FROM THE INDIA GATE: ಸಂಸದ್ ಟಿವಿಯಲ್ಲಿ ಪಟ್ಟು, ದೇವೇಗೌಡ-ಮೋದಿ ಭೇಟಿ ಹಿಂದಿನ ಗುಟ್ಟು!
ಅಧಿಕಾರದ ಕಾರಿಡಾರ್‌ಗಳಲ್ಲಿ, ರಾಜಕೀಯದ ತೆರೆಮೆರೆಯಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತದೆ. ಅಭಿಪ್ರಾಯಗಳು, ಎದುರಾಳಿಯ ಸೋಲಿಸುವ ತಂತ್ರಗಳು, ಅಧಿಕಾರದ ಆಟಗಳು ಹಾಗೂ ಆಂತರಿಕ ಜಗಳಗಳು ರಾಜಕೀಯದಲ್ಲಿ ಬಹಳವೇ ಮಾಮೂಲು. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಬೃಹತ್ ಮಾಧ್ಯಮ ಜಾಲ. ದೇಶದ ಇಂಚಿಂಚಿನಲ್ಲೂ ಇದರ ಉಪಸ್ಥಿತಿ ಇದೆ. ದೇಶದಲ್ಲಿನ ರಾಜಕೀಯ ಹಾಗೂ ಅಧಿಕಾರಶಾಹಿಗಳ ನಾಡಿಮಿಡಿತವನ್ನು ಬಹಳ ಸ್ಪಷ್ಟವಾಗಿ ಜನರಿಗೆ ಮುಟ್ಟಿಸುತ್ತದೆ. ಆ ಕಾರಣಕ್ಕಾಗಿಯೇ 'ಫ್ರಮ್ ದಿ ಇಂಡಿಯಾ ಗೇಟ್' ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಮೊದಲ ಸಂಚಿಕೆಯಲ್ಲಿ ಎರಡು ಚಾನೆಲ್‌ಗಳ ನಡುವಿನ ಪೈಪೋಟಿ, ದೇವೆಗೌಡರೊಂದಿಗಿನ ಮೋದಿ ಭೇಟಿಯ ಸ್ವಾರಸ್ಯಗಳು ಇಲ್ಲಿವೆ.
ರಾಜ್ಯಸಭೆ ಮತ್ತು ಲೋಕಸಭೆ ಟಿವಿ ಚಾನೆಲ್‌ಗಳನ್ನು ಸಂಸದ್ ಟಿವಿಯಾಗಿ ವಿಲೀನಗೊಳಿಸಿದಾಗಿನಿಂದ, ಇವೆರಡರ ನಡುವಿನ ಹಗ್ಗಜಗ್ಗಾಟವು ನವದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಆಸಕ್ತಿಯ ವಿಚಾರವಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ, ಲೋಕಸಭೆ ಈ ವಿಚಾರದಲ್ಲಿ ಮೇಲುಗೈ ಸಾಧಿಸಿದೆ, ಆದರೆ ಕೆಲವು ಪ್ರೋಟೋಕಾಲ್‌ಗಳು ಲೋಕಸಭೆ ಮತ್ತು ರಾಜ್ಯಸಭೆ ಅಧಿಕಾರಿಗಳಿಗೆ ಕಗ್ಗಂಟಾಗುತ್ತಿವೆ. ರಾಜ್ಯಸಭೆಯ ಮುಖ್ಯಸ್ಥರು ಕ್ರಮದಲ್ಲಿ ಅಥವಾ ಆದ್ಯತೆಯಲ್ಲಿ 2 ನೇ ಸ್ಥಾನದಲ್ಲಿದ್ದರೆ, ಲೋಕಸಭೆಯ ಮುಖ್ಯಸ್ಥರು 6 ನೇ ಸ್ಥಾನದಲ್ಲಿದ್ದಾರೆ. ಸಾಮಾನ್ಯವಾಗಿ ನೋಡುವುದಾದರೆ, ಎರಡೂ ಸದನಗಳ ಕಾರ್ಯಕಲಾಪದ ಅನುಸಾರದಲ್ಲಿ ಸ್ಕ್ರೀನ್ ಟೈಮ್ ಕೂಡ ಎರಡೂ ಸದನಗಳಿಗೆ ಅನುಪಾತದಲ್ಲಿರುತ್ತದೆ. ಪವರ್ ಪೋರ್ಟಲ್‌ಗಳಲ್ಲಿನ ಪಿಸುಮಾತುಗಳ ಪ್ರಕಾರ ಆಯಾ ಕಚೇರಿಗಳು ಈ ಅಂಕಿಅಂಶಗಳ ಮೇಲೆ ಹೆಚ್ಚಿನ ಗಮನ ಇರಿಸುವಲ್ಲಿ ನಿರತವಾಗಿದೆ ಎನ್ನುವುದನ್ನು ಸೂಚಿಸಿದೆ. ಪ್ರೊಟೋಕಾಲ್‌ಗಳು ಹಾಗೂ ಸವಲತ್ತುಗಳ ನಡುವೆ ಸಿಲುಕಿಕೊಳ್ಳುವುದಕ್ಕಿಂತ ರಾಜಸ್ಥಾನದ ಮರುಭೂಮಿಯಲ್ಲಿ ನಡೆಯುವುದೇ ಸಲೀಸು ಎನ್ನುವುದು ಒಳಗಿನ ಅಧಿಕಾರಿಗಳ ಮಾತು.
ಶೂಟ್ ಎಟ್ ಸೈಟ್: ವಿಜಯ್ ದಿವಸ್‌ನ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಆರ್ಮಿ ಹೌಸ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಸಮಾರಂಭದ ಸಮವಸ್ತ್ರಗಳು ಹಾಗೂ ಅಷ್ಟೇ ಶುಭ್ರವಾಗಿ ಪಾಲಿಶ್ ಮಾಡಿದ್ದ ಪದಕಗಳನ್ನು ಧರಿಸಿದ್ದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದರು. ಅದಲ್ಲದೆ, ಅವರೊಂದಿಗೆ ಬೆರೆತರು.
ಈ ವೇಳೆ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ ಅವರ ದೇಹಭಾಷೆ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಸಮಾರಂಭಕ್ಕೆ ಬಂದ ಅವರು ಮೊದಲು ಕಿರಿಯ ವಿದೇಶಾಂಗ ಸಚಿವೆ ಮೀನಾಕ್ಷಿ ಲೇಖಿ ಅವರ ಹಿಂದೆ ಕುಳಿತರು, ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭಕ್ಕೆ ಆಗಮಿಸಲು ಕೆಲವೇ ಹೊತ್ತಿನ ಮೊದಲು, ಮುಂದಿನ ಸಾಲಿನ ತೀವ್ರ ಎಡ ಮೂಲೆಗೆ ತಮ್ಮ ಸ್ಥಾನವನ್ನು ಬದಲಾಯಿಸಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪಿಎಂ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆವರಣದ ಸುತ್ತಲೂ ಗಣ್ಯರಿಗೆ ಶುಭಾಶಯ ಕೋರಲು ತೆರಳಿದಾಗ, ಜನರಲ್ ಸಿಂಗ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರೊಂದಿಗೆ ಅನಿಮೇಟೆಡ್ ಸಂಭಾಷಣೆಯಲ್ಲಿ ಕಾಣಿಸಿಕೊಂಡಿದ್ದರು. ರಾಷ್ಟ್ರ ಪತಿ ದ್ರೌಪದಿ ಮುರ್ಮು ಬರುವ ಮುನ್ನ, ಸಿಜೆಐ ಚಂದ್ರಚೂಡ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸುತ್ತಿದ್ದ ರೀತಿ ಕಾಣಿಸಿತು. ಈ ವೇಳೆ ಇವರ ಚರ್ಚೆ ಏನು ಎನ್ನುವುದನ್ನು ಕೇಳುವ ಬಯಕೆಯಾಗಿದ್ದು ಮಾತ್ರ ಸುಳ್ಳಲ್ಲ.
ಇನ್ನು ಈ ಸಮಾರಂಭದಲ್ಲಿ ಇತರರಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು ಒಳಗೆ ಕೊಂಡೊಯ್ಯಲು ಅನುಮತಿ ಇರೋದಿಲ್ಲ. ಆದರೆ, ರಾಜತಾಂತ್ರಿಕ ವ್ಯಕ್ತಿಗಳು ಇದಕ್ಕೆ ಹೊರತಾಗಿದ್ದರು. ಪ್ರಧಾನಿಗಳು ಸಭೆಯ ನಡುವೆ ಸಾಗುತ್ತಿದ್ದಂತೆ, ಇವರುಗಳು ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಉತ್ಸುಕರಾಗಿದ್ದರು.
ಬರೆಯದ ಸಾವಿರ ಶಬ್ದಗಳು: ಶಬ್ದಕ್ಕಿಂತ ಚಿತ್ರ ವಿಷಯಗಳನ್ನು ಬಹಳ ಸುಲಭವಾಗಿ ಅರ್ಥ ಮಾಡಿಸುತ್ತದೆ. ಕೆಲವು ಛಾಯಾಚಿತ್ರಗಳು ನಮ್ಮನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ರಾಜಕೀಯ ವ್ಯಕ್ತಿಗಳನ್ನು ಹೊಂದಿರುವ ವೈರಲ್ ಆಗಿರುವ ಇತ್ತೀಚಿನ ಎರಡು ಫೋಟೋಗಳು ಬಹಳ ಕುತೂಹಲಕಾರಿಯಾಗಿದೆ.
ಲೆಫ್ಟ್-ರೈಟ್-ಲೆಫ್ಟ್: ಮೊದಲ ಚಿತ್ರದಲ್ಲಿ ಸಿಪಿಎಂನ ಮುಖ್ಯ ಕಾರ್ಯದರ್ಶಿ ಸಿತಾರಾಂ ಯೆಚೂರಿ, ಸಿಪಿಐ ಮುಖ್ಯ ಕಾರ್ಯದರ್ಶಿ ಡಿ.ರಾಜಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಳೆದ ಉಲ್ಲಾಸದ ಕ್ಷಣಗಳದ್ದಾಗಿವೆ. ಎರಡು ಕಮ್ಯುನಿಸ್ಟ್ ಪಾರ್ಟಿಗಳ ನಾಯಕರ ನಡುವೆ ಪಿಎಂ ಸ್ಯಾಂಡ್‌ವಿಚ್ ಆದಂತಿದ್ದರು. ಮತ್ತು ಇದು ಬಿಜೆಪಿ ಕಾರ್ಯಕರ್ತರಿಗೆ, ವಿಶೇಷವಾಗಿ ಕೇರಳದವರಿಗೆ ಪರಿಪೂರ್ಣವಾಗಿ ರಾಜಕೀಯ ಅಸ್ತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಪತ್ರಕರ್ತರು ಕೂಡ ಈ ಕ್ಷಣವನ್ನು ಹುಬ್ಬೇರಿಸಿ ನೋಡಿದ್ದರು. ಇಂಥದ್ದೊಂದು ಉಲ್ಲಾಸದ ಕ್ಷಣಕ್ಕೆ ಕಾರಣವಾದ ಚರ್ಚೆಯೇನು ಎನ್ನುವ ಕುತೂಹಲವೇ ಎಲ್ಲರಲ್ಲಿ ಕಂಡಿತ್ತು.
ಆದರೆ, ನಮ್ಮ ಪ್ರಧಾನಿಯಿಂದ ಇದರ ಒಂದಿಂಚು ಮಾಹಿತಿ ಕೂಡ ಸಿಗೋದಿಲ್ಲ. ಸಾಮಾನ್ಯವಾಗಿ ಪತ್ರಕರ್ತರಿಗೆ ಕಮ್ಯನಿಸ್ಟ್ ಪಕ್ಷದ ನಾಯಕರನ್ನು ವಿಚಾರಿಸದೇ ಬೇರೆ ಮಾರ್ಗವೇ ಇಲ್ಲ. ಇಬ್ಬರೂ ಕೂಡ ಸೈದ್ದಾಂತಿಕವಾಗಿ ಮೋದಿಯ ಬದ್ಧ ರಾಜಕೀಯ ಎದುರಾಳಿಗಳು . ಇದರಲ್ಲಿ ನಮಗೆ ಗೊತ್ತಾದ ವಿಚಾರವೆಂದರೆ, ಪ್ರಧಾನಿ ಮೋದಿ ಅವರ ಒಂದು ತೀಕ್ಷ್ಣವಾದ ಚೇಷ್ಟೆಯ ಹೇಳಿಕೆ ಇವರೆಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ ಅನ್ನೋದು.
'ನಿಮ್ಮನ್ನು ನಾನು ಪದೇ ಪದೇ ಕಾಣುತ್ತಿಲ್ಲ. ಬಹುಶಃ ನೀವು ನನ್ನಿಂದ ದೂರ ಹೋಗಲು ಪ್ರಯತ್ನಿಸುತ್ತಿರಬೇಕು, ಹೌದಲ್ಲವೇ..?' ಇದನ್ನು ಮೋದಿಯವರಿಂದ ಕೇಳಿದಾಗ, ಇಬ್ಬರೂ ಕಮ್ಯುನಿಸ್ಟ್
ನಾಯಕರು ಜೋರಾಗಿ ನಕ್ಕಿದ್ದಾರೆ. ಈ ವೇಳೆ ಮೋದಿಯವರ ಕೈ ಹಿಡಿದುಕೊಂಡು ನಕ್ಕಿದ್ದನ್ನು ಫೋಟೋಗ್ರಾಫರ್ ಸೆರೆಹಿಡಿದ್ದರು, ರಾಜಕೀಯ ಫೈರ್‌ಪವರ್‌ಗೆ ಸಾಕ್ಷಿಯಾಗಿದೆ.
ದೇವೆಗೌಡರೊಂದಿಗೆ ಮೋದಿ: ಆದರೆ ಎರಡನೇ ಫೋಟೋದಲ್ಲಿ ಮೋದಿ ಅವರು ಶುಭಾಶಯ ಕೋರುತ್ತಿರುವುದು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆತ್ಮೀಯತೆ ಮತ್ತು ಗೌರವದಿಂದ ಮೋದಿ ಸ್ವಾಗತಿಸಿದ್ದಾರೆ. ಗಾಲಿಕುರ್ಚಿಯಲ್ಲಿದ್ದ ದೇವೇಗೌಡರೊಂದಿಗೆ ಪ್ರಧಾನಿಯವರು ಅತ್ಯಂತ ಸೌಹಾರ್ದಯುತ ಮಾತುಕತೆಯಲ್ಲಿ ತೊಡಗಿದ್ದು ಚಿತ್ರದಲ್ಲಿ ಕಂಡುಬಂದಿದೆ. ನಂತರ, ದೇವೇಗೌಡರು ಮಾಧ್ಯಮಗಳಿಗೆ ಮಾತನಾಡುತ್ತಾ, ಕರ್ನಾಟಕದ ಎರಡು ಪ್ರಾದೇಶಿಕ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯವರೊಂದಿಗೆ ಚರ್ಚಿಸಿದ್ದಾಗಿ ಹೇಳಿದರು. ಆದರೆ, ಇದು ವಿಶೇಷವಾಗಿ ಕರ್ನಾಟಕ ಚುನಾವಣೆ ಸಮೀಪ ಇರುವಾಗಲೇ ರಾಜಕೀಯ ಗುಸುಗುಸುಗಳನ್ನು ಹುಟ್ಟುಹಾಕಿರುವುದಂತೂ ಸುಳ್ಳಲ್ಲ.
ಮೋದಿ-ಗೌಡರ ಭೇಟಿಗೆ ಸಾಕ್ಷಿಯಾದ ಮತ್ತೊಬ್ಬ ನಾಯಕರ ಕೆಲವು ನೆನಪುಗಳನ್ನೂ ಈ ವೇಳೆ ತೆರೆದಿಟ್ಟಿತು. 1996 ರಲ್ಲಿ ದೇವೇಗೌಡರನ್ನು 11 ನೇ ಪ್ರಧಾನಿಯಾಗಿ ಆಯ್ಕೆ ಮಾಡಿದ ಸಭೆಯಲ್ಲೂ ಕೂಡ ಅವರು ಉಪಸ್ಥಿತರಿದ್ದರು. ಅಂದರೆ, ಐತಿಹಾಸಿಕ ಪ್ರಮಾದ (ಸಿಪಿಎಂ ಸ್ವತಃ ಇದನ್ನು ಒಪ್ಪಿಕೊಂಡಂತೆ) ಹುಟ್ಟಿದ ದಿನ. ವಿಪಿ ಸಿಂಗ್ ಅವರ ಹೆಸರನ್ನು ಆರಂಭದಲ್ಲಿ ಯುನೈಟೆಡ್ ಫ್ರಂಟ್‌ನ ಸಂಭಾವ್ಯ ಪ್ರಧಾನಿ ಎಂದು ಉಲ್ಲೇಖಿಸಲಾಗಿದ್ದರೂ, ಅವರು ಪ್ರತಿಯಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರನ್ನು ಪ್ರಸ್ತಾಪಿಸಿದರು. ಆದರೆ ಸಿಪಿಎಂ ಕೇಂದ್ರ ಸಮಿತಿಯು ಈ ಪ್ರಸ್ತಾಪವನ್ನು ಎರಡು ಬಾರಿ ತಿರಸ್ಕರಿಸಿತು, ಇದರಿಂದಾಗಿ ಹೊಸದಿಲ್ಲಿಯ ತಮಿಳುನಾಡು ಭವನದಲ್ಲಿ ನಾಯಕರು ಮತ್ತೊಂದು ಸುತ್ತಿನ ಹೋರಾಟದಲ್ಲಿ ನಾಯಕರನ್ನು ಆಯ್ಕೆ ಮಾಡಲು ಚರ್ಚೆ ಆರಂಭಿಸಿದ್ದರು.
ದಿಲ್ಲಿ ಹೃದಯದಲ್ಲಿ ಭವ್ಯ ನೇತಾಜಿ, ಇಂಡಿಯಾ ಗೇಟ್ ಬಳಿ ಪ್ರತಿಮೆ!
ಜ್ಯೋತಿ ಬಸು ಅವರ ಕಣ್ಣುಗಳು ಸುತ್ತಲಿನ ಇತರ ಮುಖಗಳ ಮೇಲೆ ಹರಿದವು ಮತ್ತು ಅಲ್ಲಿನ ಪ್ರಮುಖ ನಾಯಕರಾದ ಜಿ ಕೆ ಮೂಪನಾರ್ ಮತ್ತು ದೇವೇಗೌಡರ ಮೇಲೆ ಅದು ನೆಟ್ಟಿತ್ತು. ಅವರ ಮೊದಲ ಆಯ್ಕೆ ಜಿ ಕೆ ಮೂಪನಾರ್. ಆದರೆ ಇದನ್ನು ಶಿಫಾರಸು ಮಾಡುವ ಮೊದಲು, ಕಾಮ್ರೇಡ್ ಬಸು ಅವರು ಮೂಪನಾರ್ ಅವರ ಹೆಸರನ್ನು ಸೂಚಿಸುವ ಬಗ್ಗೆ ಪಿ ಚಿದಂಬರಂ ಅವರ ಅಭಿಪ್ರಾಯಗಳ ಬಗ್ಗೆ ಪರಿಶೀಲಿಸಲು ತಮ್ಮ ಪಕ್ಕದಲ್ಲಿ ನಿಂತಿದ್ದ ``ಯುವ ನಾಯಕ''ಗೆ ಒಂದು ಹೆಸರನ್ನು ಪಿಸುಗುಟ್ಟಿದರು. ಆದರೆ, ಚಿದಂಬರಂ ಯಾವುದೇ ಕ್ಷಣ ಯೋಚಿಸದೇ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಆಗ ಜ್ಯೋತಿ ಬಸು ದೇವೇಗೌಡರ ಹೆಸರನ್ನು ಶಿಫಾರಸು ಮಾಡಿದ್ದರು. ಇದರಿಂದ ಆಶ್ಚರ್ಯಗೊಂಡ ದೇವೇಗೌಡರು, ``ನನ್ನ ಹೆಸರನ್ನು ಇಲ್ಲಿ ಏಕೆ ಉಲ್ಲೇಖಿಸಲಾಗಿದೆ ಎಂದು ನನಗೆ ತಿಳಿದಿಲ್ಲ. ಆದರೆ, ನನ್ನ ನಾಯಕರೇ ನಿರ್ಧಾರ ತೆಗೆದುಕೊಳ್ಳಬೇಕು' ಎಂದಿದ್ದರು.
ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಪ್ರಧಾನಿ ಮೋದಿ ಜೊತೆ ದೇವೇಗೌಡ ಚರ್ಚೆ
ಆ ನಾಯಕ ಲಾಲು ಪ್ರಸಾದ್ ಯಾದವ್. ತಮ್ಮ ಎಂದಿನ ಶೈಲಿಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು ಲಾಲು. ಗೌಡರ ಹೆಸರು ಅವರ ಸಂಪೂರ್ಣ ಅನುಮೋದನೆಯನ್ನು ಹೊಂದಿಲ್ಲ ಎಂದು ಅವರ ಮುಖಭಾವವೇ ಪ್ರತಿಬಿಂಬಿಸುತ್ತಿತ್ತು. ಹಾಗಿದ್ದರೂ, ನೇರವಾಗಿ ಕುಳಿತುಕೊಂಡು, ಸರಿ ಹಾಗೆಯೇ ಆಗಲಿ ಎಂದು ಬಿಟ್ಟರು. ಆ ಮೂಲಕ ಭಾರತದ 11ನೇ ಪ್ರಧಾನಮಂತ್ರಿಗೆ ದಾರಿ ಮಾಡಿಕೊಟ್ಟಿದ್ದರು.