ದೇಶಿಯ ಸಬ್‌ಮರೀನ್‌ ನಿರ್ಮಾಣ ಯೋಜನೆಯಿಂದ ಫ್ರಾನ್ಸ್‌ ಹೊರಗೆ-ಪ್ರಧಾನಿಯ ಫ್ರಾನ್ಸ್‌ ಭೇಟಿಗೂ ಮುನ್ನಾದಿನ ನಿರ್ಧಾರ ಪ್ರಕಟ-ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲ   

ನವದೆಹಲಿ(ಮೇ.04): ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಭಾರತೀಯ ನೌಕಾಪಡೆಗಾಗಿ ದೇಶೀಯವಾಗಿ 6 ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಪಿ-751ಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಫ್ರಾನ್ಸ್‌ ಕಂಪನಿ ನೇವಲ್‌ ಗ್ರೂಪ್‌ ಮಂಗಳವಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ಗೆ ಭೇಟಿ ನೀಡಿ, ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್‌ ಮಾಕ್ರೋನ್‌ ಜೊತೆ ಮಾತುಕತೆ ನಡೆಸುವ ಒಂದು ದಿನದ ಮೊದಲು ಕಂಪನಿ ಈ ನಿರ್ಧಾರ ಪ್ರಕಟಿಸಿದೆ.

ಕಳೆದ ಜೂನ್‌ನಲ್ಲಿ ರಕ್ಷಣಾ ಸಚಿವಾಲಯವು ಪಿ-751 ಯೋಜನೆಯನ್ನು ಘೋಷಿಸಿ ಎಐಪಿ ಮಾದರಿಯ ಜಲಾಂತರ್ಗಾಮಿ ನೌಕೆಗಳ ಎರಡು ಭಾರತೀಯ ಕಂಪನಿಗಳಾದ ಲಾರ್ಸೆನ್‌ ಹಾಗೂ ಟೊರ್ಬೊಗೆ ಗುತ್ತಿಗೆ ನೀಡಿತ್ತು. ಈ ಕಂಪನಿಗಳು ಫ್ರಾನ್ಸ್‌, ಜರ್ಮನಿ, ಸ್ಪೇನ್‌, ದಕ್ಷಿಣ ಕೊರಿಯಾ ಹಾಗೂ ರಷ್ಯಾದ ನೌಕಾ ನಿರ್ಮಾಣ ಕಂಪನಿಗಳೊಂದಿಗೆ ಸಹಭಾಗಿತ್ವದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಿದ್ದರು.

6 ದೇಶೀ ಸಬ್‌ಮರೀನ್‌ ನಿರ್ಮಾಣಕ್ಕೆ ನಿರ್ಧಾರ!

‘ಭಾರತ ಜಲಾಂತರ್ಗಾಮಿ ನೌಕೆಗಳನ್ನು ಎಐಪಿ ವ್ಯವಸ್ಥೆಯಡಿಯಲ್ಲಿ ತಯಾರಿಸಲು ಯೋಜಿಸಿದ್ದು. ಇವು ನೀರಿನಡಿಯಲ್ಲೇ ಹೆಚ್ಚಿನ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಫ್ರಾನ್ಸ್‌ನ ನೌಕಾಪಡೆಗಳು ಎಐಪಿ ವ್ಯವಸ್ಥೆಯನ್ನು ಬಳಸುವುದಿಲ್ಲ. ಹೀಗಾಗಿ ಕೇಂದ್ರದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ಯೋಜನೆಯಿಂದ ಹೊರ ಬರುತ್ತಿದ್ದೇವೆ’ ಫ್ರೆಂಚ್‌ ಕಂಪನಿ ಸ್ಪಷ್ಟಪಡಿಸಿದೆ.

ಸ್ವದೇಶಿ ಸಬ್‌ಮರೀನ್‌ ಐಎನ್‌ಎಸ್‌ ವೇಲಾ ನೌಕಾಪಡೆಗೆ ಸೇರ್ಪಡೆ
ಸ್ವದೇಶಿ ನಿರ್ಮಿತ ಅತ್ಯಾಧುನಿಕ ಸಬ್‌ಮರೀನ್‌ ಐಎನ್‌ಎಸ್‌ ವೇಲಾ ಗುರುವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಕಲ್ವರಿ ವರ್ಗದ ಜಲಾಂತರ್ಗಾಮಿ ಪ್ರಾಜೆಕ್ಟ್-75 ಅಡಿಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿರುವ ಜಲಾಂತರ್ಗಾಮಿ ನೌಕೆಗಳಲ್ಲಿ ಇದು ನಾಲ್ಕನೇಯದ್ದಾಗಿದೆ.ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ ಸಿಂಗ್‌ ಐಎನ್‌ಎಸ್‌ ವೇಲಾ ವನ್ನು ಲೋಕಾರ್ಪಣೆಗೊಳಿಸಿ ಆಧುನಿಕ ಶಸ್ತ್ರಾಸ್ತ್ರ ಹಾಗೂ ಸೆನ್ಸಾರ್‌ಗಳನ್ನು ಹೊಂದಿದ್ದು ಎಲ್ಲ ರೀತಿಯ ಜಲಾಂತರ್ಗಾಮಿ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮಥ‚್ರ್ಯವನ್ನು ವೇಲಾ ಹೊಂದಿದೆ. ಹಿಂದೂ ಮಹಾಸಾಗರದ ಕಡಲತೀರದಲ್ಲಿ ನಮ್ಮ ವಿರೋಧಿಗಳ ಕಾರ್ಯಾಚರಣೆಗಳಿಗೆ ವೇಲಾ ಪ್ರಬಲ ತಡೆಯೊಡ್ಡಲಿದೆ ಎಂದರು. ಪ್ರಾಜೆಕ್ಟ್ 75 ಅಡಿಯಲ್ಲಿ ಐಎನ್‌ಎಸ್‌ ಕಲ್ವರಿ, ಐಎನ್‌ಎಸ್‌ ಖಂಡೇರಿ ಹಾಗೂ ಐಎನ್‌ಎಸ್‌ ಕರಂಜ್‌ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

SMART Missile ಸೂಪರ್‌ಸಾನಿಕ್‌ ಕ್ಷಿಪಣಿ ಆಧರಿತ ಟಾರ್ಪೆಡೋ ಪರೀಕ್ಷೆ ಪೂರ್ಣ ಯಶಸ್ವಿ!

ಬರಲಿವೆ 6 ದೇಶೀ ಸಬ್‌ಮರೀನ್‌
ಜಲಗಡಿಯಲ್ಲಿ ನೆರೆಯ ಚೀನಾದ ಸಾಮರ್ಥ್ಯ ವೃದ್ದಿ ಮತ್ತು ಸಾಮ್ರಾಜ್ಯ ವಿಸ್ತರಣಾ ತಂತ್ರಗಳು ಹೆಚ್ಚಾದ ಬೆನ್ನಲ್ಲೇ, ದೇಶೀಯವಾಗಿಯೇ 6 ಸಾಂಪ್ರದಾಯಿಕ ಸಬ್‌ಮರೀನ್‌ಗಳನ್ನು ನಿರ್ಮಿಸುವ ಮಹತ್ವದ ಯೋಜನೆಗೆ ರಕ್ಷಣಾ ಖರೀದಿ ಮಂಡಳಿ ಶುಕ್ರವಾರ ತನ್ನ ಅನುಮೋದನೆ ನೀಡಿದೆ.

ಭಾರತೀಯ ನೌಕಾ ಪಡೆಯನ್ನು ನೆರೆಯ ದೇಶಗಳ ನೌಕಾ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಪಿ-75 ಎಂದು ಹೆಸರಿಸಲಾದ ಈ ಯೋಜನೆಯಡಿ 12 ವರ್ಷಗಳ ಅವಧಿಯಲ್ಲಿ 6 ಸಬ್‌ಮರೀನ್‌ಗಳು ತಯಾರಾಗಲಿವೆ. ಸಬ್‌ಮರೀನ್‌ ಪೂರ್ಣಗೊಳ್ಳುವ ವೇಳೆಗಿನ ಬದಲಾವಣೆ, ಅದರಲ್ಲಿ ಅಳವಡಿಸಬೇಕಾದ ಶಸ್ತಾ್ರಸ್ತ್ರಗಳಿಗೆ ಅನುಗುಣವಾಗಿ ಒಟ್ಟು ತಯಾರಿಕಾ ವೆಚ್ಚದಲ್ಲೂ ಬದಲಾವಣೆ ಆಗಬಹುದಾಗಿದೆ ಎಂದು ಸರ್ಕಾರ ಹೇಳಿದೆ.

ಈ ಸಬ್‌ಮರೀನ್‌ಗಳನ್ನು ಎಲ್‌ ಆ್ಯಂಡ್‌ ಟಿ ಮತ್ತು ಸರ್ಕಾರಿ ಸ್ವಾಮ್ಯದ ಮಡಗಾಂವ್‌ ಡಾಕ್ಸ್‌ ಲಿ. ನಿರ್ಮಿಸಲಿವೆ. ಇವುಗಳಿಗೆ ಸಬ್‌ಮರೀನ್‌ ನಿರ್ಮಾಣದಲ್ಲಿ ನೆರವಾಗಲು ಈಗಾಗಲೇ ರೋಸ್‌ಬೋರೋನ್‌ಎಕ್ಟ್ಪೋರ್ಟ್‌ (ರಷ್ಯಾ), ದೇವೂ (ದಕ್ಷಿಣ ಕೊರಿಯಾ),ಟಿಎಂಸಿ (ಜರ್ಮನಿ), ನವಾಂಟಿಯಾ (ಸ್ಪೇನ್‌) ಮತ್ತು ನಾವಲ್‌ ಗ್ರೂಪ್‌ (ಫ್ರಾನ್ಸ್‌) ಮುಂದೆ ಬಂದಿವೆ.