2016ರಿಂದ 2020ರ ವರೆಗೆ ದೇಶದಲ್ಲಿ 3,400 ಕೋಮುಗಲಭೆ 2.76 ಲಕ್ಷ ಗಲಭೆ ಪ್ರಕರಣಗಳು ದಾಖಲು ದೇಶದಲ್ಲಿನ ಗಲಭೆ ಪ್ರಕರಣದ ಸಂಪೂರ್ಣ ಮಾಹಿತಿ

ನವದೆಹಲಿ(ಮಾ.30): 2016ರಿಂದ 2020ರ ವರೆಗೆ ದೇಶದಲ್ಲಿ 3,400 ಕೋಮುಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ತಿಳಿಸಿದ್ದಾರೆ. ಜೊತೆಗೆ ಈ ಅವಧಿಯಲ್ಲಿ ದೇಶದಲ್ಲಿ 2.76 ಲಕ್ಷ ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

2020 ರಲ್ಲಿ 857, 2019ರಲ್ಲಿ 438, 2018 ರಲ್ಲಿ 512, 2017ರಲ್ಲಿ 723 ಮತ್ತು 2016ರಲ್ಲಿ 869 ಕೋಮು ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.ಇನ್ನು ಇತರ ಗಲಭೆ ಪ್ರಕರಣ ಬಗ್ಗೆ ಮಾಹಿತಿ ನೀಡಿರುವ ಅವರು. 2020ರಲ್ಲಿ 51,606, 2019ರಲ್ಲಿ 45,985, 2018ರಲ್ಲಿ 57,828, 2017ರಲ್ಲಿ 58,880 ಮತ್ತು 2016ರಲ್ಲಿ 61,974 ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.

Siddaramaiah vs Hindutva ಮೋದಿ ಸರ್ಕಾರದಿಂದ ಕೋಮುವಾದ ಸೃಷ್ಟಿ, ಗುಡುಗಿದ ಸಿದ್ದರಾಮಯ್ಯ!

ಧರ್ಮ ಸಂಘರ್ಷಕ್ಕೆ ಮೂಲ ಕಾರಣ ಸಿದ್ದು: ಎಚ್‌ಡಿಕೆ ಕಿಡಿ
ರಾಜ್ಯದಲ್ಲಿ ಶಾಲಾ ಮಟ್ಟದಲ್ಲಿ ಧಾರ್ಮಿಕ ಘರ್ಷಣೆ ಹುಟ್ಟು ಹಾಕಿ, ನಂತರ ಜಾತ್ರಾ ಮಹೋತ್ಸವದ ಮಳಿಗೆಗಳ ವಿಚಾರದಲ್ಲೂ ಧರ್ಮ ಸಂಘರ್ಷ ಸೃಷ್ಟಿಸಿಸುವ ಕೆಲ​ಸ​ವನ್ನು ರಾಜ್ಯ ಸರ್ಕಾರ ಮಾಡುತ್ತಿ​ದೆ. ರಾಜ್ಯ ಇಂದು ಈ ರೀತಿಯ ಪರಿ​ಸ್ಥಿತಿ ಎದು​ರಿ​ಸಲು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವ​ರೇ ಮೂಲ ಕಾರಣ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಆರೋ​ಪಿ​ಸಿ​ದ​ರು.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯವನ್ನು ಕೋಮುದ್ವೇಷದಿಂದ ಉಳಿಸಬೇಕೆಂಬ ದೃಷ್ಟಿ​ಯಿಂದ ಇಷ್ಟ​ವಿ​ಲ್ಲ​ದಿ​ದ್ದ​ರೂ ಕಾಂಗ್ರೆಸ್‌ನವರ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿ​ಸಲು ಒಪ್ಪಬೇಕಾಯಿತು. ನಂತರ ನಡೆದಿದ್ದೆಲ್ಲಾ ರಾಜ್ಯದ ಜನತೆಗೆ ತಿಳಿದಿದೆ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಕೋಮುಗಲಭೆಗಳನ್ನು ಸೃಷ್ಟಿಸಲು ಹೊರಟಿವೆ. ಈ ಪಕ್ಷಗಳು ಸಮಾಜದಲ್ಲಿ ಸಾಮರಸ್ಯ ಕದಡಿ ಅಮಾಯಕ ಮಕ್ಕಳನ್ನು ಬಲಿ ಕೊಡಲು ಹೊರಟಿದ್ದಾರೆ ಎಂದರು.

ಧರ್ಮಾಂಧರು ಸಮಾನತೆ ಹಕ್ಕು ಮರೆತಿದ್ದಾರೆ: ಕಅಪ್ರಾ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ವಾಗ್ದಾಳಿ

150 ಜನರ ವಿರುದ್ಧ ಪ್ರಕರಣ
ನರಗುಂದ ಪಟ್ಟಣದಲ್ಲಿ ನ. 27ರಿಂದ ಕೋಮು ಸಂಘರ್ಷದ ಘಟನೆಗಳು ನಡೆಯುತ್ತಿದ್ದು, ಸೋಮವಾರ ನಡೆದ ಕೊಲೆ ಪ್ರಕರಣ ಸೇರಿದಂತೆ 6 ಪ್ರಕರಣ ದಾಖಲಾಗಿವೆ. ಎರಡೂ ಕೋಮು ಸೇರಿದಂತೆ 150 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಶಿವಪ್ರಕಾಶ್‌ ದೇವರಾಜು ಹೇಳಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕೋಮಿನ ಕಡೆಯಿಂದ ಪ್ರಚೋದನಕಾರಿ ಚಟುವಟಿಕೆ ನಡೆಯುತ್ತಿವೆ. ಪದವಿಪೂರ್ವ ಹಾಗೂ ಪದವಿ ಹಂತದ ವಿದ್ಯಾರ್ಥಿಗಳನ್ನು ಇದಕ್ಕೆ ಬಳಸಿಕೊಳ್ಳುವುದು ಕಂಡುಬಂದಿದೆ. ಈ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಪಟ್ಟಣದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಇಬ್ಬರು ಡಿಎಸ್ಪಿ, ಐವರು ಇನ್‌ಸ್ಪೆಕ್ಟರ್‌, 6 ಸಬ… ಇನ್‌ಸ್ಪೆಕ್ಟರ್‌ ಹಾಗೂ 4 ಡಿಆರ್‌ ತಂಡಗಳನ್ನು ನೇಮಕ ಮಾಡಲಾಗಿದೆ. 1 ಕೆಎಸ್‌ಆಪಿರ್‌ಗೆ ವಿನಂತಿ ಮಾಡಲಾಗಿದೆ. ಮುಂದೆ ಕೋಮುಗಲಭೆ ನಡೆಯದಂತೆ ನೋಡಿಕೊಳ್ಳಲಾಗುವುದು. ಘಟನೆಗೆ ಸಂಬಂಧಿಸಿದಂತೆ ಇನ್ನು ಹಲ​ವ​ರನ್ನು ಬಂಧಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಡಿಎಸ್ಪಿ ಶಂಕರ ರಾಗಿ ಇದ್ದರು.

ಕೋಮುಗಲಭೆ: ಯತ್ನಾಳ ಸೇರಿ 134 ಜನ ನಿರ್ದೋಷಿ
ನಗರದಲ್ಲಿ 2014ರ ಮೇ 26ರಂದು ನಡೆದಿದ್ದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. 2014ರ ಮೇಲೆ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಮಯದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಮೆರವಣಿಗೆ ಏರ್ಪಡಿಸಿದ್ದರು. ಈ ಮೆರವಣಿಗೆ ಗಾಂಧಿ ವೃತ್ತ ತಲುಪುತ್ತಿದ್ದಂತೆಯೇ ಕಲ್ಲು ತೂರಾಟ, ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಕೋಮುಗಳ ಹಲವಾರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ತನ್ನ ತೀರ್ಪು ಪ್ರಕಟಿಸಿದೆ.