಲೆಯವರು ಎಂದು ಸುಪ್ರಿಯಾ ಹೇಳಿದರು. ಅಭಯ್ ತನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ಮೊದಲು ತನ್ನ ಹೆತ್ತವರಿಗೆ ಹೇಳಿದಾಗ ಅವರು ಅದನ್ನು ಒಪ್ಪಿಕೊಂಡರು ಮತ್ತು ಅರ್ಥಮಾಡಿಕೊಳ್ಳುತ್ತಿದ್ದರು. ಅಲ್ಲಿಯವರೆಗೆ, ನನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ನನ್ನ ಹೆತ್ತವರಿಗೂ ತಿಳಿದಿರಲಿಲ್ಲ, ಅವರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸಿದೆ.
ಅಭಯ್ ಹೇಳಿದ ಬಳಿಕ, ನಾನು ಪ್ರೀತಿಸುತ್ತಿರುವುದನ್ನು ನನ್ನ ಪೋಷಕರಿಗೆ ಹೇಳಲು ಬಯಸಿ ನಾನು ನನ್ನ ತಾಯಿಯನ್ನು ಹೈದರಾಬಾದ್‌ಗೆ ಕರೆಸಿದ್ದೆ. ಒಮ್ಮೆ ಮನೆಗೆ ಹೋದಾಗ, ನಾನು ತಾಯಿಯನ್ನು ಸಮೀಪದಲ್ಲಿ ಕೂರಿಸಿಕೊಂಡು, 'ನಾನು ಸಲಿಂಗಕಾಮಿ ಮತ್ತು ಅಭಯ್ ನನ್ನ ಸಂಗಾತಿ' ಎಂದು ಹೇಳಿದೆ. ಅಮ್ಮ ಒಂದು ಕ್ಷಣ ಸುಮ್ಮನೆ ಕುಳಿತುಕೊಂಡರು, ಮತ್ತೆ ಹೇಳಿದರು ನೀನು ನನ್ನ ಮಗ, ನಾನು ನಿನ್ನನ್ನು ಯಾವುದೇ ಮಿತಿ ಇಲ್ಲದೇ ಪ್ರೀತಿಸುತ್ತೇನೆ ಎಂದರು ಮತ್ತು ಅವರು ನಮ್ಮಿಬ್ಬರನ್ನು ತಬ್ಬಿಕೊಂಡರು. ನನಗೆ ಸಮಾಧಾನವಾಯಿತು. ಅವಳ ಸಹಾಯದಿಂದ ನಾನು ನನ್ನ ತಂದೆ ಮತ್ತು ನನ್ನ ಸಹೋದರಿಯ ಬಳಿ ಈ ವಿಷಯ ತಿಳಿಸಿದೆ. ಆಗ ಅವರು ನೀವು ಸಂತೋಷವಾಗಿದ್ದರೆ, ನಾವು ಸಂತೋಷವಾಗಿರುತ್ತೇವೆ ಅಷ್ಟೆ ಮುಖ್ಯ ಎಂದು ಹೇಳಿದರು.
Adoption ಅನಾರೋಗ್ಯಪೀಡಿತ ಮಗುವನ್ನು ಒಲಿಂಪಿಕ್ ಚಾಂಪಿಯನ್ ಆಗುವಂತೆ ಬೆಳೆಸಿದ ತೃತೀಯ ಲಿಂಗಿ ತಂದೆ
ಏಪ್ರಿಲ್ 2021 ರಲ್ಲಿ, ಇಬ್ಬರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಈ ಕಷ್ಟದ ಹಂತವು ಅವರನ್ನು ಪರಸ್ಪರ ಮತ್ತಷ್ಟು ಹತ್ತಿರ ತಂದಿತು. ಎಲ್ಲಾ ಗೊಂದಲಗಳ ನಡುವೆ, ನಾನು ಮದುವೆಯ ವಿಚಾರ ಪ್ರಸ್ತಾಪಿಸಿದೆ. ನಾನು ನಮ್ಮನ್ನು ಆಚರಿಸಲು ಬಯಸುತ್ತೇನೆ. ನಾನು ನಿಮ್ಮನ್ನು ಮದುವೆಯಾಗಲು ಬಯಸುತ್ತೇನೆ ಎಂದಾಗ ಅಭಯ್ ಯೆಸ್ ಎಂದು ಒಪ್ಪಿಕೊಂಡರು. ಆದರೆ ಹೇಗೆ ಎಂಬ ಭಯ ಅವರಲ್ಲಿ ಮೂಡಿತ್ತು. ಆಗ ನಾನು ಆತನಿಗೆ ಭರವಸೆ ನೀಡಿದೆ. ಕಾನೂನು ಮಾನ್ಯತೆಯ ಅಗತ್ಯವಿಲ್ಲ. ನಮ್ಮ ಕುಟುಂಬದ ಬೆಂಬಲ ನಮಗಿದೆ. ನಾವು ವಿವಾಹ ವಾಗೋಣವೇ ಎಂದಾಗ ಅವರು ಅಂತಿಮವಾಗಿ ಒಪ್ಪಿಕೊಂಡರು. ನಂತರ ನಾವು ನಮ್ಮ ಎಲ್ಲಾ ಪ್ರೀತಿಪಾತ್ರರ ಮುಂದೆ ಈ ಡಿಸೆಂಬರ್‌ನಲ್ಲಿ ವಿವಾಹವಾದೆವು ಎಂದು ಸುಪ್ರಿಯಾ ಹೇಳಿದ್ದಾರೆ.