Asianet Suvarna News Asianet Suvarna News

ಪ್ರಸ್ತುತ ಆರ್ಥಿಕತೆಗೆ ರಿಡ್ಯೂಸ್, ರಿಯೂಸ್, ರೀಸೈಕಲ್ ಎನರ್ಜಿ ನೀತಿಯನ್ನ ಜಿ 20 ರಾಷ್ಟ್ರಗಳು ಅನುಸರಿಸುವುದು ಅಗತ್ಯ - ಜೋಶಿ

ಪಂಚದಲ್ಲೇ ದೊಡ್ಡ ಆರ್ಥಿಕತೆ ಹೊಂದಿರುವ ಜಿ20 ರಾಷ್ಟ್ರಗಳು ಸುಸ್ಥಿರ, ಸೆಕ್ಯುರ್ ಮತ್ತು ಕ್ಲೀನ್ ಎನರ್ಜಿಯತ್ತ ಸಾಗಬೇಕಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಜಿ20 ರಾಷ್ಟ್ರಗಳ ಪ್ರಥಮ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್" ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

G20 countries need to follow Reduce, Reuse, Recycle energy policy for current economy says Pralhad rav
Author
First Published Feb 6, 2023, 3:17 PM IST

ಬೆಂಗಳೂರು (ಫೆ.6) : ಪ್ರಪಂಚದಲ್ಲೇ ದೊಡ್ಡ ಆರ್ಥಿಕತೆ ಹೊಂದಿರುವ ಜಿ20 ರಾಷ್ಟ್ರಗಳು ಸುಸ್ಥಿರ, ಸೆಕ್ಯುರ್ ಮತ್ತು ಕ್ಲೀನ್ ಎನರ್ಜಿಯತ್ತ ಸಾಗಬೇಕಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಜಿ20 ರಾಷ್ಟ್ರಗಳ ಪ್ರಥಮ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್" ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿ 20 ರಾಷ್ಟ್ರಗಳ ಪ್ರತಿನಿಧಿಯವರನ್ನು ಭಾರತದ ಪರವಾಗಿ ಸ್ವಾಗತಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎನರ್ಜಿ ಟ್ರಾನ್ಸಿಶನ್ ನಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ರಾಷ್ಟ್ರಗಳು ಪರಸ್ಪರ ಸಹಕರಸಬೇಕು ಎಂದರು. ಶಕ್ತಿಯ ಪರಿವರ್ತನೆಗೆ ಎಲ್ಲಾ ಪಾಲುದಾರರಿಂದ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯಗಳನ್ನು ಬೆಂಬಲಿಸಿದಾಗ ಮಾತ್ರ ಶುದ್ಧ ಇಂಧನಕ್ಕೆ ಸಾರ್ವತ್ರಿಕ ಪ್ರವೇಶ ಸಾಧ್ಯ ಎಂದು ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು. 

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಚುನಾವಣೆಯ ತಂತ್ರದ ಬಗ್ಗೆ ಪ್ರಲ್ಹಾದ್ ಜೋಶಿ ಹೇಳಿದ್ದೇನು?

ಭಾರತೀಯರು 'ರಿಡ್ಯೂಸ್ ರಿಯೂಸ್ ರೀಸೈಕಲ್' ಎನರ್ಜಿ ನೀತಿಯನ್ನು ಅನುಸರಿಸುತ್ತಿದೆ. ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಎಲ್ಲವನ್ನು ಒದಗಿಸುತ್ತದೆ. ಆದರೆ ಇದು ಮನುಷ್ಯನ ದುರಾಸೆಯಾಗಬಾರದು. ಇಂಧನ ಸಂರಕ್ಷಣೆ ಮತ್ತು ಸುಸ್ಥಿರತೆಯ ಮಹತ್ವವನ್ನು ಅರಿತು ಜಿ 20 ರಾಷ್ಡ್ರಗಳು ಮುನ್ನಡೆಯಬೇಕಿದೆ ಎಂದರು. 

ಜಿ20 ರಾಷ್ಟ್ರಗಳ ಮುಂದೆ ಗ್ಲೋಬಲ್ ಕ್ಲೈಮೆಟ್ ಚೇಂಜ್ ದೊಡ್ಡ ಸವಾಲಾಗಿದೆ.‌ ಪರಿಸರಕ್ಕೆ ಹಾನಿ ಮಾಡದಂತೆ ಎನಿರ್ಜಿ ಉತ್ಪಾದನೆಗೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಹೆಚ್ಚು ಗಮನ ಹರಿಸಿದೆ. ಇದಕ್ಕಾಗಿ ಭಾರತ ಸರ್ಕಾರ  ಕೈಗೊಂಡಿರುವ ಇಂಧನ ಪರಿವರ್ತನಾ ಕ್ರಮಗಳ ಕುರಿತು ಪ್ರಲ್ಹಾದ್ ಜೋಶಿ ಸಭೆಯಲ್ಲಿ ವಿವರಿಸಿದರು. 

ಈ ಪರಿವರ್ತನೆಯ ಸಮಯದಲ್ಲಿ ಭಾಗವಹಿಸುವ G20 ಪ್ರತಿನಿಧಿಗಳು ಪರಸ್ಪರ ಬೆಂಬಲಿಸುವಂತೆ ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದರು. ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಅಗತ್ಯವಿರುವವರಿಗೆ ಆರ್ಥಿಕ ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಲು ಒತ್ತು ನೀಡಲಾಗುತ್ತಿದೆ ಎಂದರು.

ಕೊಟ್ಟ ಮಾತಿನಂತೆ ನಡೆಯುವುದು ಕಾಂಗ್ರೆಸ್‌ ಡಿಎನ್‌ಎದಲ್ಲಿಯೇ ಇಲ್ಲ: ಸಚಿವ ಜೋಶಿ

ಸಭೆಯಲ್ಲಿ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಪ್ರಸ್ತುತ ಸಮಯದಲ್ಲಿ ಭಾರತ ಸರಕಾರದ ಯೋಜನೆ ಹಾಗೂ ಕ್ರಮಗಳನ್ನು ಪ್ರತಿನಿಧಿಗಳು ಶ್ಲಾಘಿಸಿದರು. ಕೇಂದ್ರ ವಿದ್ಯುತ್ ಸಚಿವರಾದ ಆರ್.ಕೆ.ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Follow Us:
Download App:
  • android
  • ios