Kannada Television: ಟಿವಿ ಜಗತ್ತಿನ ಜೊತೆಗಿನ ನಂಟು ಬಿಚ್ಚಿಟ್ಟ ನಿರೂಪಕಿ ಅಪರ್ಣಾ!
* ಶೇರ್ ಚಾಟ್ ನಲ್ಲಿ ಮಾತು ಕಥೆ ವಿತ್ ಖ್ಯಾತ ನಿರೂಪಕಿ ಅಪರ್ಣಾ
* ಟೆಲಿವಿಷನ್ನೊಂದಿಗಿನ ನಂಟಿನ ಸಿಹಿ ನೆನಪುಗಳನ್ನ ಹಂಚಿಕೊಂಡ ಅಪರ್ಣಾ
* ಪ್ರೇಕ್ಷಕರಲ್ಲಿ ಮೂಡುವ ಪ್ರಶ್ನೆಗಳಿಗೆ ಶೇರ್ ಚಾಟ್‌ನಲ್ಲಿ ನೇರ ಉತ್ತರ
ಸಾಮಾಜಿಕ ಜಾಲತಾಣವಾದ ಶೇರ್ ಚಾಟ್, ಅನೇಕ ಕನ್ನಡದ ಕಲಾವಿದರನ್ನ ಪ್ರೋತ್ಸಾಹಿಸುತ್ತಾ, ಪ್ರೇಕ್ಷಕರ ಮತ್ತು ಕಲಾವಿದರ ನಡುವೆ ಸಂಬಂಧವನ್ನು ಗಟ್ಟಿಯಾಗಿ ಬೆಸೆಯುವ ಸಲುವಾಗಿ ಶೇರ್ ಚಾಟ್ ತಂಡವು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದು ವಿಶೇಷ. ಪ್ರತಿದಿನ ಶೇರ್ ಚಾಟ್ ಮುಖಾಂತರ ಕುತೂಹಲಕಾರಿ ವಿಷಯದೊಂದಿಗೆ ಪರೋಕ್ಷವಾಗಿ ಕಲಾವಿದರ ಮತ್ತು ಪ್ರೇಕ್ಷಕರನ್ನು ಉತ್ತೇಜಿಸಿ ಸುತ್ತಾ ಕಾರ್ಯಕ್ರಮವನ್ನು ಆಯೋಜಿಸಿಸುತ್ತ ಬಂದಿದೆ.ಈ ತಂಡದೊಂದಿಗೆ ಆರ್.ಜೆ ವಿಕ್ಕಿಯವರು ಕೈ ಜೋಡಿಸಿ ಕಾರ್ಯಕ್ರಮವನ್ನು ನಿರೂಪಿಸುತ್ತಾ,ತಮ್ಮ ಕಂಚಿನ ಕಂಠದ ಮೂಲಕ ಕೇಳುಗರ ಮನ ಗೆದ್ದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಪ್ರೇಕ್ಷಕರಲ್ಲಿ ಮೂಡುವ ಪ್ರಶ್ನೆಗಳಿಗೆ ಶೇರ್ ಚಾಟ್ ನಲ್ಲಿ ನೇರವಾಗಿ ಕಲಾವಿದರಲ್ಲಿ ಸಂಹವನ ನಡೆಸುವ ಅವಕಾಶ ರೊಪಿಸಿಕೊಟ್ಟಿರುವುದು ವಿಭಿನ್ನ ವಿಚಾರ.
ನವೆಂಬರ್ 21 ರಂದು ವರ್ಲ್ಡ್ ಟೆಲಿವಿಷನ್ ಡೇ ಪ್ರಯುಕ್ತ ಶೇರ್ ಚಾಟ್ ತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಿರೂಪಕಿ ಹಾಗೂ ಅಭಿನಯತ್ರಿ ಅಪರ್ಣಾ ಪ್ರೇಕ್ಷಕರ ಜೊತೆ ತಮ್ಮ ಟೆಲಿವಿಷನ್ನೊಂದಿಗಿನ ನಂಟಿನ ಸಿಹಿ ನೆನಪುಗಳನ್ನ ಹಂಚಿಕೊಂಡರು.
* ಅಪರ್ಣಾರವರು ಟೆಲಿವಿಷನ್ ಲೋಕಕೆ ಮೊದಲ ಹೆಚ್ಚೆಯನ್ನಿಡುವಾಗ ಬರುವಾಗ ರೀತಿ ಬೆಳವಣಿಗೆ ಕಂಡಿತ್ತು ?
ದೂರದರ್ಶನ ಎಂಬ ಮಧ್ಯಮ ಒಂದು ನವಜಾತ ಶಿಶು ಅಂತ ಹೇಳಬಹುದು. 83 ರಲ್ಲಿ ಟೆಲಿವಿಷನ್ ಶುರುವಾಗಿದ್ದು,ಅಂದು ಹಿಂದಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಮೊದಲ ಸಲ ದೂರದರ್ಶನ ಕಂಡಾಗ ಆಗಿದಂತಹ ಬೆರಗು ಎಲ್ಲಿಲ್ಲದ ಸಂತೋಷ ಇವತ್ತಿಗೂ ನೆನಪಿನಲ್ಲಿದೆ ಮುಂದೊಂದು ದಿನ ದೂರದರ್ಶನವೇ ಬದುಕು ಕಟ್ಟಿಕೊಳ್ಳುವಂತೆ ಮಾಡುವುದು ಎಂಬ ಕಲ್ಪನೆ ಬಂದಿರಲಿಲ್ಲ.
ಮೊದಲು ನಾನು ಬೆಂಗಳೂರಿನಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಗೊಂಡಿದ್ದು. ಡ್ರಾಮಾ ಆಡಿಷನ್ ಮೂಲಕ ಕಲಾವಿದೆಯಾಗಬೇಕೆಂಬ ಕನಸನ್ನ ಹೊತ್ತು ಸಾಗಿದ ಸಂದರ್ಭ ಕನಸ್ಸಿನ ಹಕ್ಕಿಗೆ ರೆಕ್ಕೆ ಕಟ್ಟಿ ಹಾರುವಂತೆ ಸಹಾಯ ಮಾಡಿದವರು ಶ್ರೀನಿವಾಸ ಪ್ರಭು ಅವರು. ಸೂರಿ ಅವರ ನಿರ್ದೇಶನದಲ್ಲಿ ನಾಪತ್ತೆ ಆದ ಪ್ರೇಮಿ
ಎಂಬ ನಾಟಕ ಮಾಡಿದ ಅನುಭವ ಅವಿಸ್ಮರಣೀಯ.ಶ್ರೀನಿವಾಸ್ ಪ್ರಭು,ರಂಗ ಭೂಮಿ ಕಲಾವಿದರಾದ ವಿಶ್ವನಾಥ್ ರಾವ್, ಮಂಗಳ ಹಾಗೂ ಭಾರತೀಯ ಚಿತ್ರರಂಗದ ಹೆಸರಾಂತ ನಟ ಪ್ರಕಾಶ್ ರೈ ಅಂದು ಚಿತ್ರರಂಗಕ್ಕೆ ಬರುವ ಮುಂಚೆ ರಂಗ ಭೂಮಿಯ ಕಲಾವಿದನಾಗಿ ನಾಟಕದಲ್ಲಿ ನಮ್ಮೊಡನೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
* ಮೊದಲ ಬಾರಿ ನಿರೂಪಕಿಯಾಗಿ ಟೆಲಿವಿಷನ್ ಗೆ ಸೇರಿದ ಅನುಭವ?
1989 ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದೆ . ಆ ಸಮಯದಲ್ಲಿ ಮಧ್ಯಮ ಕ್ಷೇತ್ರ ಹೊಸತು, ನನಗೆ ಇವತ್ತಿಗೂ ಹೆಮ್ಮೆ ಏನೆಂದರೆ ಕರ್ನಾಟಕದಲ್ಲಿ ದೂರದರ್ಶನ ಆರಂಭವಾದಗಿನಿಂದಲೂ ಇವತ್ತಿನವರೆಗೂ ದೂರದರ್ಶನ ಜೊತೆಗಿನ ನನ್ನ ನಂಟು ಬಿಗಿಯಾಗಿದೆ. ಆಗಾಗಿ ಟೆಲಿವಿಷನ್ ಅಂದ್ರೆ ನನಗೆ ತುಂಬಾ ಅಭಿಮಾನ.
* ನಟನೆ ಅಥವಾ ನಿರೂಪಣೆ ಎರಡರಲ್ಲಿ ಯಾವುದನ್ನು ಇಷ್ಟ ಪಡುತ್ತಿರಾ?
ಒಬ್ಬ ಕಲಾವಿದನಿಗೆ ಎಲ್ಲವೂ ಇಷ್ಟ.ಯಾವುದು ಮೇಲು ಕೀಳು ಎಂಬ ಪ್ರಶ್ನೆಯೇ ಬರುವುದಿಲ್ಲ. ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡುವ ಪ್ರತಿಯೊಂದು ಕೆಲಸವೂ ಉತ್ತಮ ಪ್ರತಿಫಲ ಕೊಡುತ್ತದೆ. ಹಾಗೆನೇ ನನಗೆ ಬರೆಯುವುದು, ಹಾಡು ಕೇಳುವುದು, ಓದುವುದು,ನಿರೂಪಣೆ,ನಟನೆ ಜೊತೆಗೆ ಮನೆ ಕೆಲಸ ಮಾಡುವುದು ಕೂಡ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.
ನಿರೂಪಣೆ ಮಾಡುವ ಸಂದರ್ಭದಲ್ಲಿ ಸಭಾ ಕಂಪನವನ್ನು ಅಪರ್ಣಾರವರು ಹೇಗೆ ಎದುರಿಸುತ್ತಾರೆ?
ಭಯ ಪ್ರತಿಯೊಬ್ಬ ವ್ಯಕ್ತಿಯು ವೇದಿಕೆ ಮೆಟ್ಟಿಲೇರಿದಾಗ ಆಗುವುದು ಸಹಜ. ಭಯ ಆಗಬೇಕು! ಆವಾಗ ಮಾತ್ರ ತಪ್ಪು ಮಾಡಬಾರದು ಎಂಬ ಯೋಚನೆ ತಲೆಗೆ ಬರುವುದು ಪದ ಬಳಕೆ ಸ್ಪಷ್ಟವಾಗಿರುತ್ತದೆ, ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.
ನಿರೂಪಣೆ ಮಾಡುವಾಗ ಪದಗಳಿಗೆ ಒತ್ತು ಕೊಟ್ಟು ಹೇಗೆ ಮಾತನಾಡುತ್ತಿರಾ?
ನಮ್ಮ ಭಾಷೆಯನ್ನ ಗೌರವಿಸಿ ಪ್ರೀತಿಸಿದಾಗ ಭಾಷೆಯು ನಮ್ಮನ್ನು ಪ್ರೀತಿಸುತ್ತದೆ. ಭಾಷೆಯನ್ನ ಸ್ಪಷ್ಟವಾಗಿ ಮಾತನಾಡುತ್ತಾ ಕೇಳುತ್ತಾ ಓದುತ್ತಾ ಇದಷ್ಟು ಸಹಜವಾಗಿ ಭಾಷೆಯಲ್ಲಿ ಹಿಡಿತ ಬರುತ್ತದೆ. ಪದಗಳಿಗಾಗಿ ತಡಕಾಡುವ ಪ್ರಮೇಯ ಬರುವುದಿಲ್ಲ. ನಾವು ಯಾವ ಕೆಲಸ ಮಾಡಿದರು ನಿಷ್ಠೆಯಿಂದ ಮಾಡುವ ಪ್ರತಿಯೊಂದು ಕೆಲಸವು ನಮ್ಮಗೆ ಯಶಸ್ಸನ್ನ ತಂದುಕೊಡುತ್ತದೆ.
* ಅಪ್ಪು ಜೊತೆಗಿನ ಒಡನಾಟದ ಬಗ್ಗೆ ಅಪರ್ಣಾ ರವರ ಮನದಾಳದ ಮಾತು?
ಅಪ್ಪು ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ದೇವರ ಸ್ಥಾನ ಪಡೆದ ನಟ. ಕಲಾವಿದನಿಗೆ ಸಾವಿಲ್ಲ, ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲವಾದರೂ ಭಾವನಾತ್ಮಕವಾಗಿ ಯಾವಾಗಲೂ ನಮ್ಮ ಜೊತೆ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಚಿರಂಜೀವಿ . ಪುನೀತ್ ಅವರ ನಿಧನದ ಬಳಿಕ ನಾವು ಕಲಿಯಬೇಕಾದ ನಿಜಾಂಶ ಇರುವಷ್ಟು ದಿನ ನಗುತ್ತಾ ಪ್ರೀತಿಯಿಂದ ನಾಲ್ಕು ಜನಕ್ಕೆ ನೆರವಾಗಬೇಕು. ದೊಡ್ಮನೆ ಹುಡುಗನಾಗಿ ಅಪ್ಪಾಜೀಯವರ ಮುದ್ದಿನ ಮಗನಾಗಿ ಕರುನಾಡ ಜನರ ಮನೆ ಮಗನಾಗಿ,ಇನ್ನೊಂದು ಕಡೆ ಸಮಾಜಮುಖಿ ಸೇವೆ ಮಾಡುತ್ತಾ ವಿಶಾಲವಾದ ಹೃದಯವಂತಿಕೆ ಸ್ನೇಹಮಹಿ ಜೀವನ ಇವುಗಳನ್ನ ನಾವು ಅವರಲ್ಲಿ ಕಂಡಿದ್ದೇವೆ.
ನಾವೆಲ್ಲ ಅವರಿಗೆ ತೋರಿಸುವ ಅಭಿಮಾನ ಅವರ ಜೀವನ ಶೈಲಿಯನ್ನು ಅಳವಡಿಸಿಕೊಂಡಾಗ ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ.
-ಸುಕನ್ಯಾ ಎನ್.ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ