ನೋಯ್ಡಾ(ಜ.12): ಕೇವಲ 251 ರೂಪಾಯಿಗೆ ಸ್ಮಾರ್ಟ್ ಪೋನ್. ಯಾರೂ ಊಹಿಸದ ರೀತಿಯಲ್ಲಿ ಐಡಿಯಾ ತೇಲಿಬಿಟ್ಟು ಜನರಿಗೆ ಆಸೆ ತೋರಿಸಿದ ರಿಂಗಿಂಗ್ ಬೆಲ್ ಕಂಪನಿಯ ಸಂಸ್ಥಾಪಕ ಮೋಹಿತ್ ಗೊಯೆಲ್ ಇದೀಗ ಅರೆಸ್ಟ್ ಆಗಿದ್ದಾರೆ. ಆದರೆ ಮೋಹಿತ್ ಗೋಯೆಲ್ ಈಗ ಅರೆಸ್ಟ್ ಆಗಿರುವುದು ಫ್ರೀಡಂ ಮೊಬೈಲ್ ಪ್ರಕರಣದಿಂದ ಅಲ್ಲ, ಬದಲಾಗಿ ಒಣ ಹಣ್ಣುಗಳ ವ್ಯಾಪಾರಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದಡಿಯಲ್ಲಿ ಅರೆಸ್ಟ್ ಆಗಿದ್ದಾರೆ.

251 ರು. ಮೊಬೈಲ್‌ ಕಂಪನಿ ಮಾಲೀಕ ಗೋಯೆಲ್‌ ಬಂಧನ

ನೋಯ್ಡಾ ಪೊಲೀಸಲು ಮೊಹಿತ್ ಗೋಯೆಲ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮೋಹಿತ್ ಗೋಯೆಲ್ ಫ್ರೀಡಂ ಮೊಬೈಲ್ ಬಳಿಕ, ದುಬೈ ಡ್ರೈ ಫ್ರೂಟ್ಸ್ ಹಾಗೂ ಸ್ಪೈಸ್ ಹಬ್ ಅನ್ನೋ ಕಂಪನಿ ತೆರೆದು, ಒಣ ಹಣ್ಣುಗಳ ವ್ಯಾಪಾರ ಆರಂಭಿಸಿದ್ದಾರೆ. ನೋಯ್ಡಾ ಸೆಕ್ಟರ್ 62 ಬಳಿ ಕಚೇರಿ ತೆರಿದು ವಹಿವಾಟು ನಡೆಸುತ್ತಿದ್ದರು. 

ಡ್ರೈಫ್ ಫ್ರೂಟ್ಸ್ ವ್ಯಾಪಾರದಲ್ಲೂ ಮೋಹಿತ್ ಗೋಯೆಲ್ ಮೋಸ ಮಾಡಿದ್ದಾರೆ. ಮೋಹಿತ್ ವಿರುದ್ಧ 40ಕ್ಕೂ ಹೆಚ್ಚು ದೂರು ದಾಖಲಾಗಿದೆ. ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಸೇರಿದಂತೆ ಹಲವು ರಾಜ್ಯಗಳ ಡ್ರೈ ಫ್ರೂಟ್ಸ್ ವ್ಯಾಪಾರಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಚೆಕ್ ಬೌನ್ಸ್, ಹಣ ವಂಚನೆ, ಪಾವತಿ ಮಾಡದೆ ಬಾಕಿ ಉಳಿಸಿಕೊಂಡ ಸೇರಿದಂತೆ ಹಲವು ಪ್ರಕರಣಗಳು ಮೋಹಿತ್ ಗೊಯೆಲ್ ಮೇಲಿದೆ. 

ದೂರುಗಳನ್ನು ಆಧರಿಸಿದ ಪೊಲೀಸರು ಮೋಹಿತ್ ಗೋಯೆಲ್ ಬಂಧಿಸಿದ್ದಾರೆ. ಇದೀಗ ಮೋಹಿತ್ ಗೋಯೆಲ್ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ.