ದೀದಿ ನಾಡಲ್ಲಿ ಧನ್ಕರ್ ತಿಕ್ಕಾಟವಿಲ್ಲ ಎಲ್ಲವೂ ಆನಂದಮಯ, ಪಿಣರಾಯಿಗೆ ರಿಲೀಫ್ ಸಮಯ!

ಪಶ್ಚಿಮ ಬಂಗಾಳ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟದ ಸಮಯ ಅಂತ್ಯಗೊಂಡಿದ್ದು, ಹೊಸ ವಸಂತಕಾಲ ಆರಂಭಗೊಂಡಿದೆ. ಇತ್ತ ಕೇರಳದಲ್ಲೂ ಆರಿಫ್ ಮೊಹಮ್ಮದ್ ಖಾನ್ ಹಾಗೂ ಪಿಣರಾಯಿ ಸರ್ಕಾರದ ನಡುವಿನ ಹಗ್ಗಜಗ್ಗಾಟ ತಿಳಿಯಾಗುವ ಸೂಚನೆ ಸಿಕ್ಕಿದೆ. ಇದರ ನಡುವೆ ಉತ್ತರ ಪ್ರದೇಶದಲ್ಲಿ ರಾಜಕೀಯ ಘರ್‌ವಾಪ್ಸಿ ಸದ್ದು ಮಾಡುತ್ತಿದೆ. ದೇಶದ ಪ್ರಮುಖ ಘಟನೆಗಳ ಕುತೂಹಲಕ ವಿಚಾರ ಇಂದಿನ ಇಂಡಿಯಾ ಗೇಟ್ ಅಂಕಣದಲ್ಲಿ.
 

From the India Gate mamata banerjee and governor anand bose to Kerla Govt and Arif Mohammed Khan political thriller climax ckm

ಸರ್ಕಾರ ರಾಜ್ಯಪಾಲರ ನಡುವಿನ ಹಗ್ಗಜಗ್ಗಾಟಕ್ಕೆ ಬ್ರೇಕ್
ಜಗದೀಪ್ ಧನ್ಕರ್ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ವೇಳೆ ಪ್ರತಿ ದಿನ ಸರ್ಕಾರ ನಡುವಿನ ಹಗ್ಗಜಗ್ಗಾಟ ಜೋರಾಗಿತ್ತು. ಆದರೆ ಧನ್ಕರ್ ಉಪ ರಾಷ್ಟ್ರಪತಿಯಾದ ಬಳಿಕ ಪಶ್ಚಿಮ ಬಂಗಾಳಕ್ಕೆ ಆನಂದ್ ಬೋಸೆ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಇದೀಗ ರಾಜ್ಯಪಾಲರು ಹಾಗೂ ಸರ್ಕಾರ ನಡುವಿನ ಸಂಬಂಧ ಚೇತರಿಸಿಕೊಂಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿದೆ. 

ರಾಜ್ಯಪಾಲ ಆನಂದ್ ಬೋಸೆ ಅವರಿಗೆ ಕೇರಳ ಆಹಾರ ಮುಂದುವರಿಸುವಂತೆ ಮಮತಾ ಬ್ಯಾನರ್ಜಿ ಸೂಚಿಸಿದ್ದರು. ಇದಕ್ಕೆ ಉತ್ತರಿಸಿದ ಆನಂದ್ ಬೋಸ್ ಬಂಗಾಳಿ ತಿನಿಸುಗಳನ್ನು ಸವಿಯುತ್ತಿದ್ದೇನೆ. ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಶ್ರೀಮತಿ ಲಕ್ಷ್ಮಿ ಆನಂದ್ ಬೋಸ್ ಅವರು ಯಾವ ಸಲಹೆ ನೀಡುತ್ತಾರೆ ಅನ್ನೋದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಹೀಗಾಗಿ ನೀವು ಕೇರಳ ಅಡುಗೆಯವರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕಬೇಡಿ. ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

 

India Gate ಸೊಸೆಯಂದಿರ ಪೈಪೋಟಿಗೆ ದೇವೇಗೌಡರು ಸುಸ್ತು, ಕಾಂಗ್ರೆಸ್‌ಗೆ ತಲೆನೋವಾದ ಗೆಹ್ಲೋಟ್ ಮಾತು!

ಆನಂದ್ ಬೋಸ್ ಅಧಿಕೃತ ಪ್ರಯಾಣಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರ ವಿಮಾನ ಬಾಡಿಗೆಗೆ ಪಡೆಯುಲು ಮುಂದಾಗಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಮುಂದೆ ಬಂದು ರಾಜ್ಯಪಾಲರು ಯಾವಗ ಬೇಕಾದರು ನಮ್ಮ ವಿಮಾನ ಬಳಕೆ ಮಾಡಿಕೊಳ್ಳಲಿದೆ. ಬೇಕಾದರೆ ಕೇರಳಕ್ಕೆ ಪ್ರಯಾಣ ಬೆಳೆಸಲು ವಿಮಾನ ಬಳಕೆ ಮಾಡಿಕೊಳ್ಳಲಿ ಎಂದು ಮಮತಾ ಬ್ಯಾನರ್ಜಿಹೇಳಿದ್ದಾರೆ. ಈ ಎರಡು ಘಟನೆಗಳು ಪಶ್ಚಿಮ ಬಂಗಾಳ ಸರ್ಕಾರ ಹಾಗೂ ರಾಜ್ಯಪಾಲರ ನಡವಿನ ಸಂಬಂಧವನ್ನು ಸಾರಿಹೇಳುತ್ತಿದೆ.  

ಸಂಪುಟಕ್ಕೆ ಮರಳಿದ ಸಾಜಿ ಚೆರಿಯನ್
ಬಂಗಾಳದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ತಿಕ್ಕಾಟ ಅಂತ್ಯಗೊಂಡಿದ್ದರೆ, ಕೇರಳದಲ್ಲಿ ಮಾತ್ರ ಹಗಜ್ಜಗ್ಗಾಟ ಮುಂದುವರಿಯುತ್ತಿದೆ. ಸಂವಿಧಾನ ವಿರೋಧಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿ ಪಿಣರಾಯಿ ವಿಜಯನ್ ಸಂಪುಟದಿಂದ ಕಿಕೌಟ್ ಆಗಿದ್ದ ಸಾಜಿ ಚೆರಿಯನ್‌ಗೆ ಕೇರಳ ಪೊಲೀಸ್ ಕ್ಲೀನ್ ಚಿಟ್ ನೀಡಿದೆ. ಇದರ ಬೆನ್ನಲ್ಲೇ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಂಪುಟಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಇತ್ತ ಸಾಜಿ ಚೆರಿಯನ್ ಮೇಲಿನ ಆರೋಪ ದೂರವಾಗುತ್ತಿದ್ದಂತೆ ಪಿಣರಾಯಿ ಸರ್ಕಾರ ಸಾಜಿಯನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದೆ.  

India Gate ಸುಂದರಿ ಹುಡುಕಾಟದಲ್ಲಿ ಬಿಜೆಪಿ, ಜೈಲು ಪ್ರವಾಸದಲ್ಲಿ ಚೋಟಾ ನೇತಾಜಿ!

ಸಾಜಿ ಚೆರಿಯನ್‌ಗೆ ಕ್ಲಿನ್ ಚಿಟ್ ಸಿಕ್ಕ ಬೆನ್ನಲ್ಲೇ ಖುದ್ದು ಆರಿಫ್ ಮೊಹಮ್ಮದ್ ಖಾನ್, ಸಂಪುಟಕ್ಕೆ ಸೇರಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಇದಕ್ಕೆ ಸರ್ಕಾರ ಕೂಡ ಸೂಕ್ತವಾಗಿ ಸ್ಪಂದಿಸಿದೆ. ಈ ಮೂಲಕ ಕೇರಳದಲ್ಲಿ ನಡೆಯುತ್ತಿದ್ದ ರಾಜ್ಯಪಾಲ ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತೆ ಕಾಣುತ್ತಿದೆ.  

ಯುಪಿಯಲ್ಲಿ ಘರ್ ವಾಪ್ಸಿ
ಹಿರಿಯ ನಾಯಕ ಶಿವಪಾಲ್ ಯಾದವ್ ಇದೀಗ ಮತ್ತೆ ಬಿಜೆಪಿ ಸೇರಿಕೊಂಡಿದ್ದಾರೆ. 2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಘರ್ ವಾಪ್ಸಿ ಭಾರಿ ಮಹತ್ವ ಪಡೆದುಕೊಂಡಿದೆ. ಬಿಜೆಪಿ ವಿರುದ್ಧವೇ ಹಲವು ಹೇಳಿಕೆ ನೀಡಿದ್ದ ಶಿವಪಾಲ್ ಯಾದವ್‌ಗೆ ಸತತ ನೋಟೀಸ್ ನೀಡಲಾಗಿತ್ತು. ಈ ಘಟನೆ ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದ ಶಿವಪಾಲ್ ಯಾದವ್ ಇದೀಗ ಮರಳಿ ಬಿಜೆಪಿ ಸೇರಿಕೊಂಡಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಶಿವಪಾಲ್ ಯಾದವ್‌ಗೆ ಟಿಕೆಟ್ ನೀಡುತ್ತಾರಾ ಅಥವಾ ಶಿವಪಾಲ್ ಯಾದವ್ ಬಳಸಿಕೊಂಡು ಯುಪಿಯಲ್ಲಿ ಬಿಜೆಪಿ ಕಮಾಲ್ ಮಾಡುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ. ಆದರೆ ಶಿವಪಾಲ್ ಯಾದವ್ ಬಿಜೆಪಿಗೆ ಆಗಮನ ಕೆಲ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಯಾದವ್ ಸರ್ನೇಮ್ ಇದೀಗ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.  
 

Latest Videos
Follow Us:
Download App:
  • android
  • ios