ಡೊಮಿನಿಕಾ ಜೈಲಿನಲ್ಲಿ ವಂಚಕ ಚೋಕ್ಸಿ: ಕೈಗಳಲ್ಲಿ ಗಾಯ, ಫೋಟೋ ಬಹಿರಂಗ!

* ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ ಭಾರತದಿಂದ ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ

* ಡೊಮಿನಿಕಾದಲ್ಲಿ ಜೈಲಿನಲ್ಲಿರುವ ಚಿತ್ರ ಬಿಡುಗಡೆ

* ಊದಿದ ಕಣ್ಣುಗಳು, ಕೈಗಳಿಗೆ ಗಾಯಗಳಾಗಿರುವ ಚೋಕ್ಸಿ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ 

Mehul Choksi pictures from Dominica surface show him with injury marks pod

ಡೊಮಿನಿಕಾ(ಮೇ.30) ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ ಭಾರತದಿಂದ ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾದಲ್ಲಿ ಜೈಲಿನಲ್ಲಿರುವ ಚಿತ್ರ ಬಿಡುಗಡೆಯಾಗಿದೆ. ಚೋಕ್ಸಿಯನ್ನು ಭಾರತಕ್ಕೆ ವಿಚಾರಣೆಗೆ ಕಳಿಸುವಂತೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. ಊದಿದ ಕಣ್ಣುಗಳು, ಕೈಗಳಿಗೆ ಗಾಯಗಳಾಗಿರುವ ಚೋಕ್ಸಿ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2 ದಿನದಲ್ಲಿ ಚೋಕ್ಸಿ ಭಾರತಕ್ಕೆ ಗಡಿಪಾರು?

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 13,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಜತೆಗೆ ಮೆಹುಲ್ ಚೊಕ್ಸಿ ಕೂಡಾ ಆರೋಪಿಯಾಗಿದ್ದರು. ಸದ್ಯ ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗ್ವಾ ಹಾಗೂ ಬರ್ಬುಡಾದಲ್ಲಿ ಇವರು ಪೌರತ್ವ ಪಡೆದುಕೊಂಡಿದ್ದಾರೆ.

ಪಿಎನ್‌ಬಿ ವಂಚಕ ಮೇಹುಲ್‌ ಚೋಕ್ಸಿ ವಿದೇಶದಿಂದಲೂ ಪರಾರಿ!

 ಇನ್ನು ಡೊಮಿನಿಕಾದ ರಾಷ್ಟ್ರೀಯ ಭದ್ರತಾ ಸಚಿವಾಲಯ ಮತ್ತು ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ರಮ ಪ್ರವೇಶ ಮಾಡಿದ್ದರಿಂದ ಚೋಕ್ಸಿಯನ್ನು ಬಂಧಿಸಲಾಗಿತ್ತು. ಅಲ್ಲದೇ ಚೋಕ್ಸಿಯ ಪೌರತ್ವವನ್ನು ಖಚಿತಪಡಿಸಿಕೊಳ್ಳಲು ಆಂಟಿಗ್ವಾ ಮತ್ತು ಬಾರ್ಬುಡಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಂಟಿಗ್ವಾ ಅಧಿಕಾರಿಗಳು ಮಾಹಿತಿ ಕೊಟ್ಟ ಬಳಿಕ, ಮೆಹುಲ್​ ಚೋಕ್ಸಿಯನ್ನು ಆಂಟಿಗ್ವಾಗೆ  ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.

ಕಳೆದ ವಾರ ನಾಪತ್ತೆಯಾಗಿದ್ದ ಚೋಕ್ಸಿ

ಕಳೆದ ಸೋಮವಾರ ಸಂಜೆ ಆಂಟಿಗುವಾ ದ್ವೀಪದಿಂದ ನಾಪತ್ತೆಯಾಗಿದ್ದ  ಮೆಹುಲ್ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿದೆ. ಆಂಟಿಗ್ವಾ ಪೊಲೀಸರು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಿದ್ದರು. 

ಮಲ್ಯ, ನೀರವ್, ಚೋಕ್ಸಿ; ಪರಾರಿಯಾದ ಉದ್ಯಮಿಗಳಿಗೆ ಭಾರತದ ಬಿಗಿ ಕಾನೂನು ಕುಣಿಕೆ!

ಡೊಮಿನಿಕಾಗೆ ವಿಮಾನ ಕಳುಹಿಸಿದ ಭಾರತ

ಮೆಹುಲ್ ಚೋಕ್ಸಿ ಗಡಿಪಾರಿಗೆ ಸಂಬಂಧಿಸಿದ ದಾಖಲಾತಿ ಇರುವ ಖಾಸಗಿ  ವಿಮಾನವೊಂದನ್ನು ಭಾರತ ಕಳುಹಿಸಿದೆ ಎಂದು ಆಂಟಿಗ್ವಾ ಮತ್ತು ಬರ್ಬುಡಾ ಪ್ರಧಾನ ಮಂತ್ರಿ ಗಾಸ್ಟನ್ ಬ್ರೌನ್ ಆ ದೇಶದ ರೆಡಿಯೋವೊಂದಕ್ಕೆ ಹೇಳಿದ್ದಾರೆ. ಕತಾರ್ ಏರ್ ವೆಸ್ ನ ಖಾಸಗಿ ವಿಮಾನವೊಂದು ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್  ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುವುದಾಗಿ ಅಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ. ಹೀಗಿದ್ದರೂ ಭಾರತದ ಆಡಳಿತದಿಂದ ಅಧಿಕೃತ ಮಾಹಿತಿ ಹೊರಬಿದಿಲ್ಲ

Latest Videos
Follow Us:
Download App:
  • android
  • ios