ಟಿವಿ ಚರ್ಚೆ ವೇಳ ಸಿಗದ ಅವಕಾಶ, ಡ್ಯಾನ್ಸ್ ಮಾಡಿದ ಮಹಿಳೆ

  • ಟಿವಿ ಲೈವ್‌ನಲ್ಲಿ ಡಾನ್ಸ್‌ ಮಾಡಿದ ಮಹಿಳೆ
  • ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್
     
Frustrated Panelist Starts Dancing During Live Debate akb

ಕೋಲ್ಕತ್ತಾ(ಜ.19): ನ್ಯೂಸ್‌ ಚಾನೆಲೊಂದರ ಚರ್ಚೆ ವೇಳೆ ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಮಹಿಳೆಯೊಬ್ಬರು ಲೈವ್‌ ಶೋದಲ್ಲೇ ನಿರೂಪಕನ ಗಮನ ಸೆಳೆಯಲು ಡಾನ್ಸ್‌ ಮಾಡಿದಂತಹ ಘಟನೆ ನಡೆದಿದೆ. ನೀವು ನ್ಯೂಸ್ ಚಾನೆಲ್‌ಗಳ ಫ್ರೈಮ್‌ ಟೈಮ್ ಡಿಬೇಟ್‌ಗಳನ್ನು ನೋಡಿರಬಹುದು. ಇದರಲ್ಲಿ ಆ ದಿನದ ಪ್ರಮುಖ ಸುದ್ದಿ ಅಥವಾ ವಿವಾದಕ್ಕೀಡಾದ ಘಟನೆ ವಿಚಾರಗಳ ಬಗ್ಗೆ ವಿಶೇಷಜ್ಞರನ್ನು ಪ್ಯಾನೆಲ್‌ನಲ್ಲಿ ವಿಚಾರದ ಬಗ್ಗೆ ಚರ್ಚಿಸಲು ಕರೆಸಿ ಮಾತನಾಡಲು ಅವಕಾಶ ನೀಡಲಾಗುತ್ತದೆ. ಆದರೆ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಒಳಗೊಂಡಿರಬೇಕಾದ ಪ್ರೈಮ್ ಟೈಮ್ ಚರ್ಚೆಗಳು ಕೇವಲ ಒಬ್ಬರ ಅಥವಾ ಇಬ್ಬರ ಮಾತಿಗೆ ಸೀಮಿತವಾಗುತ್ತದೆ. ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಅವಕಾಶ ಕೆಲವೊಮ್ಮ ಸಿಗುವುದಿಲ್ಲ. ಇಲ್ಲಿ ಆಗಿದ್ದು ಕೂಡ ಅದೇ. 

ರಿಪಬ್ಲಿಕ್ ಬಂಗ್ಲಾ ಹೆಸರಿನ ಚಾನೆಲ್‌ವೊಂದರಲ್ಲಿ ಹೀಗೆ ಫ್ರೈಮ್‌ ಟೈಮ್‌ ಚರ್ಚೆ ನಡೆಯುತ್ತಿತ್ತು. ಈ ವೇಳೆ ತನ್ನ ಅಭಿಪ್ರಾಯವನ್ನು ಹೇಳಲು ಅವಕಾಶ ಸಿಗದಿದ್ದುದರಿಂದ ಕೋಪಗೊಂಡ ಪ್ಯಾನಲ್‌ನಲ್ಲಿದ್ದ ಮಹಿಳೆಯೊಬ್ಬರು ನಿರೂಪಕನ ಗಮನ ಸೆಳೆಯುವ ಸಲುವಾಗಿ ಡಾನ್ಸ್‌ ಮಾಡಲು ಶುರು ಮಾಡಿದರು. ಈ ಡಾನ್ಸ್‌ ಮಾಡಿದ ಮಹಿಳೆಯನ್ನು ಪರಿಸರವಾದಿ ರೋಶನಿ, ಅಲಿ(Roshni Ali) ಎಂದು ಗುರುತಿಸಲಾಗಿದೆ. 

 

ಈ ಟಿವಿ ಶೋಗೆ ಅನಿರ್ಬಾನರ್ ಅಗ್ನಿಬಾನ್ ಎಂದು ಕರೆಯಲಾಗಿತ್ತು. ಇನ್ನು ಈ ವಿಡಿಯೋ ಕಳೆದ ವರ್ಷ ನಡೆದಿದ್ದು ಎನ್ನಲಾಗುತ್ತಿದ್ದು, ಆದರೆ ಈಗ ಈ ವಿಡಿಯೋ ಟ್ವಿಟ್ಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಾಧ್ಯಮವೊಂದರ ವರದಿ ಪ್ರಕಾರ, ರೋಶನಿ ಅಲಿ ಕೋಲ್ಕತ್ತಾ(Calcutta) ಹೈಕೋರ್ಟ್‌ನಲ್ಲಿ( High Court) ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪಟಾಕಿಗಳ ನಿಷೇಧ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಟಿವಿ ಚರ್ಚೆಯಲ್ಲಿ ಪಟಾಕಿ ಹೊಡೆಸುವುದರಿಂದ ಎಷ್ಟೊಂದು ಪರಿಸರ ಮಾಲಿನ್ಯವಾಗುತ್ತಿದೆ ಹಾಗೂ ಇದರಿಂದ  ದೇಶದಲ್ಲಿ ಕೋವಿಡ್‌ ಪ್ರಕರಣಗಳು ಕೂಡ ಹೆಚ್ಚಾಗುತ್ತವೆ ಎಂದು ಹೇಳುತ್ತಿದ್ದರು. 

ಆದರೆ ಟಿವಿ ಚರ್ಚೆ ವೇಳೆ ಅವರಿಗೆ ಮಾತನಾಡಲು ಸರಿಯಾದ ಅವಕಾಶ ಸಿಗಲಿಲ್ಲ. ಇದರಿಂದ ಕೋಪಗೊಂಡ ಅವರು ಡಾನ್ಸ್‌ ಮಾಡಲು ಶುರು ಮಾಡಿದ್ದು, ಈ ಮೂಲಕ ನಿರೂಪಕ ಹಾಗೂ ಇತರ ಪ್ಯಾನಲಿಸ್ಟ್‌ಗಳ ಗಮನ ಸೆಳೆಯಲು ಮುಂದಾಗಿದ್ದರು. ಆದರೆ ಇವರ ಈ ಡಾನ್ಸ್‌ ಇಡೀ ಶೋವನ್ನೇ ಹಾಸ್ಯಮಯವಾಗಿಸಿತ್ತು. 

Sansad TV: ರಾಜ್ಯಸಭೆಯ ಟಿವಿ ಶೋ ನಿರೂಪಕಿ ಹುದ್ದೆ ತೊರೆದ ಪ್ರಿಯಾಂಕಾ ಚತುರ್ವೇದಿ, ಪತ್ರದಲ್ಲಿತ್ತು ಕಾರಣ!

ಟ್ವಿಟ್ಟರ್‌ನಲ್ಲಿ ಎಲಿಜಬೆತ್‌( Elizabeth) ಹೆಸರಿನ ಖಾತೆ ಹೊಂದಿರುವವರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದು, ನೋಡಿ ಚರ್ಚೆಯಲ್ಲಿ ಭಾಗವಹಿಸಿದ ಹಸಿರು ಬಣ್ಣದ ಕುರ್ತಾ ಧರಿಸಿದ್ದ ಮಹಿಳೆಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಏನು ಮಾಡಿದರು ನೋಡಿ ಎಂದು ಬರೆದು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಗುವ ಇಮೋಜಿಯನ್ನು ಕಾಮೆಂಟ್ ಮಾಡುತ್ತಿದ್ದಾರೆ. ಯಾಕೆಂದರೆ ಈ ವಿಡಿಯೋ  ಅಷ್ಟೊಂದು ತಮಾಷೆಯಂತೆ ಕಾಣಿಸುತ್ತಿದೆ. 

Kannada Television: ಟಿವಿ ಜಗತ್ತಿನ ಜೊತೆಗಿನ ನಂಟು ಬಿಚ್ಚಿಟ್ಟ ನಿರೂಪಕಿ ಅಪರ್ಣಾ!

Latest Videos
Follow Us:
Download App:
  • android
  • ios