ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಪ್ರೀತಿಯ ಅಜ್ಜಿ ನಿಧನಕ್ಕೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ನಡೆದಿದೆ. ಅಚ್ಚರಿ ಎಂಬಂತೆ ಚಿತೆಯಿಂದ ಎದ್ದು ಬಂದ ಅಜ್ಜಿ ತಮ್ಮ 103ನೇ ವರ್ಷದ ಬರ್ತ್‌ಡೇ ಆಚರಿಸಿದ ಘಟನೆ ನಡೆದಿದೆ.
ನಾಗ್ಪುರ (ಜ.14) ಮೃತಪಟ್ಟಿದ್ದಾರೆ ಎಂದು ಅಂತ್ಯಸಂಸ್ಕಾರದ ವೇಳೆ ಜೀವ ಇರುವುದು ಗೊತ್ತಾಗಿ ಬದುಕಿ ಮತ್ತೆ ಹೊಸ ಬದುಕು ಆರಂಭಿಸಿದ ಹಲವು ಘಟನೆಗಳು ವರದಿಯಾಗಿದೆ. ಅಂತ್ಯಸಂಸ್ಕಾರದ ವೇಳೆ, ಶವಾಗಾರದಲ್ಲಿ ಜೀವ ಇರುವುದು ಪತ್ತೆಯಾದ ಘಟನೆಗಳೂ ವರದಿಯಾಗಿದೆ. ಆದರೆ ಈ ಘಟನೆ ಅಚ್ಚರಿ ಮಾತ್ರವಲ್ಲ, ಹಲವರು ಶಾಕ್ ಆಗಿದ್ದಾರೆ. 103ರ ಹರೆಯದ ಅಜ್ಜಿ ಉಸಿರು ನಿಂತಿದೆ. ನಾಡಿ ಮಿಡಿತ, ಎದೆ ಬಡಿತ, ಉಸಿರು ಚೆಕ್ ಮಾಡಿದ್ದಾರೆ. ಎಲ್ಲವೂ ಸ್ಥಬ್ಧಗೊಂಡಿದೆ. ಅಜ್ಜಿ ಮೃತಪಟ್ಟಿದ್ದಾರೆ ಎಂದು ಎಲ್ಲಾ ಕುಟುಂಬಸ್ಥರು ಧಾವಿಸಿದ್ದಾರೆ. ರಾತ್ರಿಯಿಂದ ಮರುದಿನ ಬೆಳಗ್ಗೆ ವರೆಗೆ ಹಲವು ವಿಧಿವಿಧಾನಗಳು ನಡೆದಿದೆ. ಸಂಜೆ ವೇಳೆ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಚಿತೆಯಲ್ಲಿ ಅಜ್ಜಿ ದೇಹವನ್ನು ಇಡಲಾಗಿದೆ. ಇನ್ನೇನು ಅಗ್ನಿ ಸ್ಪರ್ಶ ಮಾಡಬೇಕು ಅನ್ನುವಷ್ಟರಲ್ಲೇ ಅಜ್ಜಿಯ ಕೈಳು ಚಲಿಸಿದೆ. ಜೀವಂತವಾಗಿದ್ದಾರೆ ಅನ್ನೋದು ಖಚಿತವಾಗಿದೆ. ವಿಶೇಷ ಅಂದರೆ ಚಿತೆಯಿಂದ ಎದ್ದು ಬಂದ ಅಜ್ಜಿ ತಮ್ಮ 103ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ವಿಚಿತ್ರ ಘಟನೆ ನಾಗ್ಪುರದಲ್ಲಿ ನಡೆದಿದೆ.
103ರ ಹರೆಯದ ಗಂಗಾಬಾಯಿ ಸಾಖರೆ
ಇದು ಅಚ್ಚರಿ ಮಾತ್ರವಲ್ಲ ವಿಚಿತ್ರ ಘಟನೆ, ನಾಗ್ಪುರ ಜಿಲ್ಲೆ ರಾಮ್‌ಟೆಕ್‌ನಲ್ಲಿ ಈ ಘಟನೆ ನಡೆದಿದೆ. 103 ವರ್ಷದ ಗಂಗಾಬಾಯಿ ಸಾಖರೆ ಉಸಿರು ನಿಂತಿದೆ. ಕುಟುಂಬಸ್ಥರು ಆಗಮಿಸಿದ್ದಾರೆ.ಆರೋಗ್ಯವಾಗಿದ್ದ ಅಜ್ಜಿಯ ಚಲನವಲನ ನಿಂತಿದೆ. ಹೀಗಾಗಿ ಕುಟುಂಬಸ್ಥರು ಆಗಮಿಸಿದ್ದಾರೆ. ಸೋಮವಾರ ಸಂಜೆ ಅಜ್ಜಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಎಲ್ಲರಿಗೂ ಕರೆ ಮಾಡಿದ್ದಾರೆ. ರಾತ್ರಿಯೇ ಎಲ್ಲರೂ ಆಗಮಿಸಿದ್ದಾರೆ. ಹಿಂದೂ ವಿಧಿ ವಿಧಾನದಂತೆ ಮೃತದೇಹದ ಸ್ನಾನ ಮಾಡಿಸಿ ಬಿಳಿ ಬಟ್ಟೆ ಉಡಿಸಿದ್ದಾರೆ. ಕಾಲುಗಳನ್ನು ಕಟ್ಟಿದ್ದಾರೆ. ಮೂಗಿಗೆ ಹತ್ತಿ ಇಟ್ಟಿದ್ದಾರೆ. ಉದು ಕಡ್ಡಿ ಹಚ್ಚಿದ್ದಾರೆ. ಸೋಮವಾರ ಸಂಜೆಯಿಂದ ಕಾರ್ಯಗಳು ಆರಂಭಗೊಂಡಿದೆ. ಸೋಮವಾರ ಇಡೀ ರಾತ್ರಿಯಿಂದ ಮರು ದಿನ ಅಂದರೆ ಮಂಗಳವಾರ ಬೆಳಗ್ಗೆ 10 ಗಂಟೆ ವರೆಗೆ ವಿಧಿ ವಿಧಾನ ಕಾರ್ಯಗಳು ನಡೆದಿದೆ.
ಅಂತ್ಯಸಂಸ್ಕಾರದ ವೇಳೆ ಬೆಚ್ಚಿ ಬಿದ್ದ ಕುಟುಂಬ
ಪ್ರೀತಿಯ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಎಲ್ಲಾ ತಯಾರಿ ಮಾಡಲಾಗಿದೆ. ಬಳಿಕ ಅಜ್ಜಿಯ ದೇಹವನ್ನು ಚಿತೆಯಲ್ಲಿ ಇಡಲಾಗಿದೆ. ಅಗ್ನಿ ಸ್ಪರ್ಶಕ್ಕೆ ಕೆಲವೇ ನಿಮಿಷಗಳು ಮಾತ್ರ ಬಾಕಿ ಅಷ್ಟರಲ್ಲೇ ಅಜ್ಜಿಯ ಕಾಲುಗಳು ಚಲಿಸಿದೆ. ಕೈಬೆರಳುಗಳಲ್ಲಿ ಚಲನ ಗಮನಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ವಿಧಿ ವಿಧಾನ ನಿಲ್ಲಿಸಿ ಅಜ್ಜಿಯ ನಾಡಿ ಮಿಡಿತ ನೋಡಿದ್ದಾರೆ. ಅಚ್ಚರಿಯಾಗಿದೆ. ನಾಡಿ ಮಿಡಿತ, ಉಸಿರು, ಎಲ್ಲವೂ ಇದೆ. ಅಜ್ಜಿಯನ್ನು ಚಿತೆಯಿಂದ ಎತ್ತಿ ಮನೆಯತ್ತ ತಂದಿದ್ದಾರೆ. ಸುದೀರ್ಘ ಸಮಯ ನೀರು, ಅಹಾರ ಇಲ್ಲದೆ ಇದ್ದ ಅಜ್ಜಿಗೆ ನೀರು ಕೊಡಲಾಗಿದೆ. ಕೆಲ ಹೊತ್ತಲ್ಲೇ ಅಜ್ಜಿ ಚೇತರಿಸಿಕೊಂಡಿದ್ದಾರೆ.
103ನೇ ಹುಟ್ಟು ಹಬ್ಬ ದಿನವೇ ಅಚ್ಚರಿ
ಅದು ಅಜ್ಜಿಯ 103ನೇ ವರ್ಷದ ಹುಟ್ಟು ಹಬ್ಬದ ದಿನವಾಗಿತ್ತು. ಅಂದೇ ಅಜ್ಜಿ ಸತ್ತು ಮತ್ತೆ ಬದುಕಿ ಬಂದಿದ್ದಾರೆ. ಚೇತರಿಸಿಕೊಂಡ ಕಾರಣ ಕುಟುಂಬಸ್ಥರು ಕೇಕ್ ತರಿಸಿದ್ದಾರೆ. ಅಜ್ಜಿ ತಮ್ಮ 103ನೇ ವರ್ಷದ ಕೇಕ್ ಕತ್ತರಿಸಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಊರಿನ ಜನ ಹರಿದು ಬಂದಿದ್ದಾರೆ.


