ಭಾರತದಲ್ಲಿ ರಾಯಿಟರ್ಸ್‌ ಸುದ್ದಿ ಸಂಸ್ಥೆಯ ಎಕ್ಸ್‌ ಖಾತೆ ನಿರ್ಬಂಧದ ವಿಚಾರವಾಗಿ ಎಕ್ಸ್‌ ಪ್ರತಿಕ್ರಿಯಿಸಿದ್ದು, ‘ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಆತಂಕದಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಖಾತೆ ನಿಷೇಧಕ್ಕೆ ಬಾಧಿತರಾಗಿರುವವರು ಕಾನೂನು ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿದೆ.

ನ್ಯೂಯಾರ್ಕ್‌: ಭಾರತದಲ್ಲಿ ರಾಯಿಟರ್ಸ್‌ ಸುದ್ದಿ ಸಂಸ್ಥೆಯ ಎಕ್ಸ್‌ ಖಾತೆ ನಿರ್ಬಂಧದ ವಿಚಾರವಾಗಿ ಎಕ್ಸ್‌ ಪ್ರತಿಕ್ರಿಯಿಸಿದ್ದು, ‘ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಆತಂಕದಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಖಾತೆ ನಿಷೇಧಕ್ಕೆ ಬಾಧಿತರಾಗಿರುವವರು ಕಾನೂನು ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿದೆ.

ಈ ಬಗ್ಗೆ ಎಕ್ಸ್‌ನ ಗ್ಲೋಬಲ್‌ ಗವರ್ನಮೆಂಟ್‌ ಅಫೇರ್ಸ್‌ ಖಾತೆ ಸುದೀರ್ಘವಾದ ಪ್ರತಿಕ್ರಿಯೆ ನೀಡಿದೆ. ‘ರಾಯಿಟರ್ಸ್‌ ಮತ್ತು ರಾಯಿಟರ್ಸ್‌ ವರ್ಲ್ಡ್‌ ಸೇರಿ 2355 ಖಾತೆಗಳನ್ನು ಐಟಿ ಕಾಯ್ದೆಯ ಸೆಕ್ಷನ್‌ 69ಎ ಅಡಿಯಲ್ಲಿ ನಿರ್ಬಂಧಿಸುವಂತೆ ಜು.3, 2025ರಂದು ಭಾರತ ಆದೇಶ ಹೊರಡಿಸಿತು. ಇಲ್ಲವಾದಲ್ಲಿ ಕ್ರಿಮಿನಲ್‌ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

‘ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಯಾವುದೇ ಸಮರ್ಥನೆ ನೀಡದೆ ಒಂದು ಗಂಟೆ ಒಳಗಾಗಿ ಖಾತೆ ನಿರ್ಬಂಧಿಸುವಂತೆ ಆದೇಶಿಸಿತ್ತು. ಬಳಿಕ ಸಾರ್ವಜನಿಕರ ಒತ್ತಡದಿಂದಾಗಿ ನಿರ್ಬಂಧ ತೆಗೆಯುವಂತೆ ಸೂಚಿಸಿತು’ ಎಂದು ಹೇಳಿದೆ. ಇದರ ಜೊತೆಗೆ ಈ ರೀತಿಯ ನಿರ್ಬಂಧ ಆದೇಶದಿಂದಾಗಿ ಭಾರತದಲ್ಲಿ ಪತ್ರಿಕಾ ಸೆನ್ಸಾರ್‌ಶಿಪ್‌ ಬಗ್ಗೆ ತೀವ್ರ ಕಳವಳ ಹೊಂದಿದ್ದೇವೆ. ಲಭ್ಯವಿರುವ ಎಲ್ಲಾ ಕಾನೂನು ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಜೊತೆಗೆ ಈ ರೀತಿ ಖಾತೆ ನಿರ್ಬಂಧಕ್ಕೆ ಒಳಗಾಗಿರುವವರು ನ್ಯಾಯಾಲಯದ ಮೊರೆ ಹೋಗಲು ಸೂಚಿಸುತ್ತೇವೆ.’ ಎಂದು ಮನವಿ ಮಾಡಿದೆ.

ನಿರ್ಬಂಧಕ್ಕೆ ಆದೇಶಿಸಿಲ್ಲ: ರಾಯಿಟರ್ಸ್‌ ಸುದ್ದಿ ಸಂಸ್ಥೆಯ ಎಕ್ಸ್‌ ಖಾತೆಯನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು ಎಂಬ ಆರೋಪಕ್ಕೆ ಕೇಂದ್ರ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ‘ಜಾಗತಿಕ ಸುದ್ದಿ ಸಂಸ್ಥೆಯಾದ ರಾಯಟರ್ಸ್‌ನ ಖಾತೆಯನ್ನು ನಿರ್ಬಂಧಿಸುವಂತೆ ಭಾರತ ಆದೇಶ ಹೊರಡಿಸಿಲ್ಲ. ಬದಲಿಗೆ ಅನ್‌ಬ್ಲಾಕ್‌ಗೆ ಮನವಿ ಮಾಡಿದ್ದ ಸರ್ಕಾರ. ಇದು ಎಕ್ಸ್‌ನಲ್ಲಿನ ದೋಷವಾಗಿದೆ’ ಎಂದು ಹೇಳಿದೆ.

  • ಭಾರತದಲ್ಲಿ ರಾಯಿಟರ್ಸ್‌ ಸುದ್ದಿ ಸಂಸ್ಥೆಯ ಎಕ್ಸ್‌ ಖಾತೆ ನಿರ್ಬಂಧದ ವಿಚಾರ
  • ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಆತಂಕದಲ್ಲಿದೆ’ ಎಂದು ಕಳವಳ
  • ಖಾತೆ ನಿಷೇಧಕ್ಕೆ ಬಾಧಿತರಾಗಿರುವವರು ಕಾನೂನು ಪ್ರಕ್ರಿಯೆ ನಡೆಸುವಂತೆ ಒತ್ತಾಯ