ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೋ ಹೋದರೂ ನಮಸ್ಕಾರ ಅನ್ನೋ ಪದ ಕೇಳಿಬರುತ್ತಿದೆ. ಉತ್ತರ ಭಾರತದಿಂದ ಬರುವ ನಾಯಕರ ಬಾಯಲ್ಲೂ ಕನ್ನಡ ಪದಗಳೇ ಕುಣಿಯು್ತಿದೆ. ಇತ್ತ ಬಿಜೆಪಿ ನಾಯಕನ ಪುತ್ರಿ ಮದುವೆ ಇದೀಗ ಉತ್ತರ ಪ್ರದೇಶ ಕೇಸರಿ ಪಾರ್ಟಿಗೆ ತಲೆನೋವು ತಂದಿದೆ. ಇದರ ನಡುವೆ ರಾಜಕೀಯ ಪಕ್ಷಗಳ ಬಾವುಟ ಧರ್ಮಾಧಾರಿತ ಆಗಿರಬಾರದು ಅನ್ನೋ ವಾದ ಹಲವು ಪಕ್ಷಗಳ ತಲೆಕೆಡಿಸಿದೆ. ದೇಶದ ರಾಜಕೀಯ ಬೆಳವಣಿಗೆ, ವಿವಾದ ಸೇರಿದಂತೆ ಈ ಬಾರಿಯ ಇಂಡಿಯಾ ಗೇಟ್ ಅಂಕಣದಲ್ಲಿ ರೋಚಕ ಸಂಗತಿ

ಹಿಂದಿವಾಲಗಳ ಕನ್ನಡದ ನಮಸ್ಕಾರ..!
ಕನ್ನಡ ನೆಲದಲ್ಲಿ ಹಿಂದಿ ಹೇರಿಕೆ ಕುರಿತು ಪರ-ವಿರೋಧ ಮಾತುಗಳು ಚರ್ಚೆಯಾಗುತ್ತಲೇ ಇವೆ. ಅದರೊಟ್ಟಿಗೆ ರಾಜಕೀಯ ನಾಯಕರ ಮಾತುಗಳು, ಇದೇ ಹೆಸರಲ್ಲಿ ರಾಷ್ಟ್ರೀಯತೆಯನ್ನು ಗುರಾಣಿಯಾಗಿ ಬಳಸಿಕೊಂಡಿದ್ದು ಎಲ್ಲವೂ ಕನ್ನಡಿಗರು ನೋಡಿ ಆಯ್ತು.

ಆದ್ರೆ ಈಗ ಎಲ್ಲಿ ಹೋದ್ರು ಕನ್ನಡದಲ್ಲಿ 'ನಮಸ್ಕಾರಗಳು' ಅನ್ನೋ ಪದಗಳು ಕೇಳಿ ಬರುತ್ತಿವೆ. ಇನ್ನು ಕನ್ನಡ ನೆಲದಲ್ಲಿ ಚುನಾವಣೆ ಕಾವು ಪಡೆದುಕೊಳ್ಳುತ್ತಿರುವ ಹೊತ್ತಲ್ಲಿ ದೆಹಲಿ ಸೇರಿ ಉತ್ತರ ಭಾರತದಿಂದ ಬರುವ ಯಾವುದೇ ನಾಯಕರು ಎಲ್ಲರಿಗೂ ನಮಸ್ಕಾರಗಳು ಎನ್ನುವ ಪದಗಳಿಂದಲೇ ಭಾಷಣ ಶುರು ಮಾಡುತ್ತಾರೆ.. ಅದು ಪ್ರಧಾನಿ ಮೋದಿ ಇರಲಿ, ಅಮಿತ್ ಶಾ ಅವರು ಇರಲಿ ಅವರ ಭಾಷಣದ ಆರಂಭ ಮತ್ತು ಅಂತ್ಯದ ಪದಗಳು ಕನ್ನಡದ ಪದಗಳಾಗಿರುತ್ತವೆ.

India Gate: ಭಾರತದ ಭವಿಷ್ಯದ 'ಟ್ಯಾಬ್ಲೆಟ್‌', ಶತ್ರುಘ್ನ ಸಿನ್ಹಾ ಲೇಟ್‌ ಎಂಟ್ರಿ!

ಕನ್ನಡ ನಾಡಿನಲ್ಲಿ ರಾಜಕಾರಣಿಗಳ ಈ ಭಾಷಣ ಸರಿ. ಆದ್ರೆ ಹಿಂದಿ ನಾಡಿನಲ್ಲಿ ಕನ್ನಡದಲ್ಲಿ ನಮಸ್ಕಾರ, ಚನ್ನಾಗಿದ್ದೀರಾ ಅಂಥ ಸುದ್ದಿಗೋಷ್ಠಿ ಶುರುವಾದ್ರೆ ಪತ್ರಕರ್ತರು ಕೂಡ ಉಬ್ಬೇರಿಸಿನೋಡುವಂತೆ ಆಯ್ತು. ಇಷ್ಟಕ್ಕೂ ಇಂಥ ನಮಸ್ಕಾರಕ್ಕೆ ಸಾಕ್ಷಿಯಾಗಿದ್ದು ದೆಹಲಿ ರೈಲು ಭವನ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ವಿಭಾಗಕ್ಕೆ ದೊರತೆ ಅನುದಾನ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದರು. ಗೋಷ್ಠಿ ಆರಂಭಕ್ಕೆ ನಮಸ್ಕಾರ, ಚನ್ನಾಗಿದ್ದೀರಾ ಅಂತಲೇ ಶುರುಮಾಡಿದರು. ಹತ್ತು ನಿಮಿಷಗಳಲ್ಲಿ ಮುಗಿದ ಸುದ್ದಿಗೋಷ್ಠಿಯಲ್ಲಿ ಐದಾರು ಬಾರಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ರು. ಬಳಿಕ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ಅನುದಾನದ ಬಗ್ಗೆ ಮಾಹಿತಿ ಹಂಚಿಕೊಂಡು, ಎಲ್ಲರಿಗೂ ವಂದನೆಗಳು ಅಂತ ಕನ್ನಡದಲ್ಲಿ ಹೇಳಿ ಮುಗಿಸಿದರು. ಹಿಂದಿ ರಾಜಕಾರಣಿಗಳ ಕನ್ನಡ ಪ್ರೇಮದ ಹಿಂದಿ‌ನ ಮರ್ಮದ ಬಗ್ಗೆ ಇನ್ನೂ ತಿಳಿಯಬೇಕಿದೆ?

ಅಮೃತ್ಯ ಸೇನೆ ಬೆಂಬಲಕ್ಕೆ ನಿಂತು ಕೇಂದ್ರ ವಿರುದ್ಧ ಮಮತಾ ವಾಗ್ದಾಳಿ
ನೊಬೆಲ್ ಪ್ರಶಸ್ತಿ ವಿಜೇತೆ ಅಮೃತ್ಯ ಸೇನ್‌ಗೆ ಕೇಂದ್ರ ಸರ್ಕಾರ ಶಾಂತಿನಿಕೇತನದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಅನ್ನೋ ನೊಟೀಸ್ ನೀಡಿದೆ. ಆದರೆ ಈ ಘಟನೆ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದೆ. ಭೀರ್‌ಭೂಮ್ ಜಿಲ್ಲೆಗೆ ತೆರಳಿದ ಮಮತಾ ಬ್ಯಾನರ್ಜಿ, ಅಮೃತ್ಯ ಸೇನ್ ಭೇಟಿಯಾಗಿ ದಾಖಲೆ ಪತ್ರಗಳನ್ನು ನೀಡಿದ್ದಾರೆ. ಇಷ್ಟೇ ಅಲ್ಲ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಶ್ವಭಾರತಿ ಕ್ಯಾಂಪಸ್ ಇತ್ತೀಚೆಗೆ ನೋಟಿಸ್ ನೀಡಿತ್ತು. ವಿಶ್ವಭಾರತಿಯನ್ನು ರಬೀಂದ್ರನಾಥ್ ಠಾಗೂರೋ ಸ್ಥಾಪಿಸಿದ್ದರು. ಅಮೃತ್ಯ ಸೇನ್ ತಾಯಿ ಅಮೃತ ಸೇನ್ ಹಾಗೂ ಅಜ್ಜ ಕ್ಷಿತಿ ಮೋಹನ್ ಸೇನ್ ಕವಿ ರಬೀಂದ್ರನಾಥ್ ಠಾಗೂರ್ ಆತ್ಮೀಯರಾಗಿದ್ದರು. ಕ್ಷಿತಿ ಮೋಹನ್ ಸೇನ್ ವಿಶ್ವಭಾರತಿಯ ವೈಸ್ ಚಾನ್ಸಲರ್ ಆಗಿದ್ದರು. 1943ರಲ್ಲಿ ವಿಶ್ವಭಾರತಿ ಕ್ಯಾಂಪಸ್‌ನಲ್ಲಿ ಸೇನ್ ಕುಟುಂಬಕ್ಕೆ ಜಾಗ ನೀಡಲಾಗಿದೆ. ಕಂದಾಯ ಇಲಾಖೆಯ ದಾಖಲೆ ತೆಗೆದು ಸೇನ್ ಕುಟುಂಬಕ್ಕೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

From the India gate ರಾಹುಲ್ ಯಾತ್ರೆ ಒಳಗೆ ರಾಜಕೀಯ, ರಾಜಸ್ಥಾನ ಬಿಜೆಪಿ ಮದ್ವೆ ಆಮಂತ್ರಣ ತಲೆನೋವು!

ತಮಿಳುನಾಡಿನಲ್ಲಿ ಚಿಹ್ನೆ ರಾಜಕೀಯ
ತಮಿಳುನಾಡಿನಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಗುದ್ದಾಟ ತಣ್ಣಗಾಗಿದ್ದರೂ ನಿಂತಿಲ್ಲ. ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೀಗ ಆನ್‌ಲೈನ್ ಗ್ಯಾಂಬ್ಲಿಂಗ್ ಬಿಲ್‌ಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂದು ಆರೋಪಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸ್ಟಾಲಿನ್ ಸರ್ಕಾರ ಸಜ್ಜಾಗಿದೆ. ಇದರ ನಡುವೆ ತಮಿಳುನಾಡಿನಲ್ಲಿ ಪಕ್ಷದ ಚಿಹ್ನೆ ರಾಜಕೀಯ ನಡೆಯುತ್ತಿದೆ. ಎರಡು ಎಲೆ ಚಿಹ್ನೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಯಾರು ಅಖಾಡಕ್ಕಿಳಿಯುತ್ತಾರೋ ಅವರಿಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಆದರೆ ಎರಡು ಎಲೆ ಚಿಹ್ನೆ ಸಮಸ್ಯೆ ಎದುರಾಗಿದೆ. ಎಐಎಡಿಎಂಕೆ ಹೋಳಾಗಿರುವ ಕಾರಣ ಈ ಚಿಹ್ನೆಯಡಿ ಯಾರು ಸ್ಪರ್ಧಿಸಬೇಕು ಅನ್ನೋ ಗೊಂದಲ ಇದೀಗ ಪಕ್ಷದಲ್ಲಿ ಶುರುವಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಹೀಗಾಗಿ ರಾಜಕೀಯ ಚಟುವಟಿಕೆ ಜೋರಾಗಿದೆ.

ಬಾವುಟ ವಿವಾದ ಬಳಿಕ IUML‌ನಲ್ಲಿ ಮತ್ತೊಂದು ತಳಮಳ
ಯಾವುದೇ ರಾಜಕೀಯ ಪಕ್ಷಗಳು ಧರ್ಮಾಧಾರಿತ ಬಾವುಟ ಹೊಂದಿರಬಾರದು. ಇಂತಹ ಪಕ್ಷಗಳನ್ನು ನಿಷೇಧಿಸಬೇಕು ಅನ್ನೋ ಮನವಿ ವಿಚಾರಣೆ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ ಸಂಕಷ್ಟ ಹೆಚ್ಚಿಸಿದೆ. ಇದೀಗ ಇದರ ವಿರುದ್ಧ IUML ಅಫಿದವಿತ್ ಸಲ್ಲಿಸಿದೆ. IUMLಗೆ ಬಾವುಟ ಆತಂಕ ಒಂದಡೆಯಾದರೆ, ಇತ್ತ IUML ಒಳಗೆ ಬಂಡಾಯದ ಬಿಸಿ ಹೆಚ್ಚಾಗುತ್ತಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕುನ್ನಾಲಿಕುಟ್ಟಿ ಹೊಸ ಪದಾಧಿಕಾರಿಗಳ ರಚನೆಗೆ ಮುಂದಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಕಾನ್ಫರೆನ್ಸ್ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಇದಕ್ಕೂ ಮೊದಲೇ ಕಾನೂನುಬಾಹಿರವಾಗಿ ಹೊಸ ಕಮಿಟಿ ನೇಮಕ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಹೊಸ ಸಮಿತಿಯಲ್ಲಿ ಕೆಎಸ್ ಹಮ್ಜಾ, ಕೆಎಂ ಶಾಜಿ, ಪಿಎಂ ಸಾದಿಕಲಿಯನ್ನು ಹೊಸ ಸಮಿತಿಗೆ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು IUML‌ ಪಕ್ಷದ ಬಂಡಾಯ ಗುಂಪು ಪ್ರಶ್ನಿಸಿದೆ. ಎ ಸಲಾಂ ಕಾರ್ಯದರ್ಶಿಯಾಗಿ ಮುಂದುವರಿಯುತ್ತಿದ್ದಾರೆ. 

ಉತ್ತರ ಪ್ರದೇಶದಲ್ಲೂ ಕ್ರೆಡಿಟ್ ವಾರ್
ಉತ್ತರ ಪ್ರದೇಶ ಬಿಜೆಪಿ ನಾಯಕನ ಪುತ್ರಿಯ ಅದ್ಧೂರಿ ವಿವಾಹವನ್ನು ಲಖನೌನ ಜನೇಶ್ವರ ಮಿಶ್ರಾ ಪಾರ್ಕ್‌ನಲ್ಲಿ ಆಯೋಜಿಸಲಾಗಿತ್ತು. ಹಲವು ನಾಯಕರು ಈ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಈ ವಿವಾಹದ ಬೆನ್ನಲ್ಲೇ ಸಮಾಜವಾದಿ ಪಾರ್ಟಿ ಕ್ರೆಡಿಟ್ ವಾರ್ ಆರಂಭಿಸಿದೆ. ಇದು ಸಮಾಜವಾದಿ ಪಾರ್ಟಿ ಕಟ್ಟಿದ ಪಾರ್ಕ್. ಸಮಾಜವಾದಿ ಪಾರ್ಟಿ ಕಾಲದಲ್ಲಿ ಮಾಡಿದ ಅಭಿವೃದ್ಧಿಯಿಂದ ಇದೀಗ ಬಿಜೆಪಿ ನಾಯಕರು ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು. ಸಮಾಜವಾದಿ ಪಾರ್ಟಿ ವ್ಯಂಗ್ಯ ಬಿಜೆಪಿ ಕೆಲ ನಾಯಕರ ಅಸಧಾನಕ್ಕೆ ಕಾರಣಾಗಿದೆ. ಈ ಪಾರ್ಕ್ ಬಿಟ್ಟು ಇತರಡೆ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು ಅನ್ನೋ ಅಭಿಪ್ರಾಯ ಬಿಜೆಪಿಯಲ್ಲೇ ವ್ಯಕ್ತವಾಗಿದೆ.

India Gate ಸೊಸೆಯಂದಿರ ಪೈಪೋಟಿಗೆ ದೇವೇಗೌಡರು ಸುಸ್ತು, ಕಾಂಗ್ರೆಸ್‌ಗೆ ತಲೆನೋವಾದ ಗೆಹ್ಲೋಟ್ ಮಾತು!

ಹೊಸ ನಾಯಕನ ಹುಡುಕಾಟ
ಗುಜರಾತ್‌ನಲ್ಲಿ 40 ಕ್ಷೇತ್ರಗಳಲ್ಲಿ ಗುಜ್ಜರ್ ಸಮುದಾಯ ಪ್ರಾಬಲ್ಯ ಹೊಂದಿದೆ. ಗುಜರಾತ್ ಗುಜ್ಜರ್ ಸಮುದಾಯ ಕಾಂಗ್ರೆಸ್ ನಾಯಕರಿಗೆ ಬೆಂಬಲ ನೀಡುತ್ತಾ ಬಂದಿತ್ತು. ಆದರೆ ಕಾಂಗ್ರೆಸ್ ಮತಕ್ಕಾಗಿ ಗುಜ್ಜರ್ ಸಮುದಾಯ ಬಳಸಿಕೊಂಡು ಅಭಿವೃದ್ಧಿಯತ್ತ ಮುಖಮಾಡಲಿಲ್ಲ. ಇತ್ತ ಬಿಜೆಪಿಗೆ ಬೆಂಬಲ ನೀಡುತ್ತಿದ್ದ ಗುಜ್ಜರ್ ಸಮುದಾಯ ಇದೀಗ ಬಿಜೆಪಿ ಜೊತೆಗೂ ಮುನಿಸಿಕೊಂಡಿದೆ. ಇತ್ತೀಚೆಗೆ ಗುಜ್ಜರ್ ಸಮುದಾಯ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದರು. ಈ ಕಾರ್ಯಕ್ರಮಕ್ಕೆ ಗುಜ್ಜರ್ ಸಮುದಾಯದ ನಾಯಕರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಬಿಜೆಪಿ ವಿರುದ್ದ ಗುಜ್ಜರ್ ಸಮುದಾಯ ಮುನಿಸಿಕೊಂಡಿದೆ. ಹೀಗಾಗಿ ಗುಜ್ಜರ್ ಸಮುದಾಯ ಹೊಸ ನಾಯಕನ ಹುಡುಕಾಟದಲ್ಲಿದೆ.