* ಇಲ್ಲಿನ ಅಧೀನಮ್ ಪೀಠದ 293ನೇ ನೂತನ ಪೀಠಾಧಿಪತಿಯಾಗಿ ತಾನು ಅಧಿಕಾರ ವಹಿಸಿಕೊಂಡಿದ್ದೇನೆ* ಕೈಲಾಸದಿಂದಲೇ ತಾನು ಮಧುರೈ ಪೀಠಾಧಿಪತಿ ಎಂದ ನಿತ್ಯಾನಂದ
ಮಧುರೈ(ಆ.19): ಇಲ್ಲಿನ ಅಧೀನಮ್ ಪೀಠದ 293ನೇ ನೂತನ ಪೀಠಾಧಿಪತಿಯಾಗಿ ತಾನು ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಕೈಲಾಸ ದೇಶದಲ್ಲಿ ವಾಸವಾಗಿರುವ ವಿವಾದಿತ ಸ್ವಾಮಿ ನಿತ್ಯಾನಂದ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡಿದ್ದಾನೆ.
ಪೀಠದ 292ನೇ ಗುರುವಾಗಿದ್ದ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು ಆ.14ರಂದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಕಿರಿಯ ಸ್ವಾಮಿಗಳಾಗಿದ್ದ ಹರಿಹರ ದೇಶಿಕ ಪರಮಾಚಾರ್ಯ ಅವರನ್ನು ನೂತನ ಗುರುಗಳೆಂದು ಘೋಷಿಸಲಾಗಿತ್ತು. ಇದರ ಹೊರತಾಗಿಯೂ ನಿತ್ಯಾನಂದ, ತಾನೇ ಮಠದ ನೂತನ ಸ್ವಾಮಿ ಎಂದು ಘೋಷಿಸಿಕೊಂಡಿದ್ದಾನೆ.
2012ರಲ್ಲಿ ಅಧೀನಮ್ ಪೀಠದಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದ ನಿತ್ಯಾನಂದ, ನಂತರ ನಡೆದ ಗಲಾಟೆಗಳಿಂದ ಪೀಠದಿಂದ ಹೊರಹಾಕಲ್ಪಟಿದ್ದ.
