India Gate: ಭಾರತದ ಭವಿಷ್ಯದ 'ಟ್ಯಾಬ್ಲೆಟ್‌', ಶತ್ರುಘ್ನ ಸಿನ್ಹಾ ಲೇಟ್‌ ಎಂಟ್ರಿ!

ಬಜೆಟ್‌ ದಿನ ಸಂಸತ್ತಿನಲ್ಲಿ ಬಹಳ ವಿಶೇಷ. ದೇಶಕ್ಕೆ ದಿಕ್ಕು ತೋರಿಸುವ ವಿಚಾರವಾಗಿರುವ ಕಾರಣ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಬಹಳ ಎಚ್ಚರಿಕೆಯಿಂದ ಬಜೆಟ್‌ ಮಂಡನೆಯನ್ನು ಅಲಿಸುತ್ತವೆ. ಈ ಬಾರಿಯ ಬಜೆಟ್‌ ದಿನ ಕೂಡ ಸಾಕಷ್ಟು ಸ್ವಾರಸ್ಯಗಳಿಗೆ ಸಾಕ್ಷಿಯಾಯಿತು.

budget 2023 interesting facts parliament Nirmala sitharaman tablet Shashi Tharoor Shatrughan Sinha Entry san

ನವದೆಹಲಿ (ಫೆ.2): ದೇಶವನ್ನು ಡಿಜಿಟಲೀಕರಣ ಮಾಡುವ ಯೋಜನೆ ನಿಜಕ್ಕೂ ಪ್ರಾರಂಭವಾಗಿದೆ ಎಂದು ಕಾಣುತ್ತದೆ. ಬಜೆಟ್‌ ದಿನ ಹಣಕಾಸು ಸಚಿವರು ಪೇಪರ್‌ನ ಮೇಲೆ ಮುದ್ರಿತವಾಗಿದ್ದ ಬಜೆಟ್‌ನ ಅಂಶಗಳನ್ನು ಓದುವ ದಿನಗಳು ಬಹುತೇಕವಾಗಿ ಮುಕ್ತಾಯವಾದಂತೆ ಕಾಣುತ್ತಿದೆ. ಡಿಜಿಟಲ್‌ ಇಂಡಿಯಾದ ಹಾದಿಯಲ್ಲಿರುವ ಭಾರತಕ್ಕೆ ತಾವೇ ಮಾಸ್ಕಾಟ್‌ ಅಥವಾ ಲಾಂಛನದ ರೀತಿ ಎಂದನಿಸಿಕೊಳ್ಳುವ ರೀತಿಯಲ್ಲಿ ನಿರ್ಮಲಾ ಸೀತಾರಾಮನ್‌ ಈ ಬಾರಿಯ ಬಜೆಟ್‌ನ ಸಂಪೂರ್ಣ ಪಾಠವನ್ನು ಟ್ಯಾಬ್ಲೆಟ್‌ನಲ್ಲಿ ಓದಿದರು. ನಿರ್ಮಲಾ ಸೀತಾರಾಮನ್‌ ಹೊರತಾಗಿ ಸದನದಲ್ಲಿ ತನ್ನ ಐಪಾಡ್‌ ಟ್ಯಾಬ್ಲೆಟ್‌ನಲ್ಲಿಯೇ ಸಂಪೂರ್ಣವಾಗಿ ಮುಳುಗಿಹೋಗಿದ್ದ ಇನ್ನೊಬ್ಬ ವ್ಯಕ್ತಿ ಏನಾದರೂ ಇದ್ದರೆ ಅದು ರಾಹುಲ್‌ ಗಾಂಧಿ ಮಾತ್ರ. ಅವರು ಬಜೆಟ್‌ನಲ್ಲಿ ಅಮೂಲಾಗ್ರವಾಗಿ ಓದುತ್ತಿರಲಿಲ್ಲ. ಭಾರೀ ಪಠ್ಯಗಳನ್ನು ಹೊಂದಿದ್ದ ಬಜೆಟ್‌ನ ಪಿಡಿಎಫ್‌ ಫೈಲ್‌ಗಳನ್ನು ಸ್ಕ್ರೋಲ್‌ ಮಾಡುತ್ತಿದ್ದರು. ಆದರೆ, ಅವರ ಸ್ಮಾರ್ಟ್‌ ಫೋನ್‌ ಮೇಜಿನ ಮೇಲೆಯೇ ಇತ್ತು ಎನ್ನುವುದು ಗ್ಯಾಲರಿಯಿಂದ ಕಾಣಿಸಿತು. ಆದರೆ, ಬಜೆಟ್‌ ಮಂಡನೆ ಆಗುತ್ತಿದ್ದ ಹೆಚ್ಚಿನ ಸಮಯದಲ್ಲಿ ಅವರು ಸ್ಮಾರ್ಟ್‌ ಫೋನ್‌ ಮುಟ್ಟಿರಲಿಲ್ಲ.

ಹಾಗಂತ ಸದನದಲ್ಲಿ ಸ್ಮಾರ್ಟ್‌ ಫೋನ್‌ ಬೇರೆ ಕಡೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರಲಿಲ್ಲ ಅಂತೇನಲ್ಲ. ಹಣಕಾಸು ಸಚಿವರು ತಮ್ಮ ಭಾಷಣವನ್ನು ಓದುತ್ತಿರುವಾಗಲೂ ಹಲವಾರು ಸಂಸದರು ತಮ್ಮ ಸ್ಮಾರ್ಟ್‌ಫೋನ್‌ಅನ್ನು ಬಳಸುವಲ್ಲಿಯೇ ಕಾರ್ಯನಿರತರಾಗಿದ್ದರು.

ಕದ್ದುಮುಚ್ಚಿ ಫೋನ್‌ ತಂದವರು: ಇನ್ನು  ಸಂದರ್ಶಕರ ಗ್ಯಾಲರಿಯಲ್ಲಿ ಕೆಲವು ಧೈರ್ಯಶಾಲಿಗಳು ಅಥವಾ ಬುದ್ಧಿವಂತರು ಕೂಡ ಇದ್ದರು. ಅವರು ತಮ್ಮ ಫೋನ್‌ಗಳಲ್ಲಿ ನಿಯಮಗಳಿಗೆ ವಿರುದ್ಧವಾಗಿ ``ಸ್ಮಗ್ಲಿಂಗ್'' ಮಾಡಿದ್ದೂ ಕಂಡುಬಂತು. ಮೆಸೇಜ್‌ ಬಂದ ಟೋನ್‌ಗಳು ಬಜೆಟ್‌ ಮಂಡನೆ ಮಾಡುವ ಸಮಯದಲ್ಲಿ ನಿಯಮಿತವಾಗಿ ಕೇಳುತ್ತಿತ್ತು. ಇನ್ನೂ ಕೆಲವರ ಫೋನ್‌ಗಳು ಕೂಡ ರಿಂಗ್‌ ಆದವು. ಸದನದ ಮಾರ್ಷಲ್‌ಗಳು ಇವುಗಳನ್ನು ಕೇಳಿದ್ದರೆ ಅಥವಾ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದ್ದರೆ ಏನಾಗುತ್ತಿತ್ತು ಎನ್ನುವ ಆಶ್ಚರ್ಯವೂ ಕಾಡಿತು. ಹಾಗಾಗಿ ಇವರ ಸಾಹಸವನ್ನು ವಿವರಿಸಲು ನಾನು ಧೈರ್ಯಶಾಲಿ ಎನ್ನುವ ಪದ ಬಳಸಿದ್ದೇನೆ. ಏಕೆಂದರೆ, ಸಂದರ್ಶಕರ ಗ್ಯಾಲರಿಯಲ್ಲಿದ್ದವರೊಬ್ಬರು ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದೆ. ಇಂಥ ಸಾಹಸವನ್ನು ಸದನದ ಒಳಗಿರುವ ಸಂಸದರಾಗಲಿ ಮಂತ್ರಿಗಳಾಗಲಿ ಕೂಡ ಮಾಡಲು ಧೈರ್ಯ ತೋರುವುದಿಲ್ಲ..

ಬಜೆಟ್ ಭಾಷಣ ಪ್ರಾರಂಭವಾಗುವ ಮೊದಲು ಆಡಳಿತ ಪಕ್ಷದವರ ಬೆಂಚುಗಳು ಬಹುತೇಕ ಭರ್ತಿಯಾಗಿದ್ದವು, ವಿರೋಧ ಪಕ್ಷದ ಸದಸ್ಯರು ಕೊನೇ ಹಂತದಲ್ಲಿ ಒಳಬರುವ ಪ್ರಯತ್ನ ಮಾಡುತ್ತಿದ್ದರು. ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಇತರ ಆಡಳಿತ ಪಕ್ಷದ ಪ್ರಮುಖರು 10.57 ಕ್ಕೆ ಪ್ರಧಾನಿ ಅವರು ಒಳಗೆ ಬರುವ ಮುನ್ನವೇ ನಿರೀಕ್ಷೆಯಿಂದ ಕುಳಿತಿದ್ದರು. ಆದರೆ ಅಧಿವೇಶನ ಪ್ರಾರಂಭವಾಗುವ ಒಂದು ನಿಮಿಷದ ಮೊದಲು ಕೇವಲ 10.59 ಕ್ಕೆ ಸೋನಿಯಾ ಗಾಂಧಿ ಅವರು ಒಳಗೆ ನಡೆದು ಮುಂದಿನ ಸಾಲಿನಲ್ಲಿ ಫಾರೂಕ್ ಅಬ್ದುಲ್ಲಾ ಅವರ ಪಕ್ಕದಲ್ಲಿ ಒಂದು ಕುಳಿತುಕೊಂಡಿದ್ದರು.

ಶಾಟ್‌ಗನ್‌ ಸಿನ್ಹಾ: ಸದನಕ್ಕೆ ಇಬ್ಬರು ವ್ಯಕ್ತಿಗಳು ಕೂಡ ಲೇಟ್‌ ಎಂಟ್ರಿ ಪಡೆದುಕೊಂಡರು. ಇಬ್ಬರೂ ಕೂಡ ಭಿನ್ನ ಶೈಲಿಯಲ್ಲಿ ಎಂಟ್ರಿ ನೀಡಿದರು. ಶಶಿ ತರೂರ್‌ ಒಳ ಬಂದಾಗ, ಅವರು ಜನಪ್ರಿಯ ಸಂಸದರು ಎನ್ನುವ ಕಾರಣಕ್ಕಾಗಿ ಕೆಲವರು ಅವರತ್ತ ನೋಡಿದರು. ಆದರೆ, ಅಚ್ಚರಿ ಎನ್ನುವಂತೆ ಶತ್ರುಘ್ನ ಸಿನ್ಹಾ, ಬಹಳ ತಡವಾಗಿ ಅಂದರೆ 11.53ಕ್ಕೆ ಸದನಕ್ಕೆ ಆಗಮಿಸಿದರು. ಆದರೆ, ಸದನದಲ್ಲಿದ್ದ ಯಾರೊಬ್ಬರಿಂದಲೂ ಇದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಯಾರಾದರೂ ನಾನು ಬಂದಿದ್ದನ್ನು ಗಮನಿಸುತ್ತಾರೆಯೇ ಎಂದು ಅತ್ತಿತ್ತ ಒಮ್ಮೆ ನೋಡಿದರು. ಆದರೆ, ಯಾರೂ ಗಮನವನ್ನೇ ನೀಡಲಿಲ್ಲ. ಬಳಿಕ ತಮ್ಮ ಸ್ಥಾನದಲ್ಲಿ ಕುಳಿತುಕೊಂಡು ಮತ್ತೊಮ್ಮೆ ಅತ್ತಿತ್ತ ನೋಡಿದರು. ಆಗಲೂ ಯಾರೂ ಪ್ರತಿಕ್ರಿಯೆ ನೀಡಲಿಲ್ಲ.

Union Budget : ಮಧ್ಯಮ ವರ್ಗಕ್ಕೆ 'ಅಮೃತ' ಬಜೆಟ್: ಕರ್ನಾಟಕಕ್ಕೆ ಭಾರೀ ಗಿಫ್ಟ್

ಯಾರಿಗೂ ಗೊತ್ತಾಗಬಾರದೆಂದು ಶಶಿ ತರೂರ್‌ ಅವರು ಮಾಡಿದ ಕೆಲಸ ಸಂದರ್ಶಕರ ಗ್ಯಾಲರಿಯಲ್ಲಿದ್ದವರಿಗೆ ಗೊತ್ತಾಯಿತು. ಸದನದ ಒಳಗೆ ಬರುವಾಗ ತಿನ್ನಲು ಏನೋ ತೆಗೆದುಕೊಂಡು ಬಂದಿದ್ದ ತರೂರ್‌, ಅದನ್ನು ತಿಂದು, ಅದರ ಕವರ್‌ಅನ್ನು ಅವರ ಪಕ್ಕದ ಸೀಟ್‌ನಲ್ಲಿದ್ದ (ಖಾಲಿ ಇದ್ದ) ಮ್ಯಾಗಜೀನ್ ಪಾಕೆಟ್‌ನಲ್ಲಿ (ಏರೋಪ್ಲೇನ್ ಮುಂಭಾಗದ ಪಾಕೆಟ್‌ನಲ್ಲಿ ಇರುವ ಮಾದರಿಯದ್ದು) ಯಾರಿಗೂ ಗೊತ್ತಾಗದ ರೀತಿ ಹಾಕಿದರು.  ಪ್ರಾಯಶಃ, ತಾನು ಮಾಡಿದ್ದು ನೇರವಾಗಿ ತನ್ನ ಮೇಲ್ಗಡೆ ಸಾಲಿನಲ್ಲಿ ಕುಳಿತಿರುವ ಹಲವಾರು ವ್ಯಕ್ತಿಗಳಿಗೆ ಕಾಣುತ್ತದೆ ಎನ್ನುವ ಅಂದಾಜು ಅವರಿಗೆ ಇದ್ದಿರಲಿಲ್ಲ.

ಹೊಸ ಹಾಗೂ ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸವೇನು..?

ಮೋದಿ, ಮೋದಿ ವರ್ಸಸ್‌ ಭಾರತ್‌ ಜೋಡೋ: ಹಣಕಾಸು ಸಚಿವರ ಭಾಷಣದ ಸಮಯದಲ್ಲಿ ಸರ್ಕಾರದ ಅಥವಾ ರಾಷ್ಟ್ರದ ಕೆಲವು ಪ್ರಮುಖ ಸಾಧನೆಗಳು ಬಂದಾಗಲೆಲ್ಲಾ ಆಡಳಿತ ಪಕ್ಷದವರ ಬೆಂಚುಗಳಲ್ಲಿ ಇದ್ದವರು ಈಗಾಗಲೇ ಪರಿಚಿತವಾಗಿರುವ ಮೋದಿ-ಮೋದಿ ಎನ್ನುವ ಘೋಷಣೆಯನ್ನು ಕೂಗಿದರೆ, ವಿರೋಧ ಪಕ್ಷದ ಸದಸ್ಯರು, ಮುಖ್ಯವಾಗಿ ಕಾಂಗ್ರೆಸ್, ತಕ್ಷಣವೇ ಭಾರತ್ ಜೋಡೋ ಎಂದು ಘೋಷಣೆ ಕೂಗಲು ಆರಂಭಿಸುತ್ತಿದ್ದವು. ಉಳಿದ ಪ್ರತಿಪಕ್ಷಗಳು ತನ್ನ ಘೋಷಣೆಗೆ ಕೈಜೋಡಿಸುತ್ತದೆ ಎಂದು ಅವರು ನಿರೀಕ್ಷೆ ಮಾಡಿದರೂ, ಉಳಿದವರು ಇದನ್ನು ನೋಡುತ್ತಾ ಮುಗುಳ್ನಕ್ಕಿದ್ದು ಬಿಟ್ಟರೆ ಬೇರೇನನ್ನೂ ಮಾಡಲಿಲ್ಲ.

Latest Videos
Follow Us:
Download App:
  • android
  • ios