Asianet Suvarna News Asianet Suvarna News

ಮೊದಲ ಸಲಿಂಗಿ ಜೋಡಿ ವಿವಾಹಕ್ಕೆ ಸಾಕ್ಷಿಯಾದ ಹೈದರಾಬಾದ್‌

  • ಹಸೆಮಣೆಯೇರಿದ ಸಲಿಂಗಿ ಜೋಡಿ
  • ಮೊದಲ ಸಲಿಂಗಿ ವಿವಾಹಕ್ಕೆ ಸಾಕ್ಷಿಯಾದ ಹೈದರಾಬಾದ್‌
  • ಅಭಯ್ ಡಾಂಗೆ ವೆಡ್ಸ್‌ ಸುಪ್ರಿಯೋ ಚಕ್ರವರ್ತಿ
first time in Hyderabad a gay couple has entered into a wedlock akb
Author
Bangalore, First Published Dec 20, 2021, 4:13 PM IST

ಹೈದರಾಬಾದ್‌(ಡಿ.20): ತೆಲುಗು ರಾಜ್ಯ ತೆಲಂಗಾಣದ ಹೈದಾರಾಬಾದ್‌ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಡಿಸೆಂಬರ್ 18 ರಂದು ಹೈದರಾಬಾದ್‌ನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ 34 ವರ್ಷದ ಅಭಯ್ ಡಾಂಗೆ (Abhay Dange) ಮತ್ತು 31 ವರ್ಷದ ಸುಪ್ರಿಯೋ ಚಕ್ರವರ್ತಿ (Supriyo Chakraborty) ಉಂಗುರ ಬದಲಿಸಿಕೊಂಡಿದ್ದಾರೆ.  ಇವರ ವಿವಾಹದಲ್ಲಿ ಇವರ ಕುಟುಂಬದ 60  ಜನ ಸದಸ್ಯರು ಮತ್ತು ದಂಪತಿಗಳ ಆಪ್ತರು ಭಾಗವಹಿಸಿದ್ದರು. ಹೈದರಾಬಾದ್‌ನ  ತೃತೀಯ ಲಿಂಗಿ ಮಹಿಳೆ ಸೋಫಿಯಾ ಡೇವಿಡ್ ಅವರು ಈ ವಿವಾಹವನ್ನು ನೆರವೇರಿಸಿದರು.

ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಬದ್ಧ ಮಾನ್ಯತೆ ಇಲ್ಲ.  ಸುಪ್ರಿಯೋ ಮತ್ತು ಅಭಯ್ ತಮ್ಮ ಎಂಟು ವರ್ಷಗಳ ಸುದೀರ್ಘ ಸಂಬಂಧವನ್ನು ಅಧಿಕೃತಗೊಳಿಸಲು ಈ 'ಭರವಸೆಯ ಸಮಾರಂಭ'(promising ceremony)ವನ್ನು ಆಯೋಜಿಸಿದ್ದರು. ಅಭಯ್, ಪಂಜಾಬಿ ಮೂಲದವರಾಗಿದ್ದು,  ಅವರು ಇ-ಕಾಮರ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಯಾಗಿದ್ದಾರೆ. ಸುಪ್ರಿಯೋ ಅವರು ಬೆಂಗಾಲಿಯಾಗಿದ್ದು, ಅತಿಥ್ಯ(ಆಹಾರೋದ್ಯಮ) ಉದ್ಯಮದಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. 

Adoption ಅನಾರೋಗ್ಯಪೀಡಿತ ಮಗುವನ್ನು ಒಲಿಂಪಿಕ್ ಚಾಂಪಿಯನ್‌ ಆಗುವಂತೆ ಬೆಳೆಸಿದ ತೃತೀಯ ಲಿಂಗಿ ತಂದೆ

ಈ ವಿವಾಹ ಸಮಾರಂಭವು ಬೆಂಗಾಲಿ ( Bengali) ಮತ್ತು ಪಂಜಾಬಿ (Punjabi) ಎರಡೂ ಸಂಪ್ರದಾಯಗಳೊಂದಿಗೆ ನಡೆಯಿತು. ವಿವಾಹ ಮಹೋತ್ಸವದ ಅಂಗವಾಗಿ ಅರಶಿಣ ಶಾಸ್ತ್ರ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದವು. ಈ ವಿವಾಹದಲ್ಲಿ ಹೈದರಾಬಾದ್‌ನ ಎಲ್‌ಜಿಬಿಟಿ ಸಮುದಾಯ (LGBT community)ದ ಸದಸ್ಯರು ಸಹ ಭಾಗವಹಿಸಿದ್ದರು.

 

 

ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ ಇವರಿಬ್ಬರು ಅಕ್ಟೋಬರ್‌ನಲ್ಲಿ ತಾವು ವಿವಾಹವಾಗುವುದಾಗಿ ಘೋಷಿಸಿಕೊಂಡಿದ್ದರು. ಟಾಲಿವುಡ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಈ ಸಲಿಂಗಕಾಮಿ ವಿವಾಹವನ್ನು ಬೆಂಬಲಿಸಿದ್ದರು. ಮತ್ತು ನೂತನ ದಂಪತಿಗಳಿಗೆ ಟ್ವಿಟರ್‌ನಲ್ಲಿ ನಟಿ ಸಮಂತಾ ಶುಭ ಹಾರೈಸಿದ್ದಾರೆ. ಸುಪ್ರಿಯೋ ಚಕ್ರವರ್ತಿ ಹಾಗೂ ಅಭಯ್ ಡಾಂಗೆ ಅವರ ಪೋಷಕರು ಆರಂಭದಲ್ಲಿ ಈ ವಿವಾಹಕ್ಕೆ ಸಮ್ಮತಿ ನೀಡಿರಲಿಲ್ಲ. ಆದರೆ ಹಲವು ಪ್ರಯತ್ನಗಳ ನಂತರ ಅವರು ಈ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Miss Trans Global 2021: ವಿಶ್ವದ ತೃತೀಯ ಲಿಂಗಿ ಸುಂದರಿ ಕಿರೀಟ ಗೆದ್ದ ಭಾರತದ ಶ್ರುತಿ ಸಿತಾರ

ಸುಪ್ರಿಯೋ ಮತ್ತು ಅಭಯ್, ತಮ್ಮ ವಿವಾಹದಿಂದ ಈ ಸಮುದಾಯದಲ್ಲಿರುವ ಅನೇಕ ಜೋಡಿಗಳಿಗೆ ಒಂದು ನಿರ್ಬಂಧದಿಂದ ಹೊರ ಬಂದು ತಮ್ಮ ಇಚ್ಛೆಯಂತೆ ಜೀವಿಸಲು ಮತ್ತು (LGBTQ) ಸಂಬಂಧಗಳನ್ನು ಸಾಮಾನ್ಯಗೊಳಿಸಲು ಒಂದು ಭರವಸೆ ನೀಡುತ್ತದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಒಂದೇ ಲಿಂಗದವರು ವಿವಾಹವಾಗುವುದಕ್ಕೆ ಕಾನೂನಿನ ಸಮ್ಮತಿ ಇಲ್ಲ. ಈ ವಿವಾಹವನ್ನು  ಕಾನೂನು ಬದ್ಧಗೊಳಿಸಬೇಕು ಎಂದು ಹೇಳುವ ಅವರು. ಸರ್ಕಾರ ಈ ವಿವಾಹಕ್ಕೆ ಕಾನೂನು ಬದ್ಧ ಅನುಮತಿ ನೀಡಿದ ಬಳಿಕ ಈ ಜೋಡಿ ತಮ್ಮ ಮದುವೆಯನ್ನು ನೋಂದಾಯಿಸುವ ಯೋಜನೆಯಲ್ಲಿದ್ದಾರೆ.

ಹೆಣ್ಣು ಅಲ್ಲದ ಗಂಡು ಅಲ್ಲದ ತೃತೀಯ ಲಿಂಗಿ ಸಮುದಾಯಕ್ಕೆ ಉದ್ಯೋಗದಲ್ಲಿ ಮಾನ್ಯತೆ ನೀಡಬೇಕು ಎಂಬ ಕೂಗು ಹಿಂದಿನಿಂದಲೂ ಕೇಳಿ ಬಂದಿದೆ. ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಲು ತೃತೀಯ ಲಿಂಗಿ ಸಮುದಾಯದ ಸದಸ್ಯರಿಗೆ ಅನುಮತಿ ನೀಡಿದೆ. ಗ್ರೇಸ್ ಬಾನು ಗಣೇಶನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವಾಗ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಡಿ ಆದಿಕೇಶವಾಲು ಅವರ ನ್ಯಾಯಪೀಠವು ಅನುಮತಿ ನೀಡಿದೆ. ತೃತೀಯ ಲಿಂಗಿಗಳಿಗೆ ವಿಶೇಷ ನೇಮಕಾತಿ ಆಂದೋಲನವನ್ನು ಕೈಗೊಳ್ಳಲು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು.

Follow Us:
Download App:
  • android
  • ios