* ಎರಡೂ ಡೋಸ್‌ಗಳ ಮಧ್ಯೆ 3-4 ತಿಂಗಳ ಅಂತರವಿರಬೇಕು ಎಂಬುದು ಸರಿಯಲ್ಲ* ಲಸಿಕೆ ಅಭಾವದಿಂದ ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರ ವಿಸ್ತರಣೆ * ದೇಶದಲ್ಲಿ ಲಸಿಕೆಗಳ ಕೊರತೆ ಕಾರಣದಿಂದಾಗಿ ಭಾರತ ಸರ್ಕಾರ ಕೋವಿಶೀಲ್ಡ್‌ ಲಸಿಕೆಯ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಿದೆ

ಮುಂಬೈ(ಆ.15): ಲಸಿಕೆ ಅಭಾವದಿಂದ ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರ ವಿಸ್ತರಣೆ ಮಾಡಲಾಗಿದೆ ಎಂದು ಕೋವಿಶೀಲ್ಡ್‌ ತಯಾರಿ ಸೀರಂ ಸಂಸ್ಥೆಯ ಅಧ್ಯಕ್ಷ ಸೈರಸ್‌ ಪೂನಾವಾಲಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಪೂನಾವಾಲಾ, ಎರಡೂ ಡೋಸ್‌ಗಳ ಮಧ್ಯೆ 3-4 ತಿಂಗಳ ಅಂತರವಿರಬೇಕು ಎಂಬುದು ಸರಿಯಲ್ಲ. ಆದರೆ ಕೋವಿಡ್‌ನಿಂದ ಗುಣಮುಖರಾದ ವ್ಯಕ್ತಿಯು 3-4 ತಿಂಗಳ ಅಂತರದಲ್ಲಿ ಲಸಿಕೆ ಪಡೆಯಬಹುದು. ಸಾಮಾನ್ಯ ಪ್ರಕರಣಗಳಲ್ಲಿ ಇದು ಮರುಕಳಿಸಬಾರದು. ಆದಾಗ್ಯೂ, ದೇಶದಲ್ಲಿ ಲಸಿಕೆಗಳ ಕೊರತೆ ಕಾರಣದಿಂದಾಗಿ ಭಾರತ ಸರ್ಕಾರ ಕೋವಿಶೀಲ್ಡ್‌ ಲಸಿಕೆಯ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಗಿತ್ತು ಎಂದರು.

ಅಲ್ಲದೆ ಎರಡೂ ಡೋಸ್‌ಗಳನ್ನು ಪಡೆದ ವ್ಯಕ್ತಿಯಲ್ಲಿ 6 ತಿಂಗಳ ಬಳಿಕ ಕೋವಿಡ್‌ ವಿರುದ್ಧ ಹೋರಾಡುವ ಪ್ರತಿಕಾಯಗಳ ಸಾಮರ್ಥ್ಯ ಕುಸಿಯುತ್ತದೆ. ಹೀಗಾಗಿ ಎರಡೂ ಡೋಸ್‌ ಪಡೆದ 6 ತಿಂಗಳ ಬಳಿಕ 3ನೇ ಡೋಸ್‌(ಬೂಸ್ಟರ್‌) ಅನ್ನು ಪಡೆಯಬಹುದು ಎಂದರು.

ಈ ಹಿಂದೆ ವೈಜ್ಞಾನಿಕ ಕಾರಣ ಹಿನ್ನೆಲೆಯಲ್ಲಿ 4-8 ವಾರಗಳ ಅಂತರದಲ್ಲಿ ಪಡೆಯಬಹುದಾಗಿದ್ದ ಕೋವಿಶೀಲ್ಡ್‌ ಲಸಿಕೆಯ 2 ಡೋಸ್‌ಗಳ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.