Asianet Suvarna News Asianet Suvarna News

ಗಣೇಶೋತ್ಸವಕ್ಕೆ ಸರ್ಕಾರದಿಂದ ಮಾರ್ಗಸೂಚಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ವಾರ್ಡ್‌ ಮಟ್ಟದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗೊಂಡ ಏಕ ಗವಾಕ್ಷಿ ವ್ಯವಸ್ಥೆ ಇರಬೇಕು, ಅರ್ಜಿ ಸಲ್ಲಿಸಿದ 3 ದಿನದೊಳಗೆ ಪರವಾನಗಿ ನೀಡಬೇಕು.

Permission Mandatory for Public Ganesha Installation in Karnataka grg
Author
Bengaluru, First Published Aug 24, 2022, 2:00 AM IST

ಬೆಂಗಳೂರು(ಆ.24):  ಗೌರಿ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅನುಮತಿ ಪಡೆಯುವ ಸಂಬಂಧ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ವಾರ್ಡ್‌ ಮಟ್ಟದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗೊಂಡ ಏಕ ಗವಾಕ್ಷಿ ವ್ಯವಸ್ಥೆ ಇರಬೇಕು, ಅರ್ಜಿ ಸಲ್ಲಿಸಿದ 3 ದಿನದೊಳಗೆ ಪರವಾನಗಿ ನೀಡಬೇಕು, ಸರ್ಕಾರ ನೀಡಿರುವ ಸೂಚನೆ ಪಾಲಿಸುವ ಬಗ್ಗೆ ಆಯೋಜಕರಿಂದ ಮುಚ್ಚಳಿಕೆ ಪಡೆಯಬೇಕು..- ಎಂಬ ಅಂಶಗಳು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್‌, ವಿದ್ಯುತ್‌ ಸಂಪರ್ಕ ಮತ್ತಿತರ ಪರವಾನಗಿ ಪಡೆಯಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ, ಪೊಲೀಸ್‌ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ಪರವಾನಗಿ ಪಡೆಯಬೇಕು. ಸಂಬಂಧಿಸಿದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್‌ ಮಟ್ಟದಲ್ಲಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಏಕ ಗವಾಕ್ಷಿ ವ್ಯವಸ್ಥೆ ಸ್ಥಾಪಿಸಬೇಕು. ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಬೇಕು. ಈ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ನಡೆಸಿ 3 ದಿನದೊಳಗೆ ಪರವಾನಗಿ ನೀಡಬೇಕು ಎಂದು ತಿಳಿಸಲಾಗಿದೆ. ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಗಣೇಶ ಚತುರ್ಥಿ 2022: ಇಲ್ಲಿ ಮಾತ್ರ ನೀವು ನರ ಮುಖ ಗಣೇಶನ ದರ್ಶನ ಮಾಡ್ಬೋದು!

ಆಯೋಜಕರಿಂದ ಮುಚ್ಚಳಿಕೆ

ನ್ಯಾಯಾಲಯದ ನಿರ್ದೇಶನಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ನೀಡಿರುವ ಸೂಚನೆಗಳನ್ನು ಪಾಲಿಸುವ ಬಗ್ಗೆ ಆಯೋಜಕರಿಂದ ಮುಚ್ಚಳಿಕೆ ಪಡೆಯಬೇಕು. ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದಂತೆ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಆಯೋಜಕರಿಂದ ಖಾತರಿ ಪಡೆಯಬೇಕು. ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಆಯೋಜಕರಿಗೆ ಸೂಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಹೈಟೆನ್ಷನ್‌ ವಿದ್ಯುತ್‌ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿ ಸ್ಥಾಪಿಸಲು ಅನುಮತಿ ನೀಡಬಾರದು. ಉತ್ಸವಕ್ಕೆ ಮೊದಲು ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

Ganesh Chaturthi 2022: ನೋಡಲೇಬೇಕಾದ ಪ್ರಸಿದ್ಧ ಗಣೇಶನ ದೇವಾಲಯಗಳಿವು

ಗಣೇಶೋತ್ಸವಕ್ಕೆ ಬೆಂಗಳೂರಿನಲ್ಲಿ ಅನುಮತಿ‌ ಕೇಂದ್ರಗಳು ಎಲ್ಲೆಲ್ಲಿವೆ..?

ಯಲಹಂಕ ವಲಯ :

- ಯಲಹಂಕ ಬಿಬಿಎಂಪಿ ಕಚೇರಿ
- ಕೊಡಿಗೆಹಳ್ಳಿ ಬಿಬಿಎಂಪಿ ಕಚೇರಿ
- ಯಲಹಂಕ ಉಪನಗರ ಕಚೇರಿ
- ಬ್ಯಾರಾಯನಪುರ ಕಚೇರಿ
- ವಿದ್ಯಾರಣ್ಯಪುರ ಕಚೇರಿ

ಮಹದೇವಪುರ ವಲಯ :

- ಹೊರಮಾವು ಕಚೇರಿ
- ಕೆಆರ್ ಪುರ ಕಚೇರಿ
- HAL ಏರ್ಪೋರ್ಟ್ ವಾರ್ಡ್ ಕಚೇರಿ
- ಹೂಡಿ ಬಿಬಿಎಂಪಿ ವಾರ್ಡ್ ಕಚೇರಿ
- ವೈಟ್ ಫೀಲ್ಡ್ ವಾರ್ಡ್ ಕಚೇರಿ
- ಮಾರತಹಳ್ಳಿ ವಾರ್ಡ್ ಕಚೇರಿ

ದಾರಸಹಳ್ಳಿ ವಲಯ :

- ಶೆಟ್ಟಿಹಳ್ಳಿ ವಾರ್ಡ್ ಕಚೇರಿ
- ಟಿ ದಾಸರಹಳ್ಳಿ ವಾರ್ಡ್ ಕಚೇರಿ
- ಪೀಣ್ಯ ಕೈಗಾರಿಕಾ ಕೇಂದ್ರ ವಾರ್ಡ್ ಕಚೇರಿ
- ಹೆಗ್ಗನಹಳ್ಳಿ ವಾರ್ಡ್ ಕಚೇರಿ

ಆರ್ ಆರ್ ನಗರ ವಲಯ :

- ಆರ್ ಆರ್ ನಗರ ವಾರ್ಡ್ ಕಚೇರಿ
- ಲಗ್ಗೆರೆ ವಾರ್ಡ್ ಕಚೇರಿ
- ಗೊರಗುಂಟೆಪಾಳ್ಯ ವಾರ್ಡ್ ಕಚೇರಿ
- ಯಶವಂತಪುರ ವಾರ್ಡ್ ಕಚೇರಿ
- ಕೆಂಗೇರಿ ವಾರ್ಡ್ ಕಚೇರಿ
- ಹೇರೋಹಳ್ಳಿ ವಾರ್ಡ್ ಕಚೇರಿ

ಪಶ್ಚಿಮ ವಲಯ :

- ಮಹಾಲಕ್ಷ್ಮಿ ಲೇಔಟ್ ವಾರ್ಡ್ ಕಚೇರಿ
- ನಾಗಪುರ ವಾರ್ಡ್ ಕಚೇರಿ
- ಮತ್ತಿಕೆರೆ ವಾರ್ಡ್ ಕಚೇರಿ
- ಮಲ್ಲೇಶ್ವರ ವಾರ್ಡ್ ಕಚೇರಿ
- ರಾಜಾಜಿನಗರ ವಾರ್ಡ್ ಕಚೇರಿ
- ಶ್ರೀರಾಮ ಮಂದಿರ ವಾರ್ಡ್ ಕಚೇರಿ
- ಗಾಂಧಿನಗರ ವಾರ್ಡ್ ಕಚೇರಿ
- ಕಾಟನ್ ಪೇಟೆ ವಾರ್ಡ್ ಕಚೇರಿ
- ಜೆಜೆಆರ್ ನಗರ ವಾರ್ಡ್ ಕಚೇರಿ
- ಚಾಮರಾಜಪೇಟೆ ವಾರ್ಡ್ ಕಚೇರಿ
- ಗೋವಿಂದರಾಜನಗರ ವಾರ್ಡ್ ಕಚೇರಿ
- ಚಂದ್ರಾಲೇಔಟ್ ವಾರ್ಡ್ ಕಚೇರಿ

ದಕ್ಷಿಣ ವಲಯ : 

- ಕೆಂಪೇಗೌಡ ನಗರ ವಾರ್ಡ್ ಕಚೇರಿ
- ಹೊಂಬೇಗೌಡ ನಗರ ವಾರ್ಡ್ ಕಚೇರಿ
- ವಿಜಯನಗರ ವಾರ್ಡ್ ಕಚೇರಿ
- ಗಾಳಿಆಂಜನೇಯ ದೇವಸ್ಥಾನ ವಾರ್ಡ್ ಕಚೇರಿ
- ಬಸವನಗುಡಿ ವಾರ್ಡ್ ಕಚೇರಿ
- ಗಿರಿನಗರ ವಾರ್ಡ್ ಕಚೇರಿ
- ಪದ್ಮನಾಭನಗರ ವಾರ್ಡ್ ಕಚೇರಿ
- ಬನಶಂಕರಿ ವಾರ್ಡ್ ಕಚೇರಿ
- ಬಿಟಿಎಂ ಲೇಔಟ್ ವಾರ್ಡ್ ಕಚೇರಿ
- ಕೋರಮಂಗಲ ವಾರ್ಡ್ ಕಚೇರಿ
- ಜಯನಗರ ವಾರ್ಡ್ ಕಚೇರಿ
- ಜೆಪಿನಗರ ವಾರ್ಡ್ ಕಚೇರಿ

ಪೂರ್ವ ವಲಯ :

- ಹೆಬ್ಬಾಳ ವಾರ್ಡ್ ಕಚೇರಿ
- ಜೆಸಿ ನಗರ ವಾರ್ಡ್ ಕಚೇರಿ
- ಕೆಜೆ ಹಳ್ಳಿ ವಾರ್ಡ್ ಕಚೇರಿ
- ಪುಲಿಕೇಶಿ ನಗರ ವಾರ್ಡ್ ಕಚೇರಿ
- ಹೆಚ್ ಬಿಆರ್ ಲೇಔಟ್ ವಾರ್ಡ್ ಕಚೇರಿ
- ಮಾರುತಿ ಸೇವಾನಗರ ವಾರ್ಡ್ ಕಚೇರಿ
- ಜೀವನಭೀಮ ನಗರ ವಾರ್ಡ್ ಕಚೇರಿ
- ಶಿವಾಜಿನಗರ ವಾರ್ಡ್ ಕಚೇರಿ
- ದೊಮ್ಮಲೂರು ವಾರ್ಡ್ ಕಚೇರಿ
- ಶಾಂತಿ ನಗರ ವಾರ್ಡ್ ಕಚೇರಿ
- ಸಿವಿ ರಾಮನ್ ನಗರ ವಾರ್ಡ್ ಕಚೇರಿ
- ವಸಂತ ನಗರ ವಾರ್ಡ್ ಕಚೇರಿ

ಬೊಮ್ಮನಹಳ್ಳಿ ವಲಯ :

- ಅರೆಕೆರೆ ವಾರ್ಡ್ ಕಚೇರಿ
- ಹೆಚ್ ಎಸ್ ಆರ್ ವಾರ್ಡ್ ಕಚೇರಿ
- ಬೇಗೂರು ವಾರ್ಡ್ ಕಚೇರಿ
- ಅಂಜನಾಪುರ ವಾರ್ಡ್ ಕಚೇರಿ
- ಉತ್ತರ ಹಳ್ಳಿ ವಾರ್ಡ್ ಕಚೇರಿ
 

Follow Us:
Download App:
  • android
  • ios