Asianet Suvarna News Asianet Suvarna News

ಗಂಗಾ ನದಿ ನೀರು ಮೊದಲ ಬಾರಿ ಕುಡಿಯಲು ಬಳಕೆ

  • ಬಿಹಾರದಲ್ಲಿ ನ.27, 28ರಂದು ನೀರು ಪೂರೈಕೆಗೆ ನಿತೀಶ್‌ ಚಾಲನೆ
  • ದಕ್ಷಿಣ ಬಿಹಾರದ ನೀರಿನ ಕೊರತೆಯಿರುವ ನಗರಗಳಿಗೆ ಅನುಕೂಲ
  • ಹರ್‌ಘರ್‌ ಗಂಗಾಜಲ ಭರವಸೆ ಈಡೇರಿಸಿದ ಸಿಎಂ ನಿತೀಶ್‌ ಕುಮಾರ್‌
  • ಪ್ರತಿ ವರ್ಷ 75 ಲಕ್ಷ ಜನರಿಗೆ ಇದರಿಂದ ಅನುಕೂಲ
     
Ganga river water used for drinking for the first time, CM Nitish Kumar will innogurate plan on Bihar on November 27 and 28 akb
Author
First Published Nov 23, 2022, 8:47 AM IST

ಪಾಟ್ನಾ: ದೇಶದ ಪ್ರಮುಖ ನದಿಯಾದ ಗಂಗಾನದಿ ನೀರನ್ನು ಕುಡಿಯಲು ಬಳಸುವ ಯೋಜನೆಯ ಮೊದಲ ಬಾರಿ ಯಶಸ್ವಿಯಾಗಿದೆ. ಬುದ್ಧಗಯಾ, ಗಯಾ ಮತ್ತು ರಾಜಗೀರ್‌ಗಳು ಶುದ್ಧ ಮತ್ತು ಸಂಸ್ಕರಿಸಿದ ಗಂಗಾ ಕುಡಿಯುವ ನೀರನ್ನು ಪಡೆದುಕೊಳ್ಳಲು ಸಜ್ಜಾಗಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಈ ಯೋಜನೆಯನ್ನು ನ.27ರಂದು ರಾಜಗೀರ್‌ನಲ್ಲಿ ಮತ್ತು ನ.28ರಂದು ಗಯಾ ಹಾಗೂ ಬುದ್ಧ ಗಯಾದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಹೊಂದಿರುವ ಈ ಪ್ರದೇಶಗಳಿಗೆ ಗಂಗಾನದಿ ನೀರಿನ್ನು ಶುದ್ಧೀಕರಿಸಿ ವಿತರಣೆ ಮಾಡಲು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar)  ‘ಹರ್‌ಘರ್‌ ಗಂಗಾಜಲ’ (Harghar Gangajala) ಎಂಬ ಈ ಯೋಜನೆಯನ್ನು ರೂಪಿಸಿದ್ದರು. ಈಗ ಕಾರ‍್ಯಗತಗೊಂಡಿದ್ದು, ಬಿಹಾರದ ಲಕ್ಷಾಂತರ ನಿವಾಸಿಗಳು ಮತ್ತು ಯಾತ್ರಿಗಳಿಗೆ ಅನುಕೂಲ ಒದಗಿಸಲಿದೆ ಎಂದು ಬಿಹಾರ ಜಲ ಸಚಿವ ಸಂಜಯ್‌ ಝಾ (Sanjay Jha) ಹೇಳಿದ್ದಾರೆ.

ಬಿಹಾರದ ಈ ಪ್ರದೇಶಗಳಲ್ಲಿ ಗಂಗಾನದಿ ಹರಿಯುತ್ತಿದ್ದರೂ ಸಹ ಅನೇಕ ಪ್ರದೇಶಗಳು ಕುಡಿಯುವ ನೀರಿನಿಂದ ವಂಚಿತವಾಗಿದ್ದವು. ಹಾಗಾಗಿ ಮಳೆಗಾಲದಲ್ಲಿ ಜಲಾಶಯಗಳಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿ ವರ್ಷವಿಡೀ ವಿತರಿಸಲು ಈ ಯೋಜನೆಯನ್ನು ರೂಪಿಸಲಾಯಿತು. ಮುಖ್ಯಮಂತ್ರಿಯ ಈ ಕನಸಿನ ಯೋಜನೆಯನ್ನು ಜಲಸಂಪನ್ಮೂಲ ಇಲಾಖೆ (Water Resources Department) ಮತ್ತು ಮೇಘಾ ಎಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟ್ರಕ್ಚರ್‌ ಲಿ. (ಎಂಇಐಎಲ್‌)ಗಳು ಯಶಸ್ವಿಯಾಗಿ ಕಾರ‍್ಯಗತಗೊಳಿಸಿವೆ. ಇದರಲ್ಲಿ ಮಳೆಗಾಲದಲ್ಲಿ ಹೆಚ್ಚುವರಿ ನದಿ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ನಂತರ 365 ದಿನಗಳವರೆಗೆ ಜನರಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ.

Namami Gange: ಫಲ ನೀಡಿದ ಯೋಜನೆ,  ಗಂಗಾ ನೀರು ಸ್ನಾನಕ್ಕೆ ಯೋಗ್ಯ

ಯೋಜನೆಯ ಮೊದಲ ಹಂತವು ಈಗ ಸಂಪೂರ್ಣವಾಗಿ ಸಿದ್ಧವಾಗಿದ್ದು, ಪೌರಾಣಿಕ (mythological), ಐತಿಹಾಸಿಕ(historical), ಸಾಂಸ್ಕೃತಿಕ (cultural) ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿರುವ ಮೂರು ನಗರಗಳಲ್ಲಿ ಕಾರ್ಯಾರಂಭ ಮಾಡುತ್ತಿದೆ. 2019ರ ಡಿಸೆಂಬರ್‌ನಲ್ಲಿ ಬುದ್ಧಗಯಾದಲ್ಲಿ (Buddha Gaya)ನಡೆದ ವಿಶೇಷ ಸಭೆಯಲ್ಲಿ ಮುಖ್ಯಮಂತ್ರಿ ಈ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯು ರಾಜಗೀರ್‌ (9.915 ಎಂ.ಸಿ.ಎಂ), ಟೆಟಾರ್‌ (18.633 ಎಂ.ಸಿ.ಎಂ) ಮತ್ತು ಗಯಾ (0.938 ಎಂ.ಸಿ.ಎಂ) ಗಳಲ್ಲಿ ಜೀವಂತ ಸಾಮರ್ಥ್ಯದೊಂದಿಗೆ ಮೂರು ಶೇಖರಣಾ ಜಲಾಶಯಗಳನ್ನು ಹೊಂದಿದೆ. ಈ ಜಲಾಶಯಗಳಿಂದ ರಾಜಗೀರ್‌, 24 ಎಂಎಲ್‌ಡಿ, ಮನ್ಪುರ್‌ ಮತ್ತು ಗಯಾದಲ್ಲಿ 186.5 ಎಂಎಲ್‌ಡಿ ಸಾಮರ್ಥ್ಯದ ವಿವಿಧ ಸಾಮರ್ಥ್ಯದ ಮೂರು ವಿಭಿನ್ನ ನೀರು ಸಂಸ್ಕರಣಾ ಘಟಕಗಳಿಗೆ (ಡಬ್ಲ್ಯುಟಿಪಿ) ನೀರನ್ನು ಪಂಪ್‌ ಮಾಡಲಾಗುತ್ತದೆ.

ಕೇವಲ ಒಂದು 'Digital Pass' ಖರೀದಿಸಿ ಕಾಶಿಯ ಸುಂದರ ಸ್ಥಳಗಳನ್ನು ನೋಡಿ

ಕಾಶಿಯಲ್ಲಿ ಉಕ್ಕೇರಿದ ಗಂಗೆ: ರಸ್ತೆಯಲ್ಲೇ ಶವ ದಹನ!

ಗಂಗೆಯಲ್ಲಿ 3 km ಈಜಿ ಮಾವುತನ ರಕ್ಷಿಸಿದ ಆನೆ: ವಿಡಿಯೋ ವೈರಲ್

Follow Us:
Download App:
  • android
  • ios