ನವದೆಹಲಿ(ಜೂ.06):  ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗಣರದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಆ್ಯಂಟಿಗುವಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಡೋಮಿನಿಕಾದಿಂದ ಆ್ಯಂಟಿಗುವಾ ಪ್ರವೇಶಿಸಿದ ವೇಳೆ ಬಂಧನಕ್ಕೊಳಗಾಗಿರುವ ಚೋಕ್ಸಿ ಕರೆತರುವ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇದರ ನಡುವೆ ಚೋಕ್ಸಿ ಹೇಳಿಕೆಗಳು ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ.

ಡೊಮಿನಿಕಾ ಜೈಲಿನಲ್ಲಿ ವಂಚಕ ಚೋಕ್ಸಿ: ಕೈಗಳಲ್ಲಿ ಗಾಯ, ಫೋಟೋ ಬಹಿರಂಗ!.

ಆ್ಯಂಟಿಗುವಾದಲ್ಲಿ ಬಂಧನಕ್ಕೊಳಗಾಗಿರುವ ಚೋಕ್ಸಿಗೆ ಜಾಮೀನು ನಿರಾಕರಿಸಿರುವ ಕೋರ್ಟ್, ಭಾರತಕ್ಕೆ ಗಡೀಪಾರು ಕುರಿತು ಮತ್ತೊಂದು ವಿಚಾರಣೆ ನಡೆಯಲಿದೆ ಎಂದಿದೆ. ಇದರ ನಡುವೆ ಚೋಕ್ಸಿ, ನಾನು ಭಾರತದಿಂದ ಪಲಾಯನ ಮಾಡಿಲ್ಲ, ಕೇವಲ ಚಿಕಿತ್ಸೆಗಾಗಿ ಆ್ಯಂಟಿಗುವಾಗೆ ಬಂದಿದ್ದೇನೆ ಎಂದಿದ್ದಾರೆ.

ಭಾರತದಿಂದ ವಿದೇಶಕ್ಕೆ ಹಾರಿ ತಲೆಮೆರಿಸಿಕೊಂಡಿದ್ದ ಮೆಹುಲ್ ಚೋಕ್ಸಿ ಹೇಳಿಕೆಗೆ ಭಾರತೀಯ ಅಧಿಕಾರಿಗಳು ಸುಸ್ತಾಗಿದ್ದಾರೆ. ನಾನು ಕಾನೂನು ಗೌರವಿಸುವ ನಾಗರೀಕ, ಹೀಗಾಗಿ ಭಾರತದಿಂದ ಪಲಾಯನ ಮಾಡುವ ಪರಿಸ್ಥಿತಿ ಇಲ್ಲ. ಗಡೀಪಾರು ಕುರಿತು ನ್ಯಾಯಾಲಯ ನಿರ್ಧರಿಸಲಿದೆ. ಹೀಗಾಗಿ ಭಾರತೀಯ ಅಧಿಕಾರಿಗಳು ನನ್ನ ವಿಚಾರಣೆ ನಡೆಸಲು ಮುಕ್ತವಾಗಿದ್ದೇನೆ. ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.

2 ದಿನದಲ್ಲಿ ಚೋಕ್ಸಿ ಭಾರತಕ್ಕೆ ಗಡಿಪಾರು?..

ನಾನು ಭಾರತದಿಂದ ವಿದೇಶಕ್ಕೆ ತೆರಳುವಾಗ ನನ್ನ ವಿರುದ್ಧ ಯಾವುದೇ ವಾರೆಂಟ್ ಇರಲಿಲ್ಲ. ಚಿಕಿತ್ಸೆಗಾಗಿ ತುರ್ತು ಆ್ಯಂಟಿಗುವಾಗೆ ಬಂದಿದ್ದೇನೆ. ಹೀಗಾಗಿ ಪಲಾಯನದ ಪ್ರಶ್ನೆ ಇಲ್ಲ. ಇನ್ನು ಭಾರತೀಯ ಅಧಿಕಾರಿಗಳು  ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದು 62 ವರ್ಷದ ಮೆಹುಲ್ ಚೋಕ್ಸಿ ಡೋಮಿನಿಕಾ  ಕೋರ್ಟ್‌ಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ಹೇಳಿದ್ದಾರೆ.